Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Young woman marries 12 times in two years! ಎರಡೇ ವರ್ಷದಲ್ಲಿ 12 ಮದುವೆಯಾದ ಯುವತಿ!: ವಿಚ್ಛೇದಿತರೇ ಟಾರ್ಗೆಟ್, ಕಿರುಕುಳ ತಾಳಲಾರದೆ ಆತ್ಮ*ಹತ್ಯೆಗೂ ಯತ್ನ
ದೇಶಪ್ರಮುಖ

Young woman marries 12 times in two years! ಎರಡೇ ವರ್ಷದಲ್ಲಿ 12 ಮದುವೆಯಾದ ಯುವತಿ!: ವಿಚ್ಛೇದಿತರೇ ಟಾರ್ಗೆಟ್, ಕಿರುಕುಳ ತಾಳಲಾರದೆ ಆತ್ಮ*ಹತ್ಯೆಗೂ ಯತ್ನ

Share
2 Min Read
SHARE

newsics.com

ಆಂಧ್ರಪ್ರದೇಶ: ಯುವತಿಯೊಬ್ಬಳು ಎರಡು ವರ್ಷದಲ್ಲಿ 12 ವಿಚ್ಛೇದಿತರನ್ನು ಮದುವೆಯಾಗಿ ವಂಚಿಸಿದ್ದಲ್ಲದೆ, ಸಂತ್ರಸ್ತರಿಂದ ಲಕ್ಷಾಂತರ ರೂ. ನಗದು, ಚಿನ್ನಾಭರಣಗಳನ್ನು ದೋಚಿರುವ ಘಟನೆ ಆಂಧ್ರಪ್ರದೇಶದ ಕೊನಸೀಮಾ ಜಿಲ್ಲೆಯಲ್ಲಿ ನಡೆದಿದೆ.

ಈಕೆಯನ್ನು ಮದುವೆಯಾಗಿ ಮೋಸ ಹೋದ ಕೆಲವರು ಆಕೆಯ ಕಿರುಕುಳ ತಾಳಲಾರದೆ ಆತ್ಮಹತ್ಯೆಗೂ ಯತ್ನಿಸಿದ್ದಾರೆ ಎಂದು ವರದಿಯಾಗಿದೆ.

ಈ ಯುವತಿಗೆ ತನ್ನ ತಾಯಿಯೊಂದಿಗೆ ಸೇರಿ ಮದುವೆಯ ಹೆಸರಿನಲ್ಲಿ 12 ವಿಚ್ಛೇದಿತ ಜನರಿಗೆ ವಂಚನೆ ಮಾಡಿದ್ದಾಳೆ. ಸಂತ್ರಸ್ತರಿಂದ ಲಕ್ಷಾಂತರ ಹಣವನ್ನು ಸಂಗ್ರಹಿಸಿ ಕಿರುಕುಳ ನೀಡಿದ್ದಾಳೆ ಎಂದು ಆರೋಪಿಸಲಾಗಿದೆ. ಹಣ ಕೊಡದವರಿಗೆ ಸಾಕಷ್ಟು ಕಿರುಕುಳ ನೀಡಿದ್ದಾಳೆ ಎನ್ನಲಾಗಿದೆ. ಈ‌ ಕಿರುಕುಳ ತಾಳಲಾರದೆ ಕೆಲವರು ಆತ್ಮಹತ್ಯೆಗೂ ಯತ್ನಿಸಿದ್ದರು ಎಂದು ತಿಳಿದುಬಂದಿದೆ.

ಸಂತ್ರಸ್ತರು ಎಸ್ಪಿ ಕಚೇರಿಯಲ್ಲಿ ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.

ಯುವತಿ ಎರಡು ವರ್ಷಗಳಲ್ಲಿ ಒಂದು ಡಜನ್ (12) ಬಾರಿ ಮದುವೆಯಾಗಿದ್ದಾಳೆ. ಯುವತಿಯ ತಾಯಿ ಕೂಡ ಈ ಮೋಸದ ವಿವಾಹ ದಂಧೆಯಲ್ಲಿ ಭಾಗಿಯಾಗಿದ್ದಾಳೆ.

ವಿಚ್ಛೇದಿತರನ್ನೇ ಗುರಿಯಾಗಿಸಿಕೊಂಡು ತಾಯಿ ಮತ್ತು ಮಗಳು 12 ಜನರನ್ನು ವಂಚಿಸಿದ್ದಾರೆ. ಇದಲ್ಲದೆ, ಈ ವಂಚನೆಗಳ ಬಗ್ಗೆ ಪ್ರಶ್ನಿಸಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಬಲಿಪಶುಗಳು ಡಾ. ಬಿ.ಆರ್. ಅಂಬೇಡ್ಕರ್ ಕೊನಸೀಮಾ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.

