newsics.com
ಬೆಂಗಳೂರು: ಹಾಡಹಗಲೇ 2 ಕೋಟಿ ದರೋಡೆ ಮಾಡಿರುವ ಘಟನೆ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಎಂಎಸ್ ಪಾಳ್ಯದ ಎಕೆ ಎಂಟರ್ ಪ್ರೈಸಸ್ನಲ್ಲಿ ನಡೆದಿದೆ. ಡಾಲರ್ ಎಕ್ಸ್ಚೇಂಜ್ಗೆ ಅಂತಾ ಎರಡು ಕೋಟಿ ಹಿಡಿದು ಬಂದವನ ಕುತ್ತಿಗೆಯ ಮೇಲೆ ಚಾಕು ಇಟ್ಟು ರಾಬಲಿ ಮಾಡಲಾಗಿದೆ.
ಕೆಂಗೇರಿಯ ಶ್ರೀಹರ್ಷ, ಕೋಲ್ಡ್ ಪ್ರೆಸ್ಸಡ್ ಆಯಿಲ್ ಉದ್ಯಮವನ್ನು ಆರಂಭಿಸುವ ಸಲುವಾಗಿ ಸ್ನೇಹಿತರ ಬಳಿ 2 ಕೋಟಿ ಹಣ ಹೊಂದಿಸಿಕೊಂಡು ಜರ್ಮನಿಯಿಂದ ಮೆಷಿನ್ ತರಿಸಲು ಯೋಜಿಸಿದ್ದರು. 2 ಕೋಟಿ ಹಣವನ್ನ USDT ಕರೆನ್ಸಿಗೆ ಪರಿವರ್ತಿಸಬೇಕಿತ್ತು. ಈ ವೇಳೆ ಸ್ನೇಹಿತರ ಮೂಲಕ ಬೆಂಜಮಿನ್ ಹರ್ಷ ಎಂಬಾತನ ಪರಿಚಯವಾಗುತ್ತೆ. ಬೆಂಜಮಿನ್ 2 ಕೋಟಿ ಹಣವನ್ನು ತೆಗೆದುಕೊಂಡು ವಿದ್ಯಾರಣ್ಯಪುರದ ಎಂಎಸ್ ಪಾಳ್ಯ ಸರ್ಕಲ್ ಬಳಿ ಬರುವಂತೆ ಹೇಳಿದ್ದಾರೆ.
ಶ್ರೀಹರ್ಷ (ಜೂ.25) ಮತ್ತು ಸ್ನೇಹಿತರಾದ ನಾಗೇಂದ್ರ, ಶಾಂತಕುಮಾರ್ ಜೊತೆ ಹಣ ತೆಗೆದುಕೊಂಡು ಹೋಗಿದ್ದಾರೆ. 2 ಕೋಟಿ ನಗದು ಹಣವನ್ನು ಸ್ನೇಹಿತ ಶಾಂತಕುಮಾರ್ ಅವರ ಸ್ವಿಫ್ಟ್ ಕಾರಿನಲ್ಲಿ ತೆಗೆದುಕೊಂಡು ಎಂಎಸ್ ಪಾಳ್ಯ ಸರ್ಕಲ್ ಬಳಿ ಇರುವ ಎಕೆ ಎಂಟರ್ಪ್ರೈಸಸ್ ಎಂಬ ಮಳಿಗೆಗೆ ಹೋಗ್ತಾರೆ. 2 ಕೋಟಿ ಹಣವನ್ನು ಬೆಂಜಮಿನ್ ಮತ್ತು ಅವರ ಜೊತೆಯಲ್ಲಿದ್ದ ಇನ್ನಿಬ್ಬರು ವ್ಯಕ್ತಿಗಳು ನಗದು ಹಣವನ್ನು ಎಣಿಕೆ ಮಾಡುವಾಗ ಏಕಾಏಕಿ 6 ರಿಂದ 7 ಜನರ ಗುಂಪೊಂದು ಒಳಗೆ ನುಗ್ಗಿದೆ. ಚಾಕು ತೋರಿಸಿ 2 ಕೋಟಿ ನಗದು ಹಣ ಮತ್ತು ನಾಲ್ಕು ಮೊಬೈಲ್ಗಳನ್ನ ಕಿತ್ತು ಪರಾರಿಯಾಗಿದ್ದಾರೆ.