newsics.com
ಹೊಸದಿಲ್ಲಿ: ರಾಷ್ಟ್ರಪತಿ ದೌಪದಿ ಮುರ್ಮು ಅವರು ಇಂದು 67ನೇ ಹುಟ್ಟಹಬ್ಬದಂದು ಡೆಹ್ರಾಡೂನ್ ರಾಷ್ಟ್ರೀಯ ಅಂಗವಿಕಲರ ಸಬಲೀಕರಣ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಂಗವಿಕಲರ ಸಬಲೀಕರಣ ಸಂಸ್ಥೆಯ ವಿದ್ಯಾರ್ಥಿಗಳು ಹಾಡಿನ ಮೂಲಕ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಅವರು ಭಾವುಕರಾಗಿದ್ದಾರೆ.
ಕಾರ್ಯಕ್ರಮದ ಸಮಯದಲ್ಲಿ, ದೃಷ್ಟಿ ದೋಷವುಳ್ಳ ವಿದ್ಯಾರ್ಥಿಗಳು ‘ಬಾರ್-ಬಾರ್ ದಿನ್ ಯೇ ಆಯೇʼ ಹಾಡನ್ನು ಹಾಡುತ್ತಾ, ದ್ರೌಪದಿ ಮುರ್ಮು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಇದನ್ನು ಕೇಳಿ ಭಾವುಕರಾದ ದ್ರೌಪದಿ ಮುರ್ಮು ಅವರು, ಕರವಸ್ತ್ರದಿಂದ ಕಣ್ಣೀರು ಒರೆಸಲು ಪ್ರಾರಂಭಿಸಿದರು. ವಿದ್ಯಾರ್ಥಿಗಳ ಹಾಡನ್ನು ಕೇಳಿ ರಾಷ್ಟ್ರಪತಿಗಳು ಸಂತೋಷಪಟ್ಟರು. ಈ ದೃಶ್ಯದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕಾರ್ಯಕ್ರಮದಲ್ಲಿ ಉತ್ತರಾಖಂಡ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ (ನಿವೃತ್ತ) ಮತ್ತು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕೂಡ ಉಪಸ್ಥಿತರಿದ್ದರು.
https://x.com/ANI/status/1935945960741343347?ref_src=twsrc%5Etfw%7Ctwcamp%5Etweetembed%7Ctwterm%5E1935945960741343347%7Ctwgr%5Ed63c441f777467f98baa79d69ded6a81bfae2f80%7Ctwcon%5Es1_c10&ref_url=https%3A%2F%2Fvijaykarnataka.com%2Fnews%2Findia%2Fdroupadi-murmu-tears-gets-emotional-students-birthday-wishes-to-her-with-a-song%2Farticleshow%2F121972565.cms