newsics.com
ಮದ್ದೂರು : ಪಟ್ಟಣದಲ್ಲಿ ಹುಚ್ಚನಾಯಿಯೊಂದು ದಾಳಿಗೆ ಸುಮಾರು 13 ಜನರಿಗೆ ಗಾಯಗೊಳಿಸುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಪಟ್ಟಣದ ರಾಮ್ ರಹೀಮ್ ನಗರ, ಸ್ವಾಮಿ ವಿವೇಕಾನಂದ ನಗರದ ಸುಮಾರು 13 ಜನರ ಮೇಲೆ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಎಲ್ಲರಿಗೂ ಪಟ್ಟಣದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಕೆಲವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಗುರುವಾರ ಬೆಳಗ್ಗೆ ಹುಚ್ಚುನಾಯಿಂದು ಏಕಾಏಕಿ ದಾಳಿ ನಡೆಸಿದೆ. ಬೀದಿಗಳಲ್ಲಿ ಸಿಕ್ಕ ಮಕ್ಕಳು, ವಯೋವೃದ್ಧರು, ಸಾರ್ವಜನಿಕರಿಗೆ ಕಚ್ಚಿದೆ ಇದರಿಂದ ಕೆಲಕಾಲ ಸಾರ್ವಜನಿಕರಲ್ಲಿ ಆತಂಕ ಸೃಷ್ಠಿ ಮಾಡಿತ್ತು.
ಅಧಿಕಾರಿಗಳ ವಿರುದ್ಧ ಆಕ್ರೋಶ: ಪಟ್ಣಣದ ಸೇರಿದಂತೆ ತಾಲೂಕಿನಾದ್ಯಂತ ಅಕ್ರಮ ಕಸಾಯಿಖಾನೆಹಳು ಹೆಚ್ಚಿದೆ ಈ ಕಾರಣದಿಂದ ನಾಯಿಗಳು ಹಾವಳಿ ದಿನೆ ದಿನೇ ಮೀತಿ ಮೀರಿದ್ದು, ಪ್ರತಿನಿತ್ಯ ನಾಯಿಗಳು ಸಾರ್ವಜನಿರಿಗೆ ಕಚ್ಚಿ ಗಾಯಗೊಳಿಸುತ್ತಿದ್ದರುವ ಪ್ರಕರಣಗಳ ಕೇಳಿ ಬರುತ್ತಿದ್ದರು. ಸಂಬAಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.