newsics.com
ಪುನೀತ್ ರಾಜ್ ಕುಮಾರ್ ಅಭಿನಯಸಿದ್ದ ಹುಡುಗರು ಚಿತ್ರದ ‘ಬೋರ್ಡು ಇರದ ಬಸ್ಸನು’ ಹಾಡಿನಲ್ಲಿ ನೃತ್ಯ ಮಾಡಿದ್ದ ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಜನಪ್ರಿಯ ಸಂಗೀತ ವೀಡಿಯೊ ‘ಕಾಂಟಾ ಲಗಾ’ ಮೂಲಕ ಪ್ರಸಿದ್ಧರಾದ ನಟಿ ಮತ್ತು ರೂಪದರ್ಶಿ ಶೆಫಾಲಿ ಜರಿವಾಲಾ ಮುಂಬೈನಲ್ಲಿ ಕೊನೆಯುಸಿರೆಳೆದರು.
ಶೆಫಾಲಿ ಅವರು ಕುಸಿದು ಬಿದ್ದಿದ್ದು, ಕೂಡಲೇ ಅವರ ಪತಿ ನಟ ಪರಾಗ್ ತ್ಯಾಗಿ ಅವರು ಕೂಡಲೇ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರ ವೇಳೆಗೆ ನಟಿ ಮತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಶೆಫಾಲಿ ಜರಿವಾಲಾ 2000 ರ ದಶಕದ ಆರಂಭದಲ್ಲಿ ಕಾಂಟಾ ಲಗಾ ಎಂಬ ರೀಮಿಕ್ಸ್ ವೀಡಿಯೊದೊಂದಿಗೆ ಜನಪ್ರಿಯರಾದರು. ಇದರಿಂದಾಗಿ ಅವರಿಗೆ ‘ಕಾಂಟಾ ಲಗಾ ಗರ್ಲ್’ ಎಂಬ ಅಡ್ಡಹೆಸರು ಸಿಕ್ಕಿತು. ನಂತರ ಅವರು ಸಲ್ಮಾನ್ ಖಾನ್ ಅವರ ಚಲನಚಿತ್ರ ಮುಜ್ಸೆ ಶಾದಿ ಕರೋಗಿಯಲ್ಲಿ ಕೆಲಸ ಮಾಡಿದರು, ಇದರ ಜೊತೆಗೆ ಅವರು ನಾಚ್ ಬಲಿಯೇ ಮತ್ತು ಬಿಗ್ ಬಾಸ್ 13 ನಂತಹ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದರು.
ಕನ್ನಡದ ಪುನೀತ್ ರಾಜ್ ಕುಮಾರ್ ನಟನೆಯ ಹುಡುಗರು ಸಿನಿಮಾದ ಐಟಂ ಸಾಂಗ್ ನಲ್ಲಿ ಶೆಫಾಲಿ ನಟಿಸಿದ್ದರು.
ಹಲವು ಬಾಲಿವುಡ್ ಕಲಾವಿದರು, ನಟರು, ಕಿರುತೆರೆ ಕಲಾವಿದರು ಶೆಫಾಲಿ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
Viral video ಪತ್ನಿ ವಿಚ್ಛೇದನಕ್ಕೆ ಆಕ್ರೋಶಗೊಂಡು Metro ರೈಲಿಗೆ ಬೆಂಕಿ ಹಚ್ಚಿದ ಪತಿ: ವೈರಲ್ ವಿಡಿಯೋ ನೋಡಿ