Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಸರ್ಕಾರಿ ಗೌರವಗಳೊಂದಿಗೆ ಅಪರ್ಣಾಗೆ ಭಾವಫೂರ್ಣ ವಿದಾಯ, ಮಧುರ ಶಾರೀರದ ಶರೀರ ಪಂಚಭೂತಗಳಲ್ಲಿ ಲೀನ
ಕರ್ನಾಟಕಪ್ರಮುಖಮನರಂಜನೆ

ಸರ್ಕಾರಿ ಗೌರವಗಳೊಂದಿಗೆ ಅಪರ್ಣಾಗೆ ಭಾವಫೂರ್ಣ ವಿದಾಯ, ಮಧುರ ಶಾರೀರದ ಶರೀರ ಪಂಚಭೂತಗಳಲ್ಲಿ ಲೀನ

Share
2 Min Read
SHARE

newsics.com

ಬೆಂಗಳೂರು: ಗುರುವಾರ ರಾತ್ರಿ ನಿಧನರಾದ ಖ್ಯಾತ ನಿರೂಪಕಿ,‌ ನಟಿ ಅಪರ್ಣಾ ವಸ್ತಾರೆ ಪಂಚಭೂತಗಳಲ್ಲಿ ಲೀನವಾಗಿದ್ದಾರೆ.

ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ಸ್ಮಾರ್ತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಅಪರ್ಣಾ ಅವರಿಗೆ ಸರ್ಕಾರಿ ಗೌರವ ನೀಡಲಾಯಿತು.

ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬನಶಂಕರಿ ಎರಡನೇ ಹಂತದ ತಮ್ಮ ಮನೆಯಲ್ಲಿ ಗುರುವಾರ ರಾತ್ರಿ ಅಪರ್ಣಾ ಕೊನೆಯುಸಿರೆಳೆದರು.

ಅಂತ್ಯಕ್ರಿಯೆ ವೇಳೆಯೂ ಅಂತಿಮ ದರ್ಶನಕ್ಕೆಂದು ಬನಶಂಕರಿ ಚಿತಾಗಾರಕ್ಕೆ ಅಭಿಮಾನಿಗಳು ಓಡೋಡಿ‌ ಬಂದಿದ್ದರಿಂದ ಅಂತ್ಯಕ್ರಿಯೆ ತುಸು‌ ವಿಳಂಬವಾಯಿತು.

ನಟಿ, ನಿರೂಪಕಿ ಅಪರ್ಣಾ ಬಣ್ಣದ ಲೋಕದ ಮೇಲಿನ ಸೆಳೆತದಿಂದ ನಟನಾರಂಗಕ್ಕೆ ಆಗಮಿಸಿದ್ದರು. 1985ರಲ್ಲಿ ತೆರೆಗೆ ಬಂದ ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಮಸಣದ ಹೂವು ಸಿನಿಮಾ ಮೂಲಕ ಚಂದನವನಕ್ಕೆ ಆಗಮಿಸಿದ್ದರು ಅಪರ್ಣಾ. ಅದಾದ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು. ಕಿರುತೆರೆಯಲ್ಲಿಯೂ ಗುರುತಿಸಿಕೊಂಡರು. ಆದರೆ, ಸಿನಿಮಾಗಳಿಗಿಂತ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ನಿರೂಪಣೆ. ಸರಿಸುಮಾರು 7 ಸಾವಿರಕ್ಕೂ ಅಧಿಕ ವೇದಿಕೆ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದ ಹೆಗ್ಗಳಿಕೆ ಅಪರ್ಣಾ ಅವರದ್ದು.