ಕೊನಸೀಮಾ ಜಿಲ್ಲೆಯ ರಾಮಚಂದ್ರಪುರಂನ ಯುವತಿ, ಆಕೆಯ ತಾಯಿ ವೀರಲಕ್ಷ್ಮಿ ಮತ್ತು ಆಕೆಯ ತಂದೆ ಪಾತ್ರಧಾರಿ ರಾಮಕೃಷ್ಣ ಸೇರಿ ವಂಚನೆ ಎಸಗಿದ್ದಾರೆ ಎನ್ನಲಾಗಿದೆ. ಮದ್ದಲ ಶ್ರೀನಿವಾಸ್, ದುರ್ಗಾ ಮತ್ತು ಕಲ್ಯಾಣ್ ಸಹಾಯದಿಂದ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೊಲ್ಲು ಮತ್ತು ನರಸಪುರಂ ಮತ್ತು ಪೂರ್ವ ಗೋದಾವರಿ ಜಿಲ್ಲೆಯ ಕೊವ್ವೂರಿನ ಸಂತ್ರಸ್ತರು ಯುವತಿಯೊಂದಿಗೆ ಎಎಸ್ಪಿ ಎವಿಆರ್‌ಪಿಬಿ ಪ್ರಸಾದ್ ಅವರಿಗೆ ಗ್ಯಾಂಗ್ ವಿರುದ್ಧ ದೂರು ನೀಡಿದ್ದಾರೆ.

ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣಗಳು ಬಾಕಿ ಇರುವವರನ್ನು ಗುರಿಯಾಗಿಸಿಕೊಂಡು ಎರಡನೇ ಮದುವೆಯ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ತಾವು ನಡೆಸುವ ಕೃತ್ಯ ಜನರಿಗೆ ತಿಳಿಯಬಾರದು ಎಂದು ಮಾಸ್ಟರ್‌ ಪ್ಲ್ಯಾನ್‌ ಮಾಡುತ್ತಿದ್ದರು. ಹುಡುಗಿಯನ್ನು ನೋಡಲು ಹುಡುಗನ ಸಂಬಂಧಿಕರಿಗೆ ಕರೆ ಮಾಡಿ ಹೆಚ್ಚು ಜನರು ಬರಬಾರದು ಎಂಬ ಷರತ್ತು ವಿಧಿಸುತ್ತಿದ್ದರು. ಮದುವೆಯನ್ನು ಆತುರದಿಂದ ಮಾಡುವುದು ಸೇರಿದಂತೆ ವಿವಿಧ ಕೃತ್ಯಗಳನ್ನು ಎಸಗಿದ್ದಾರೆ.

ಮದುವೆಯಾದ ಕೆಲವೇ ದಿನಗಳಲ್ಲಿ ಕಿರುಕುಳ ಆರಂಭ ಆಗುತ್ತಿತ್ತು. ಈ ಗ್ಯಾಂಗ್‌ನಿಂದ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೂ ವಂಚನೆಯಾಗಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಪಾಲಕೊಲ್ಲುವಿನಲ್ಲಿ ಈ ಗ್ಯಾಂಗ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಗ್ಯಾಂಗ್‌ನ ಬಲಿಪಶುಗಳು ಇದನ್ನು ತಿಳಿದ ನಂತರ ಒಬ್ಬೊಬ್ಬರಾಗಿ ಹೊರಬರುತ್ತಿದ್ದಾರೆ ಎಂದು ತಿಳಿದುಬಂದಿದೆ.
ಯುವತಿ ಹೇಳಿದ್ದೇನು?
ಈ ಮಧ್ಯೆ, ಈ ಆರೋಪಗಳಿಗೆ ಯುವತಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ತನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ತನ್ನ ವಿರುದ್ಧ ಸುಳ್ಳು ಆರೋಪ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.

ಈ ವಿವಾಹ ಹಗರಣ ಕೊನಸೀಮಾ ಪ್ರದೇಶದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಸಂತ್ರಸ್ತರು ಯುವತಿಯ ಮೇಲೆ ವಂಚನೆ ಆರೋಪ ಮಾಡುತ್ತಿದ್ದರೆ, ಯುವತಿ ತನಗೆ ಏನೂ ತಿಳಿದೇ ಇಲ್ಲ ಎಂದು ಹೇಳುತ್ತಿದ್ದಾಳೆ.

TAGGED:Young woman marries 12 times in two years: Divorcees are her target
Share This Article
Facebook Twitter Copy Link Print
Previous Article Heavy rain ವಯನಾಡಿನಲ್ಲಿ ಭಾರೀ ಮಳೆ – 12 ಜಿಲ್ಲೆಗಳಿಗೆ ಅಲರ್ಟ್ ಘೋಷಣೆ
Next Article ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ಮನನೊಂದು ಜೀವ ಕಳೆದುಕೊಂಡ ವೃದ್ಧ ದಂಪತಿ

Popular Posts

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

4 Min Read
ಕರ್ನಾಟಕದೇಶಪ್ರಮುಖ

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read
ಕರ್ನಾಟಕಪ್ರಮುಖ

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read
ಕರ್ನಾಟಕದೇಶಪ್ರಮುಖ

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Social Networks

Facebook-f Instagram Twitter
Welcome Back!

Sign in to your account

Lost your password?