Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Jewellery Prasadam ಈ ದೇವಾಲಯದಲ್ಲಿ ಚಿನ್ನ ಬೆಳ್ಳಿಯೇ ಪ್ರಸಾದ; ಭಕ್ತರಿಗೆ ಸಿಗತ್ತೆ ಚಿನ್ನಾಭರಣ!
ಪ್ರಮುಖ

Jewellery Prasadam ಈ ದೇವಾಲಯದಲ್ಲಿ ಚಿನ್ನ ಬೆಳ್ಳಿಯೇ ಪ್ರಸಾದ; ಭಕ್ತರಿಗೆ ಸಿಗತ್ತೆ ಚಿನ್ನಾಭರಣ!

Share
2 Min Read
SHARE

newsics.com

ಮಧ್ಯಪ್ರದೇಶದಲ್ಲಿರುವ ಮಹಾಲಕ್ಷ್ಮೀ ದೇವಾಲಯದಲ್ಲಿ ಚಿನ್ನ ಅಥವಾ ಬೆಳ್ಳಿಯನ್ನು ಪ್ರಸಾದದ ರೂಪದಲ್ಲಿ ನೀಡುತ್ತಾರೆ.
ಮಧ್ಯಪ್ರದೇಶದಲ್ಲಿರುವ ರತ್ನಗಿರಿ; ರತ್ಲಂನಲ್ಲಿರುವ ಈ ಮಹಾಲಕ್ಷ್ಮೀ ದೇವಾಲಯವು ಅತ್ಯಂತ ಸಂಪದ್ಭರಿತವಾಗಿದ್ದು, ವರ್ಷಪೂರ್ತಿ ಇಲ್ಲಿಗೆ ಚಿನ್ನ ಹಾಗೂ ಬೆಳ್ಳಿಯ ನಗ-ನಾಣ್ಯಗಳು ದೇಣಿಗೆಯ ರೂಪದಲ್ಲಿ ಬಂದು ಸೇರುತ್ತವೆ. ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯನ್ನು ನೀಡುವ ದೇಶದ ಏಕೈಕ ದೇವಾಲಯವೆಂದರೆ ರತ್ಲಂನ ಈ ಮಹಾಲಕ್ಷ್ಮೀ ದೇವಾಲಯವಾಗಿದೆ.

ಮಹಾಲಕ್ಷ್ಮೀ ಎಂದರೆ ಸಂಪತ್ತಿನ ದೇವತೆ. ಇದಕ್ಕೆ ಅನ್ವರ್ಥವೆಂಬಂತೆ ಇಲ್ಲಿ ಮಹಾಲಕ್ಷ್ಮೀಯನ್ನು ಸಾವಿರಾರು ಕೋಟಿಯ ನಗದು ಹಾಗೂ ಆಭರಣಗಳಿಂದ ಅಲಂಕರಿಸಲಾಗುತ್ತದೆ. ಈ ಅಲಂಕಾರವೇ ಚಿನ್ನ ಹಾಗೂ ಬೆಳ್ಳಿಯ ಬೆಟ್ಟದಂತೆ ಗೋಚರಿಸುತ್ತದೆ. ದೇಣಿಗೆಯ ರೂಪದಲ್ಲಿ ಬರುವ ಚಿನ್ನ ಹಾಗೂ ಬೆಳ್ಳಿಯನ್ನು ಇಲ್ಲಿಗೆ ಬರುವ ಭಕ್ತರಿಗೆ ದೀಪಾವಳಿಯ ಮೂರು ದಿನ ನೀಡಲಾಗುತ್ತದೆ. ಇಲ್ಲಿ ಸಿಗುವಂತಹ ಬೆಳ್ಳಿ ಬಂಗಾರವನ್ನು ಮನೆಯಲ್ಲಿ ತಂದಿಟ್ಟುಕೊಂಡು ಪೂಜಿಸಿದರೆ ಲಕ್ಷ್ಮೀ ನೆಲೆಸುತ್ತಾಳೆ ಎನ್ನುವ ನಂಬಿಕೆ ಇದೆ. ಹಾಗೇನೇ ಇಲ್ಲಿ ಪ್ರಸಾದ ರೂಪವಾಗಿ ನೀಡುವ ಚಿನ್ನ ಬೆಳ್ಳಿಯನ್ನು ಇತರ ಉಪಯೋಗಕ್ಕಾಗಿ ಬಳಸಬಾರದು.

