newsics.com
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ‘ಕ್ವಾಟ್ಲೆ ಕಿಚನ್’ ಎಂಬ ಪಕ್ಕಾ ಕಾಮಿಡಿ ಕುಕ್ಕಿಂಗ್ ಶೋ.ಕುಕ್‌ಗಳಾಗಿ – ಬೆಳ್ಳುಳ್ಳಿ ಕಬಾಬ್ ಚಂದ್ರು, ಆರ್.ಕೆ ಚಂದನ್, ದಿಲೀಪ್ ಶೆಟ್ಟಿ, ರಾಘವೇಂದ್ರ, ಕೆಂಪಮ್ಮ, ಪ್ರೇರಣ ಕಂಬಮ್, ಕಾವ್ಯ ಗೌಡ, ಶಿಲ್ಪ ಕಾಮತ್, ಶರ್ಮಿತ ಗೌಡ, ಸೋನಿಯಾ ಪೊನ್ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇವರಿಗೆ ಕ್ವಾಟ್ಲೆ ಕೊಡುವುದಕ್ಕೆಂದೇ ಲ್ಯಾಗ್ ಮಂಜು, ಧನರಾಜ್ ಆಚಾರ್, ತುಕಾಲಿ ಸಂತೋಷ್, ನಿವೇದಿತಾ ಗೌಡ, ಪ್ರಶಾಂತ್, ಸೂರಜ್, ಗಿಲ್ಲಿ ನಟ, ಸೋನಿ ಮುಲೆವ, ವಾಣಿ ಗೌಡ, ದೀಶಾ ಉಮೇಶ್ ಕಾರ್ಯಕ್ರಮದಲ್ಲಿ ಇದ್ದಾರೆ.
ಆದರೆ ಇದೇ ಶೋನಲ್ಲಿ ನೂರು ಜನ್ಮಕೂ ಸೀರಿಯಲ್ ಖ್ಯಾತಿಯ ಶಿಲ್ಪಾ ಕಾಮತ್ ಗಿಲ್ಲಿ ನಟನ ವಿರುದ್ಧ ಗರಂ ಆಗಿದ್ದಾರೆ.
ಅಡ್ವಾಂಟೇಜ್ ಟಾಸ್ಕ್ ಪ್ರಕಾರ ಕ್ವಾಟ್ಲೆಗಳಿಗೆ ಕುಕ್‌ಗಳು ಪಾನಿ ಪೂರಿ ತಿನ್ನಿಸಬೇಕಿತ್ತು. 20 ನಿಮಿಷ ಅವಧಿಯಲ್ಲಿ ಯಾರು ಹೆಚ್ಚು ಪಾನಿ ಪೂರಿ ತಿನ್ನುತ್ತಾರೋ, ಅವರು ಗೆದ್ದಂತೆ. ಈ ರೌಂಡ್‌ನಲ್ಲಿ ಕ್ವಾಟ್ಲೆ ಗಿಲ್ಲಿ ನಟನಿಗೆ ಕುಕ್ ಶಿಲ್ಪಾ ಕಾಮತ್ ಪಾನಿ ಪೂರಿ ತಿನ್ನಿಸಲು ಆರಂಭಿಸಿದರು.
ಅಡ್ವಾಂಟೇಜ್ ಟಾಸ್ಕ್‌ನಲ್ಲಿ ಅಡ್ವಾಂಟೇಜ್ ತಗೊಂಡು, ಪ್ರತಿ ಬಾರಿ ಪಾನಿಪೂರಿ ತಿನ್ನಿಸುವಾಗ ಶಿಲ್ಪಾ ಕಾಮತ್ ಕೈಗೆ ಗಿಲ್ಲಿ ನಟ ಮುತ್ತು ಕೊಡುತ್ತಿದ್ದರು. ಆಗ ಪ್ರೋಮೋದಲ್ಲಿ ಅಡ್ವಾಂಟೇಜ್ ತಗೊಂಡು ಗಿಲ್ಲಿ ನಟ ಕೈಗೆ ಮುತ್ತು ಕೊಡುತ್ತಿದ್ದರು. ಕೈಯಲ್ಲಿ ಗ್ಲೌಸ್ ಇತ್ತು ಅಂತ ಸುಮ್ಮನೆ ಇದ್ದೆ. ಇಲ್ಲಾಂದಿದ್ರೆ ಒಂದು ಕೈ ನೋಡಿಕೊಳ್ತಿದ್ದೆ ಅಂತ ಹೇಳಿದ್ದಾರೆ.
https://www.instagram.com/reel/DLKGmpIsJjP/?igsh=ZWs1MGFvNmxpemdy