ಅಪರ್ಣಾ ಮೂಲತಃ ಚಿಕ್ಕಮಗಳೂರಿನ ಪಂಚನಹಳ್ಳಿಯವರು. ತಂದೆ ಕೆ. ಎಸ್.‌ ನಾರಾಯಣಸ್ವಾಮಿ ಸಿನಿಮಾ ಪತ್ರಕರ್ತ. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅಪರ್ಣಾ, ಚಿಕ್ಕಂದಿನಿಂದಲೇ ಓದಿನಲ್ಲಿ ಮುಂದು. ಶಾಲಾ ದಿನಗಳಲ್ಲಿಯೇ ವೇದಿಕೆ ಕಾರ್ಯಕ್ರಮಗಳನ್ನು ನಿಭಾಯಿಸುತ್ತಿದ್ದರು. ನಿರೂಪಣೆಯ ಜವಾಬ್ದಾರಿ ಹೊತ್ತಿದ್ದರು. ಅಂದಿನ ಆ ರೂಢಿಯೇ ಅವರ ಅನ್ನಕ್ಕೆ ದಾರಿ ಮಾಡಿಕೊಟ್ಟಿತ್ತು. ತಂದೆಯ ನಿಧನದ ಬಳಿಕ ಬೆಂಗಳೂರಿನ ಮಲ್ಲೇಶ್ವರಕ್ಕೆ ಬಂದು ನೆಲೆನಿಂತರು. ಅದಾದ ಮೇಲೆ ನಾಗರಾಜ್‌ ವಸ್ತಾರೆ ಜತೆಗೆ ವಿವಾಹವೂ ಆಯ್ತು. ಆದರೆ, ಈ ಜೋಡಿಗೆ ಮಕ್ಕಳಾಗಿಲ್ಲ. ಆ ಕೊರಗೂ ಅಪರ್ಣಾ ಅವರನ್ನು ಕಾಡಿತ್ತು.

ಬರುವ ಅಕ್ಟೋಬರ್‌ಗೆ 58 ವರ್ಷ ಪೂರೈಸುತ್ತಿದ್ದ ಅಪರ್ಣಾಗೆ, ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು. ನಿರೂಪಣೆಯಲ್ಲಿ ದೊಡ್ಡ ಹೆಸರು ಮಾಡಿದ್ದ ಅಪರ್ಣಾ, ಅದೇ ನಿರೂಪಣೆ ಕಲೆಯನ್ನು ಇತರರಿಗೂ ಹಂಚಲು ಪ್ಲಾನ್‌ ಮಾಡಿದ್ದರು. ನಿರೂಪಣೆ ಕುರಿತು ಶಾಲೆ ಆರಂಭಿಸುವ ಯೋಜನೆ ಹಾಕಿದ್ದರು. ಆದರೆ, ಆ ಕನಸು ಕೊನೆಗೂ ಈಡೇರಲಿಲ್ಲ. ಈ ವಿಚಾರವನ್ನು ಅವರ ಪತಿ ನಾಗರಾಜ್‌ ಹೇಳಿಕೊಂಡಿದ್ದಾರೆ.

ನನ್ನ ನೋವು, ನೋವಿನ ಮುಖ ಯಾರಿಗೂ ತಿಳಿಯುವುದು ಬೇಡ ಎಂದಿದ್ದರು ಅಪರ್ಣಾ…

ಅಪರ್ಣಾಗೆ ವಾಯ್ಸ್ ಅನೌನ್ಸ್ ಮೂಲಕ ನಮ್ಮ‌ ಮೆಟ್ರೋ ಶ್ರದ್ಧಾಂಜಲಿ, ಎಂದೆಂದಿಗೂ ನಿಮ್ಮ ಧ್ವನಿ ಜೀವಂತ…

ಮಾತಿನ ಮಂಟಪ ಕಟ್ಟುತ್ತಿದ್ದ ಶುದ್ಧ ಕನ್ನಡತಿ… ಅಪರ್ಣಾ ಮೆಲುಮಾತು ಕರ್ಣಾನಂದ…

TAGGED:A heartwarming farewell to Aparna with government honoursthe narrator is engrossed in panchabhutas
Share This Article
Facebook Twitter Copy Link Print
Previous Article ನನ್ನ ನೋವು, ನೋವಿನ ಮುಖ ಯಾರಿಗೂ ತಿಳಿಯುವುದು ಬೇಡ ಎಂದಿದ್ದರು ಅಪರ್ಣಾ…
Next Article ನ್ಯೂ ಹೇರ್‌ ಸ್ಟೈಲ್‌ನಲ್ಲಿ  ಕಾಣಿಸಿಕೊಂಡ ಯಶ್:  ವಿಡಿಯೋ ವೈರಲ್

Popular Posts

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

You Might Also Like

ಕರ್ನಾಟಕಪ್ರಮುಖ

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read
ಪ್ರಮುಖಕರ್ನಾಟಕ

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read
ಪ್ರಮುಖಮನರಂಜನೆ

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read
ಕರ್ನಾಟಕಪ್ರಮುಖ

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?