Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮಕ್ಕಳಿಂದ ಕಿರಿಕಿರಿ: 4 ಕೋಟಿ ಮೌಲ್ಯದ ಆಸ್ತಿ ದೇವಸ್ಥಾನಕ್ಕೆ ದಾನ ನೀಡಿದ ನಿವೃತ್ತ ಸೈನಿಕ!
ದೇಶಪ್ರಮುಖ

ಮಕ್ಕಳಿಂದ ಕಿರಿಕಿರಿ: 4 ಕೋಟಿ ಮೌಲ್ಯದ ಆಸ್ತಿ ದೇವಸ್ಥಾನಕ್ಕೆ ದಾನ ನೀಡಿದ ನಿವೃತ್ತ ಸೈನಿಕ!

Share
1 Min Read
SHARE

newsics.com

ತಮಿಳುನಾಡು: ತನ್ನ ಬಳಿ ಇದ್ದ ಬರೋಬ್ಬರಿ 4 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹಿಂದೆ ಮುಂದೆ ನೋಡದೆ ದೇಗುಲಕ್ಕೆ ದಾನ ಮಾಡಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ರೇಣುಗುಂಬಲ ಅಮ್ಮನ ದೇವಾಲಯದಲ್ಲಿ ನಡೆದಿದೆ.

ನಿವೃತ ಸೇನಾಧಿಕಾರಿಯಾಗಿರುವ ಅರಣಿ ಸಿಟಿಯ ಕೇಶವಪುರಂ ಗ್ರಾಮದ ವಿಜಯನ್ ಬಾಲ್ಯದಿಂದಲೂ ರೇಣುಗುಂಬಲ ಅಮ್ಮನನವರ ಭಕ್ತ. ನಿವೃತ ಸೇನಾಧಿಕಾರಿಯಾಗಿದ್ದ ಇವರು ಕಳೆದ 10 ವರ್ಷದ ಹಿಂದೆ ಕಾರಣಾಂತರಗಳಿಂದ ಪತ್ನಿಯಿಂದ ದೂರವಿದ್ದರು.

ಪತ್ನಿಯಿಂದ ದೂರವಾದ ಜೊತೆಗೆಯೇ ಕುಟುಂಬದಿಂದ ಯಾವುದೇ ಸಹಾಯ, ಬೆಂಬಲ ಸಿಗುತ್ತಿರಲಿಲ್ಲ.. ಇನ್ನೊಂದೆಡೆ ಅಮ್ಮನ ಜೊತೆ ಇದ್ದ ಇಬ್ಬರು ಮಕ್ಕಳು ದಿನನಿತ್ಯ ನಮಗೆ ಆಸ್ತಿ ಬೇಕು ಪಾಲು ಮಾಡಿ ಎಂದು ಗಲಾಟೆ ಮಾಡುತ್ತಲೇ ಇದ್ದರು. ಇವೆಲ್ಲವನ್ನೂ ಹತ್ತಿರದಿಂದ ನೋಡಿದ ವಿಜಯನ್ ಬಹಳ ಬೇಸರಗೊಂಡಿದ್ದರು.

ಅಷ್ಟೇ ಅಲ್ಲದೆ ಮಕ್ಕಳ ಈ ವರ್ತನೆ, ಅವರಿಂದ ಆಗುತ್ತಿರುವ ಅಪಮಾನದಿಂದ ಬೇಸತ್ತ ವಿಜಯನ್ ತಮ್ಮ ಆಸ್ತಿಗೆ ಸಂಬಂಧಿಸಿದ ನಾಲ್ಕು ಪುಟದ ದಾಖಲೆಗಳನ್ನು ಹುಂಡಿಗೆ ಹಾಕಿದ್ದಾರೆ. ವರದಿಯ ಪ್ರಕಾರ, ವಿಜಯನ್ ಅವರು ಹಾಕಿದ ಆಸ್ತಿಯಲ್ಲಿ ಒಂದು ಆಸ್ತಿ ಮೂರು ಕೋಟಿ ಮೌಲ್ಯದ್ದಾಗಿದ್ದು, ಮತ್ತೊಂದು ಆಸ್ತಿ 1 ಕೋಟಿ ಮೌಲ್ಯದ್ದಾಗಿದೆ.
ಇನ್ನು ಜೂನ್ 24 ರಂದು ಅರಲುಮಿಗು ರೇಣುಗುಂಬಲ ಅಮ್ಮಾನ್ ದೇವಾಲಯದ ಹುಂಡಿ ಎಣಿಕೆ ಮಾಡುವ ವೇಳೆ ಆಸ್ತಿ ಪತ್ರ ಪತ್ತೆಯಾಗಿದೆ.