ಹೂವಿನ ಬದಲು ಚಿನ್ನಾಭರಣ:

ಈ ಮಹಾಲಕ್ಷ್ಮೀ ದೇವಾಲಯದಲ್ಲಿ ದೀಪಾವಳಿಯ ಸಂದರ್ಭದಲ್ಲಿ ಧನ ತ್ರಯೋದಶಿಯಿಂದ ಆರಂಭವಾಗುವ ಈ ಉತ್ಸವವು ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ. ವಿಶೇಷವೆಂದರೆ ಈ ಐದೂ ದಿನಗಳು ದೇವಸ್ಥಾನವನ್ನು ಹೂವಿನಿಂದ ಅಲಂಕರಿಸುವುದಿಲ್ಲ, ಬದಲಾಗಿ ನಗದು ಹಾಗೂ ಆಭರಣಗಳಿಂದ ಸಿಂಗರಿಸಲಾಗುತ್ತದೆ.

ದೀಪೋತ್ಸವದಂದು ಈ ದೇವಸ್ಥಾನವು ಕುಬೇರನ ದೇವಸ್ಥಾನವಾಗಿ ಕಂಗೊಳಿಸುತ್ತದೆ. ಇಲ್ಲಿಗೆ ಬರುವ ಭಕ್ತರು ಆಭರಣ ಹಾಗೂ ನಗದನ್ನು ದೇವಿಗೆ ಅರ್ಪಣೆಯಾಗಿ ನೀಡುತ್ತಾರೆ. ಅದರಲ್ಲೂ ಮಹಿಳೆಯರು ಇಲ್ಲಿಗೆ ಚಿನ್ನವನ್ನು ನೀಡುವುದೇ ಹೆಚ್ಚು. ಇಲ್ಲಿಗೆ ಬರುವ ಭಕ್ತರು ಬರಿಗೈಯಲ್ಲಿ ಎಂದಿಗೂ ಮರಳುವುದಿಲ್ಲ, ಪ್ರಸಾದ ರೂಪದ ಯಾವುದೇ ವಸ್ತುವನ್ನು ಪಡೆದುಕೊಂಡೇ ತೆರಳುತ್ತಾರೆ.

