newsics.com
ಹುಬ್ಬಳ್ಳಿ :ಮದುವೆ ಮನೆಯೊಂದರಲ್ಲಿ ಸಾಂಬಾರು ಮೈಮೇಲೆ ಬಿದ್ದು ಗಾಯಗೊಂಡಿದ್ದ ಎರಡೂವರೆ ವರ್ಷದ ಬಾಲಕಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.
ಚನ್ನಾಪುರ ಗ್ರಾಮದ ಮಕ್ತುಮ್ ಸಾಬ್ ಸನದಿ ಅವರ ಪುತ್ರಿ ರುಕ್ಸಾನಾಬಾನು, ನಾಲ್ಕು ದಿನಗಳ ಹಿಂದೆ ಸುಡುವ ಸಾಂಬಾರು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು.
ಬಾಲಕಿಯ ದೇಹದ ಬಹುತೇಕ ಭಾಗಗಳು ಸುಟ್ಟುಹೋಗಿತ್ತು.ಪೋಷಕರು ತಕ್ಷಣ ಬಾಲಕಿಯನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ.