newsics.com
ಫೋನ್ನಲ್ಲಿ ಖಾಸಗಿ ವಿಡಿಯೋ ರೆಕಾರ್ಡ್ ಮಾಡಲು ಬಿಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ.
ಲಲ್ಲಾಪುರ ನಿವಾಸಿ ಗೋಲ್ಡಿ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಪ್ರಕರಣ ಏನು..?
ಪತಿ ಜಬರ್ ಸಿಂಗ್ ಜಾತವ್ ಕುಡಿದು ಮನೆಗೆ ತಡರಾತ್ರಿ ಹೋಗಿದ್ದಾನೆ. ಅವನು ತನ್ನ ಹೆಂಡತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾನೆ. ಆದರೆ, ಕುಡಿದ ಮತ್ತಿನಲ್ಲಿದ್ದ ಪತಿಯನ್ನು ಗಮನಿಸಿದ ಹೆಂಡತಿ ಅದಕ್ಕೆ ನಿರಾಕರಿಸಿ ದೂರ ಸರಿದು ಮಲಗಿದ್ದಾಳೆ. ಆದರೆ, ಜಬರ್ ಸಿಂಗ್ ತನ್ನ ಮೊಬೈಲ್ ಕ್ಯಾಮೆರಾವನ್ನು ಆನ್ ಮಾಡಿ ವಿಡಿಯೋ ರೆಕಾರ್ಡಿಂಗ್ ಮಾಡಲು ಪ್ರಾರಂಭಿಸಿದನು. ಅಲ್ಲದೇ, ಬಲವಂತವಾಗಿ ದೈಹಿಕ ಸಂಬಂಧ ಹೊಂದಲು ಪ್ರಯತ್ನ ಮಾಡಿದ್ದಾನೆ. ಈ ಕ್ಷಣದಲ್ಲಿ ಆಕೆ ಮೇಲೆ ಹಲ್ಲೆ ಕೂಡ ಮಾಡಿದ್ದಾನೆ ಎಂದು ಪೋಲಿಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದರಿಂದ ಕೋಪಗೊಂಡ ಜಬರ್ ಸಿಂಗ್ ಕುಡಿದ ಮತ್ತಿನಲ್ಲಿ ಕತ್ತು ಹಿಸುಕಿ ಕೊಲೆ ಮಾಡಿ ರಾತ್ರಿ ಎಲ್ಲ ಶವದ ಪಕ್ಕದಲ್ಲಿಯೇ ಮಲಗಿದ್ದಾನೆ. ಬೆಳಗ್ಗೆ ಎದ್ದು ಗಾಬರಿಗೊಂಡು ಪೊಲೀಸ್ ಠಾಣೆಗೆ ಹೋಗಿ ಕೊಲೆ ಮಾಡಿದ ಬಗ್ಗೆ ಠಾಣೆಯಲ್ಲಿ ವಿವರಿಸಿದ್ದಾನೆ. ಮನೆಗೆ ಬಂದ ಪೊಲೀಸರಿಗೆ ಕೊಲೆ ಆಗಿರುವ ಶವ ಬಿದ್ದಿರುವುದು ಕಂಡಿದೆ. ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ.
Cm Siddaramaiah ಸೆ.22ಕ್ಕೆ ಮೈಸೂರು ದಸರಾಗೆ ಚಾಲನೆ, ಅ.2 ರಂದು ಜಂಬೂ ಸವಾರಿ : ಸಿಎಂ ಸಿದ್ದರಾಮಯ್ಯ