newsics.com
ಮಳೆಗಾಲ ಬಂತೆಂದರೆ ಮನೆಯಲ್ಲಿ ನೊಣಗಳ ಕಾಟ ಜಾಸ್ತಿ ಆಗುತ್ತೆ. ಅಡುಗೆ ಮನೆ, ಸ್ನಾನಗೃಹ, ಹಾಲ್ ಎಲ್ಲೆಂದರಲ್ಲಿ ನೊಣಗಳು ಕಾಣಸಿಗುತ್ತವೆ. ಆಹಾರದ ಮೇಲೆ ಕುಳಿತು ಕಿರಿಕಿರಿ ಉಂಟು ಮಾಡುತ್ವೆ, ನೊಣಗಳಿರುವ ಆಹಾರವನ್ನ ಸೇವಿಸುವುದರಿಂದ ಕಾಲರಾ ಮತ್ತು ಭೇದಿಯಂತಹ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಉಪ್ಪು ನೀರು : ಸ್ಪ್ರೇ ಬಾಟಲಿಯನ್ನ ನೀರಿನಿಂದ ತುಂಬಿಸಿ ಮತ್ತು ಎರಡು ಚಮಚ ಉಪ್ಪು ಸೇರಿಸಿ. ನೊಣಗಳು ಇರುವಲ್ಲಿ ಈ ದ್ರವವನ್ನ ಸಿಂಪಡಿಸಿ. ನೆಲ ಸ್ವಚ್ಛಗೊಳಿಸುವಾಗ ಉಪ್ಪು ನೀರಿನಿಂದ ನೆಲವನ್ನ ಒರೆಸುವುದು ಉತ್ತಮ ಫಲಿತಾಂಶವನ್ನ ನೀಡುತ್ತದೆ.
ಕರ್ಪೂರದ ಪುಡಿ : ಆರತಿಗೆ ಬಳಸುವ ಕರ್ಪೂರದ ಉಂಡೆಗಳನ್ನ ತೆಗೆದುಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಈ ಪುಡಿಯನ್ನ ನೀರಿನೊಂದಿಗೆ ಬೆರೆಸಿ ಸ್ಪ್ರೇ ಬಾಟಲಿಯಲ್ಲಿ ತುಂಬಿಸಬೇಕು. ನೊಣಗಳು ಕಂಡುಬಂದಲ್ಲಿ ಸಿಂಪಡಿಸಿ. ಹೀಗೆ ಮಾಡಿದರೆ ಒಂದೇ ಒಂದು ನೊಣವೂ ಕಾಣಿಸುವುದಿಲ್ಲ.
ತುಳಸಿ ಎಲೆಯ ಪೇಸ್ಟ್ : ಸ್ವಲ್ಪ ತುಳಸಿ ಎಲೆಗಳನ್ನ ತೆಗೆದುಕೊಂಡು ಚೆನ್ನಾಗಿ ಪೇಸ್ಟ್ ಮಾಡಿ. ಈ ಪೇಸ್ಟ್ ನೀರಿನೊಂದಿಗೆ ಮಿಶ್ರಣ ಮಾಡಿ. ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ಮನೆಯಲ್ಲಿ ನೊಣಗಳು ಹೆಚ್ಚಾಗಿ ಕಂಡುಬರುವ ಸ್ಥಳಗಳಲ್ಲಿ ದಿನಕ್ಕೆ ಎರಡು ಬಾರಿ ಸಿಂಪಡಿಸಿ. ಹೀಗೆ ಮಾಡಿದರೆ ನೊಣಗಳು ಬರುವುದಿಲ್ಲ.
ದಾಲ್ಚಿನ್ನಿ ಪುಡಿ: ದಾಲ್ಚಿನ್ನಿ ನೊಣಗಳನ್ನ ಹಿಮ್ಮೆಟ್ಟಿಸಲು ತುಂಬಾ ಉಪಯುಕ್ತವಾಗಿದೆ. ಮೊದಲು ಕೆಲವು ದಾಲ್ಚಿನ್ನಿ ತುಂಡುಗಳನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನೊಣಗಳು ಹೆಚ್ಚಾಗಿ ಕಂಡುಬರುವ ಸ್ಥಳಗಳಲ್ಲಿ ಈ ಪುಡಿಯನ್ನ ಸ್ವಲ್ಪ ಸಿಂಪಡಿಸಿ.
ವಿನೆಗರ್ : ಒಂದು ಬಟ್ಟಲಿನಲ್ಲಿ ಆಪಲ್ ಸೈಡರ್ ವಿನೆಗರ್ ತೆಗೆದುಕೊಂಡು ಅದರಲ್ಲಿ ಸ್ವಲ್ಪ ನೀಲಗಿರಿ ಎಣ್ಣೆಯನ್ನ ಸೇರಿಸಿ. ನಂತರ ಈ ದ್ರವವನ್ನ ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಮತ್ತು ನೊಣಗಳು ಹೆಚ್ಚಾಗಿ ಇರುವಲ್ಲಿ ಸಿಂಪಡಿಸಿ. ನೊಣಗಳನ್ನ ದೂರವಿಡಲು ದಿನಕ್ಕೆ ಎರಡು ಬಾರಿ ಸಿಂಪಡಿಸಿ.
ಬಿರಿಯಾನಿ ಎಲೆ : ಮನೆಯಲ್ಲಿ ನೊಣಗಳು ಜಾಸ್ತಿ ಇದ್ದಾಗ ಎರಡು ಬಿರಿಯಾನಿ ಎಲೆಗಳನ್ನ ಸುಟ್ಟು ಹಾಕಿ. ಈ ಎಲೆಗಳ ಹೊಗೆಯಿಂದ ನೊಣಗಳೂ ಓಡಿಹೋಗುತ್ತವೆ.
ಭಾರತದಲ್ಲಿ ಫ್ರಿಡ್ಜ್, ವಾಷಿಂಗ್ ಮೆಷಿನ್ ಬ್ಯುಸಿನೆಸ್ ತೊರೆದ ಪ್ಯಾನಾಸಾನಿಕ್; ಕಾರಣವೇನು?