newsics.com
ಉಡುಪಿ: ಹೆಂಡತಿ ಯಾವಾಗಲೂ ಮೊಬೈಲ್ ನಲ್ಲಿ ಕಾಲಕಳೆಯುತ್ತಾಳೆ ಎಂದು ಕೋಪಗೊಂಡ ಪತಿ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಉಡುಪಿಯ ಬ್ರಹ್ಮಾವರ ತಾಲೂಕಿನ ಹುಲಿಯಾಣ ಗ್ರಾಮದ ಹೊಸಮಠ ಗ್ರಾಮದಲ್ಲಿ ನಡೆದಿದೆ.
ರೇಖಾ ಪತಿಯಿಂದಲೇ ಹತ್ಯೆಯಾದ ಮಹಿಳೆ. ಗಣೇಶ್ ಪೂಜಾರಿ ಪತ್ನಿಯನ್ನೇ ಕೊಂದ ಪತಿ.
ಪತ್ನಿ ರೇಖಾ ಸದಾಕಾಲ ಮೊಬೈಲ್ ನಲ್ಲಿಯೇ ಇರುತ್ತಿದ್ದಳು. ಇದರಿಂದ ಪತಿ-ಪತ್ನಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಇದೇ ವಿಚಾರವಾಗಿ ಕ್ಯಾತೆ ತೆಗೆದ ಗಂಡ ಈಗ ಪತ್ನಿಯನ್ನೇ ಕತ್ತಿಯಿಂದ ಕಡಿದು ಹತ್ಯೆ ಮಾಡಿದ್ದಾನೆ.
ಕುಡಿತದ ಚಟವನ್ನೂ ಹೊಂದಿದ್ದ ಆರೋಪಿ, ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದನಂತೆ. ಈಗ ಪತ್ನಿ ಮೊಬೈಲ್ ನಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದಳು ಎಂದು ನೆಪ ಹೇಳಿ ಆಕೆಯನ್ನೇ ಹತ್ಯೆ ಮಾಡಿದ್ದಾನೆ.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.