newsics.com
ಡೆಹ್ರಾಡೂನ್: 21 ವರ್ಷದ ಯುವತಿಯೊಬ್ಬಳು ಶ್ರೀ ಕೃಷ್ಣನನ್ನೇ ವಿವಾಹವಾಗುವ ಮೂಲಕ ಸಂತ ಮೀರಾಬಾಯಿಯನ್ನು ನೆನಪಿಸಿದ್ದಾಳೆ.
ಈ ಅಪರೂಪದ ಘಟನೆ ಉತ್ತರಾಖಂಡನ ಹಲ್ದ್ವಾನಿಯಲ್ಲಿ ನಡೆದಿದೆ. ಪಾರ್ಶ್ವವಾಯುವಿನಿಂದ ಸೊಂಟದ ಸ್ವಾಧೀನ ಕಳೆದುಕೊಂಡಿರುವ ಹರ್ಷಿಕಾ, ಕೃಷ್ಣನಿಗಾಗಿ ಆರನೇ ವಯಸ್ಸಿನಿಂದಲೇ ಕರ್ವಾ ಚೌತ್ ಉಪವಾಸ ಮಾಡಿ ಈಗ ಕೃಷ್ಣ ಪರಮಾತ್ಮನನ್ನು ವರಿಸಿದ್ದಾಳೆ.
ಬಾಲ್ಯದಿಂದಲೂ ಶ್ರೀಕೃಷ್ಣನೇ ತನ್ನ ಸಂಗಾತಿ ಎಂದು ಅವಿರತವಾಗಿ ನಂಬಿದ್ದ ಹರ್ಷಿಕಾ ಕೃಷ್ಣನನ್ನೇ ಮದುವೆಯಾಗಿದ್ದಾಳೆ. ಮದುವೆಯ ನಂತರವೂ ಹರ್ಷಿಕಾ ಅವರ ತಂದೆ ಪುರನ್ ಚಂದ್ರ ಪಂತ್ ಅವರ ಮನೆಯಲ್ಲಿಯೇ ವಾಸಿಸುತ್ತಾರೆ.
ಸಾಂಪ್ರದಾಯಿಕವಾಗಿಯೇ ನಡೆದ ಈ ಮದುವೆಯ ಒಂದು ದಿನ ಮುಂಚಿತವಾಗಿ ಕುಟುಂಬವು ಮನೆಯಲ್ಲಿ ಮೆಹಂದಿ ಮತ್ತು ಅರಿಶಿನ ಶಾಸ ಸಮಾರಂಭಗಳನ್ನು ಆಯೋಜಿಸಿತ್ತು. ಇದರಲ್ಲಿ ಹಲವು ಸಂಬಂಧಿಕರು ಮತ್ತು ನೆರೆಹೊರೆಯವರು ಭಾಗವಹಿಸಿದ್ದರು. ಸಂಗೀತ ಮತ್ತು ನೃತ್ಯದೊಂದಿಗೆ ಮದುವೆಯ ಮೆರವಣಿಗೆ ಕೂಡ ಇತ್ತು. ಕುಮಾವೋನಿ ಪದ್ಧತಿಗೆ ಅನುಗುಣವಾಗಿ ಶ್ರೀಕೃಷ್ಣನನ್ನು ಕುಟುಂಬದ ಮನೆಯಲ್ಲಿ ಸ್ವಾಗತಿಸಲಾಯಿತು. ಹರ್ಷಿಕಾ ಶ್ರೀಕೃಷ್ಣನ ವಿಗ್ರಹಕ್ಕೆ ಹೂಮಾಲೆ ಹಾಕಿದ್ದಾಳೆ. ಆಹ್ವಾನಿತರು ಅದ್ಧೂರಿ ಔತಣವನ್ನು ಸವಿದು ಹರ್ಷಿಕಾ ಅವರನ್ನು ಆಶೀರ್ವದಿಸಿದ್ದಾರೆ. ಸಮಾರಂಭದ ನಂತರ ವಧುವಿನ ಕೈಯಲ್ಲಿ ಕೃಷ್ಣನ ಮೂರ್ತಿಯೊಂದಿಗೆ ಸಂಬಂಧಿಕರ ಮನೆಗೆ ಕರೆದೊಯ್ಯಲಾಗಿತ್ತು.
ಹರ್ಷಿಕಾ ಅವರ ಕೃಷ್ಣನ ಪ್ರೀತಿ-ಭಕ್ತಿ 16ನೇ ಶತಮಾನದ ಮೀರಾಬಾಯಿಯನ್ನು ನೆನಪಿಸುತ್ತದೆ. ಮೀರಾಬಾಯಿ ಎಂಟು ವರ್ಷದಿಂದ ಕೃಷ್ಣನ ಪರಮಭಕ್ತೆಯಾದರೆ, ಹರ್ಷಿಕಾ ಆರನೇ ವರ್ಷದಿಂದಲೇ ಕೃಷ್ಣನನ್ನೇ ಸರ್ವಸ್ವ ಎಂದು ನಂಬಿ ಬದುಕಿದ್ದಾರೆ. ಈಗ ಶ್ರೀಕೃಷ್ಣನನ್ನೇ ಮದುವೆಯಾಗಿದ್ದಾರೆ.
ಆನೆಯ ಡೆಡ್ಲಿ ಅಟ್ಯಾಕ್‌ನಿಂದ ಬೇಲೂರಿನ ವ್ಯಕ್ತಿ ಪಾರು: ವಿಡಿಯೊ ಭಾರೀ ವೈರಲ್