newsics.com
ಹೊಸದಿಲ್ಲಿ: ಲಿಂಗ ಪರಿವರ್ತನೆ ಮಾಡಿಕೊಂಡ ತೃತೀಯ ಲಿಂಗಿ ಕ್ರಿಕೆಟಿಗರನ್ನು ಬೆಂಬಲಿಸುವಂತೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಮನವಿ ಮಾಡಿದ್ದಾರೆ.
ಆರ್ಯನ್ ಕಾಲಾನಂತರದಲ್ಲಿ ಅನಯಾ ಆಗಿ ಬದಲಾದರು. ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ (ಎಚ್ಆರ್ಟಿ) ನಂತರ ಕ್ರೀಡಾಪಟುವಾಗಿ ತಮ್ಮ ಪ್ರಯಾಣ ಆರಂಭಿಸಿದರು. ಇದಕ್ಕೆ ಸಂಬಂಧಿಸಿದ ಎಂಟು ಪುಟಗಳ ಕ್ರೀಡಾಪಟು ಪರೀಕ್ಷಾ ವರದಿಯನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅನಯಾ ವೀಡಿಯೊವೊಂದನ್ನು ಹಂಚಿಕೊಂಡಿದ್ದು, ಮಹಿಳಾ ಕ್ರಿಕೆಟ್ನಲ್ಲಿ ಭಾಗವಹಿಸಲು ತಾನು ಅರ್ಹಳಾಗಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.
ಮೊದಲ ಬಾರಿಗೆ, ಟ್ರಾನ್ಸ್ ಮಹಿಳಾ ಕ್ರೀಡಾಪಟುವಾಗಿ ನನ್ನ ಪ್ರಯಾಣವನ್ನು ದಾಖಲಿಸುವ ವೈಜ್ಞಾನಿಕ ವರದಿಯನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಕಳೆದ ವರ್ಷದಲ್ಲಿ ನಾನು ಹಾರ್ಮೋನ್ ಚಿಕಿತ್ಸೆಯನ್ನು ಪ್ರಾರಂಭಿಸಿದ ನಂತರ ರಚನಾತ್ಮಕ ಶಾರೀರಿಕ ಮೌಲ್ಯಮಾಪನಗಳಿಗೆ ಒಳಗಾಗಿದ್ದೇನೆ. ಈ ವರದಿಯು ನನ್ನ ಪರಿವರ್ತನೆಯ ನೈಜ, ಅಳೆಯಬಹುದಾದ ಪರಿಣಾಮವನ್ನು ಸೆರೆಹಿಡಿಯುತ್ತದೆ ಹೊರತು ಯಾವುದೇ ಅಭಿಪ್ರಾಯಗಳನ್ನಲ್ಲ ಅಥವಾ ಊಹೆಗಳನಲ್ಲ. ಆದರೆ ಇದು ಡೇಟಾ ಎಂದು ಅನಯಾ ಹೇಳಿದ್ದಾರೆ.
ವಿಜ್ಞಾನವು ನಾನು ಮಹಿಳಾ ಕ್ರಿಕೆಟ್ಗೆ ಅರ್ಹಳಾಗಿದ್ದೇನೆ ಎಂದು ಹೇಳುತ್ತದೆ. ಈಗ, ಜಗತ್ತು ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧವಾಗಿದೆಯೇ? ಎಂದು ಅನಾಯಾ ವೀಡಿಯೊಗೆ ಕ್ಯಾಪ್ಷನ್ ನೀಡಿದ್ದಾರೆ.
https://www.instagram.com/reel/DLA12b3sT8n/?igsh=MWg5d3RkcjhmNTk2bA==