ಇದನ್ನು ಪರಿಶೀಲಿಸಿದಾಗ ಒರಿಜಿನಲ್ ಎಂದು ಗೊತ್ತಾಗಿದೆ. ಕೂಡಲೇ ವಿಜಯನ್ ಅವರನ್ನು ಸಂಪರ್ಕಿಸಿ ಮಾತಾಡಿದ್ದಾರೆ.

ಅದಕ್ಕೆ ವಿಜಯನ್.. ನನ್ನ ಆಸ್ತಿ ಸಂಪೂರ್ಣವಾಗಿ ದೇವಾಲಯಕ್ಕೆ ಅರ್ಪಿಸಿದ್ದೇನೆ. ನನ್ನ ಮಕ್ಕಳು ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಅಲ್ಲದೇ ನನಗೆ ಒಂದು ರೂಪಾಯಿ ಕೂಡ ಕೊಡದೆ ಸತಾಯಿಸುತ್ತಿದ್ದಾರೆ. ಹಣ ಬೇಕು ಅಂದ್ರೆ ಆಸ್ತಿ ಮಾರು ಎಂದು ಬೆದರಿಕೆ ಹಾಕುತ್ತಿದ್ದಾರೆ.
ಮಕ್ಕಳ ಈ ವರ್ತನೆಯಿಂದ ಬಹಳ ನೋವು ಉಂಟಾಗಿ ಕಡೆ ಕ್ಷಣದಲ್ಲೂ ನಮ್ಮನ್ನು ಸರಿಯಾಗಿ ನೋಡಿಕೊಳ್ಳದ ಅವರಿಗೆ ಆಸ್ತಿ ಸಿಗಬಾರದು ಎಂದು ಯೋಚಿಸಿ ಕಾನೂನು ಬದ್ಧವಾಗಿ ಆಸ್ತಿಯನ್ನು ದೇವರಿಗೆ ಕೊಡುತ್ತೇನೆ ಎಂದು ವಿಜಯನ್ ತಿಳಿಸಿದ್ದಾರೆ.

Health tips ಕೂದಲು ಉದುರಿ ಹೋಗಿ ತೆಳ್ಳಗಾಗಿದ್ಯಾ? ಹಾಗಾದ್ರೆ ಈ ಎಣ್ಣೆ ಟ್ರೈ ಮಾಡಿ

TAGGED:Annoyed by children: Retired soldier donates property worth Rs 4 crore to temple!
Share This Article
Facebook Twitter Copy Link Print
Previous Article Health tips ಕೂದಲು ಉದುರಿ ಹೋಗಿ ತೆಳ್ಳಗಾಗಿದ್ಯಾ? ಹಾಗಾದ್ರೆ ಈ ಎಣ್ಣೆ ಟ್ರೈ ಮಾಡಿ
Next Article ʼಸೈಬರ್ ವಂಚನೆಗಳ ವಿರುದ್ಧ ಜಾಗರೂಕರಾಗಿರಿʼ ಎನ್ನುವ `ಅಮಿತಾಬ್ ಬಚ್ಚನ್’ ಧ್ವನಿಯಲ್ಲಿದ್ದ `ಕಾಲರ್ ಟ್ಯೂನ್’ ಸ್ಥಗಿತ

Popular Posts

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read
ಪ್ರಮುಖ

ಮನೆಗೆಲಸ ಮಾಡುತ್ತಲೇ ಗಂಟೆಗೆ ₹250 ಗಳಿಸಬಹುದು; ಈ ಟ್ರಿಕ್ ಟ್ರೈ ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?