ಮುಖ್ಯವಾಗಿ ದೀಪಾವಳಿಯಂದು ಭೇಟಿ ನೀಡುವ ವಿವಾಹಿತ ಮಹಿಳೆಯರಿಗೆ ಮಾತ್ರ ಚಿನ್ನ ಮತ್ತು ಬೆಳ್ಳಿಯ ಪ್ರಸಾದವನ್ನು ನೀಡಲಾಗುತ್ತದೆ.
ವರ್ಷದಲ್ಲಿ ಐದು ದಿನಗಳ ಕಾಲ ನಡಯುವ ಉತ್ಸವದಲ್ಲಿ ಹೊಸದಾಗಿ ಆಭರಣಗಳನ್ನು ಕೊಂಡವರೂ ಈ ದೇವಸ್ಥಾನಕ್ಕೆ ಬಂದು ಹೊಸ ಆಭರಣವನ್ನು ಧನತ್ರಯೋದಶಿಯಂದು ಪೂಜಾರಿಗೆ ನೀಡಿ, ಗರ್ಭಗುಡಿಯಲ್ಲೇ ಇಟ್ಟು ಮೂರು ದಿನ ಕಳೆದ ನಂತರ ಮತ್ತೆ ಪಡೆದುಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಸಂಪತ್ತು ವೃದ್ಧಿಯಾಗುವುದೆಂದು ಹೇಳಲಾಗುತ್ತದೆ. ಈ ಸಂಪ್ರದಾಯವು ದಶಕಗಳ ಹಿಂದಿನಿಂದಲೂ ಮುಂದುವರಿದುಕೊಂಡು ಬಂದಿದೆ.
ಹಿಂದೆ ಈ ಪ್ರದೇಶವನ್ನು ಆಳುತ್ತಿದ್ದ ರಾಜರುಗಳು ರಾಜ್ಯದ ಸಂಪತ್ತು ಅಭಿವೃದ್ಧಿಯಾಗಲೆಂದು ಈ ದೇವಾಲಯಕ್ಕೆ ಹಣವನ್ನು ನೀಡುತ್ತಿದ್ದರಂತೆ, ಈ ಪದ್ಧತಿ ಮುಂದುವರಿದು ಇದೀಗ ಭಕ್ತರು ಇಲ್ಲಿಗೆ ದೇಣಿಗೆಯ ರೂಪದಲ್ಲಿ ನಗದು ಹಾಗೂ ಆಭರಣವನ್ನು ಇಲ್ಲಿಗೆ ಅರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ಲಕ್ಷ್ಮೀಯು ಸದಾ ಕಾಲ ಮನೆಯಲ್ಲಿ ನೆಲೆಸುತ್ತಾಳೆ ಹಾಗೂ ಸಂಪತ್ತು, ಐಶ್ವರ್ಯ ಇನ್ನಷ್ಟು ವೃದ್ಧಿಯಾಗುವುದು ಎನ್ನುವುದು ಜನರ ನಂಬಿಕೆ.

ಈ ದೇವಾಲಯದ ಇನ್ನೊಂದು ಮುಖ್ಯ ಉದ್ದೇಶವೆಂದರೆ, ಬಡವರಿಗೆ ಸಹಾಯ ಮಾಡುವುದು. ಹಾಗಾಗಿ ಬಡವರಿಗೆ ಇಲ್ಲಿ ಚಿನ್ನ ಹಾಗೂ ಬೆಳ್ಳಿಯನ್ನು ನೀಡಲಾಗುತ್ತದೆ. ಆದರೂ ಈ ಚಿನ್ನವನ್ನು ಮಾರಾಟ ಮಾಡದೇ ಪೂಜಿಸಿಕೊಂಡು ಬರುವ ಭಕ್ತರು ಅನೇಕರಿದ್ದಾರೆ.

ಗಂಡ ಹೆಂಡತಿ ಜಗಳಕ್ಕೆ ಪರಿಹಾರ‌ ಬೇಕಾ?: ಕೌಟುಂಬಿಕ‌ ಕಲಹ‌‌ ನಿವಾರಣೆಗೆ ಈ ದೇವಸ್ಥಾನಗಳಿಗೆ ಭೇಟಿ ನೀಡಿ

TAGGED:Jewellery In Prasad; Gold and silver are Prasad in this temple; gold jewellery is given in the form of Prasad!
Share This Article
Facebook Twitter Copy Link Print
Previous Article ಗಂಡ ಹೆಂಡತಿ ಜಗಳಕ್ಕೆ ಪರಿಹಾರ‌ ಬೇಕಾ?: ಕೌಟುಂಬಿಕ‌ ಕಲಹ‌‌ ನಿವಾರಣೆಗೆ ಈ ದೇವಸ್ಥಾನಗಳಿಗೆ ಭೇಟಿ ನೀಡಿ
Next Article Health care ಹೃದಯಾಘಾತವಾದಾಗ CPR ಮಾಡಿ ರೋಗಿ ಜೀವ ಉಳಿಸಿ; ಸಿಪಿಆರ್‌ ನಿಯಮಗಳೇನು?

Popular Posts

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

You Might Also Like

ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read
ಕರ್ನಾಟಕಪ್ರಮುಖ

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?