newsics.com
ಹೊಸ ದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದ ವ್ಯಕ್ತಿ ಮದುವೆಯಾಗಲು ನಿರಾಕರಿಸಿದ ಕಾರಣ ಯುವತಿಯೊಬ್ಬಳಯ ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ರೇಹಾನ್ ಎಂಬಾತ ಯುವತಿಯನ್ನು ಏಳು ವರ್ಷಗಳಿಂದ ಪ್ರೀತಿ ಮಾಡಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ್ದಾನೆ. ತನ್ನ ನಿಜವಾದ ಹೆಸರನ್ನು ಮುಚ್ಚಿಟ್ಟು, ಬೇರೆ ಹೆಸರಿನಿಂದ ಯುವತಿಯೊಂದಿಗೆ ಸಂಬಂಧ ಬೆಳೆಸಿದ್ದ.ಅಲ್ಲದೆ, ಆತ ಎರಡು ಬಾರಿ ಆಕೆಗೆ ಅಬಾರ್ಷನ್ ಮಾಡಿಸಿದ್ದಾನೆ. ರೇಹಾನ್ ಸುಮಾರು 20ರ ಹರೆಯದವನಾಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಮದುವೆಯಾಗಲು ಮಾತ್ರ ನಿರಾಕರಿಸಿದ್ದರಿಂದ. ಇದರಿಂದ ನೊಂದ ಯುವತಿ ಆಸಿಡ್ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಆಕೆಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಆಕೆ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ.
ವಸಂತ್ ಕುಂಜ್ ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಯುವತಿಯ ತಂದೆ ಆರೋಪಿಯ ವಿರುದ್ಧ ದೂರು ನೀಡಿದ್ದಾರೆ. ರೇಹಾನ್ ಶಂಕರ್ ಕ್ಯಾಂಪ್ ನಿವಾಸಿ. ಆತ ದೆಹಲಿ ವಿಮಾನ ನಿಲ್ದಾಣದಲ್ಲಿ ಗ್ರೌಂಡ್ ಸ್ಟಾಫ್ ಆಗಿ ಕೆಲಸ ಮಾಡುತ್ತಿದ್ದಾನೆ. ಏಳು ವರ್ಷಗಳ ಹಿಂದೆ ಆತ ತನ್ನ ನಿಜವಾದ ಹೆಸರನ್ನು ಮರೆಮಾಚಿದ್ದ ಎಂದು ಸಂತ್ರಸ್ತ ಯುವತಿಯ ತಂದೆ ಪೊಲೀಸರ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ.
ಜೂನ್ 18 ರಂದು, ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನನ್ನ ಮಗಳು ಆಸಿಡ್ ಕುಡಿದಿದ್ದಾಳೆ. ಸಂಜೆ 4:45 ರ ಸುಮಾರಿಗೆ ನೆರೆಹೊರೆಯವರು ಆಕೆಯನ್ನು ನೋಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಜೂನ್ 20 ರಂದು ಆಕೆಯ ಸ್ಥಿತಿ ಗಂಭೀರವಾಗಿದ್ದರಿಂದ ಸಫ್ದರ್‌ಜಂಗ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