Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > Love Life: ತಾನು ಪ್ರೀತಿಸುವ ಹುಡುಗನಿಗಾಗಿ ಒಬ್ಬ ಹುಡುಗಿ ಏನೆಲ್ಲಾ ಮಾಡ್ತಾಳೆ?
ರಿಲೇಷನ್‌ಶಿಪ್

Love Life: ತಾನು ಪ್ರೀತಿಸುವ ಹುಡುಗನಿಗಾಗಿ ಒಬ್ಬ ಹುಡುಗಿ ಏನೆಲ್ಲಾ ಮಾಡ್ತಾಳೆ?

Share
2 Min Read
SHARE

newsics.com

ಒಬ್ಬ ಹುಡುಗಿ ತನ್ನ ನಿಸ್ವಾರ್ಥ, ನಿಷ್ಕಲ್ಮಶ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸುತ್ತಾಳೆ ಎಂಬುದನ್ನು ತಿಳಿಬೇಕಾ ಹಾಗಿದ್ರೆ ಆಕೆಯಲ್ಲಿ ಈ ಕೆಲವು ಗುಣಗಳಿದ್ರೆ, ಆಕೆ ನಿಮ್ಮನ್ನು ಖಂಡಿತವಾಗಿಯೂ ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡ್ತಾಳೆ ಎಂದರ್ಥ.

ಪ್ರತಿಯೊಂದು ಸಣ್ಣ ವಿಷಯಕ್ಕೂ ಗಮನ: ಒಬ್ಬ ಹುಡುಗಿ, ತಾನು ನಿಜವಾಗಿಯೂ ಪ್ರೀತಿ ಮಾಡ್ತಾಳೆ ಎಂದಾದ್ರೆ, ಆಕೆ ತಾನು ಪ್ರೀತಿಸುವ ಹುಡುಗನ ಪ್ರತಿಯೊಂದು ಸಣ್ಣ ವಿಷಯಕ್ಕೂ ಗಮನವನ್ನು ಕೊಡುತ್ತಾಳೆ. ಆಕೆ ಆತನ ಕಷ್ಟ-ಸುಖ ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತಾಳೆ. ಊಟ ತಿಂಡಿಯಿಂದ ಹಿಡಿದು ಆರೋಗ್ಯದವರೆಗೆ ಆಕೆ ಹೆಜ್ಜೆ ಹೆಜ್ಜೆಗೂ ತನ್ನ ಹುಡುಗನನ್ನು ಬಹಳ ಕೇರ್‌ ಮಾಡುತ್ತಾಳೆ.

ಕನಸುಗಳಿಗೆ ಬೆಂಬಲ: ಒಬ್ಬ ಹುಡುಗಿ ಯಾವಾಗಲೂ ತಾನು ಪ್ರೀತಿಸುವ ಅಥವಾ ನನ್ನ ಹುಡುಗ ಸಂತೋಷವಾಗಿರಬೇಕು ಎಂದು ಬಯಸುತ್ತಾಳೆ. ತನ್ನ ಹುಡುಗನ ಕನಸುಗಳನ್ನು ನನಸಾಗಿಸಲು ಹಾಗೂ ಆತನ ಪ್ರತಿಯೊಂದು ಹೆಜ್ಜೆಯಲ್ಲೂ ಆತನ ಜೊತೆಯಾಗಿ ನಿಂತು, ಬೆಂಬಲ ನೀಡುತ್ತಾಳೆ. ತನ್ನ ಹುಡುಗನ ಕನಸು ನನಸಾಗಿಸಲು ತನ್ನಿಂದಾಗುವ ಎಲ್ಲಾ ಸಹಾಯವನ್ನು ಮಾಡಲು ಬಯಸುತ್ತಾಳೆ.

ಕಷ್ಟದ ಸಮಯದಲ್ಲಿ ನಿಮ್ಮ ಜೊತೆ ನಿಲ್ಲುತ್ತಾಳೆ: ಕೆಲವರು ನಿಮಗೆ ಕಷ್ಟ ಬಂತು ಅಥವಾ ನಿಮ್ಮ ಕೈಯಲ್ಲಿ ದುಡ್ಡಿಲ್ಲ ಎಂದಾದ್ರೆ ನಿಮ್ಮನ್ನು ನಡು ದಾರಿಯಲ್ಲಿ ಬಿಟ್ಟು ಹೋಗ್ತಾರೆ. ಆದ್ರೆ ನಿಮ್ಮನ್ನು ನಿಮ್ಮನ್ನು ನಿಜವಾಗಿಯೂ ಪ್ರೀತಿಸುವ ಹುಡುಗಿ ನಿಮ್ಮ ಸಂತೋಷದಲ್ಲಿ ಮಾತ್ರವಲ್ಲ ನಿಮ್ಮ ಕಷ್ಟದ ಸಮಯದಲ್ಲೂ ಜೊತೆಯಾಗಿ ನಿಲ್ಲುತ್ತಾಳೆ. ನಿಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾಗಿ ನಿಂತು ನಿಮಗೆ ಭರವಸೆ ತುಂಬುತ್ತಾಳೆ.

ನಿಮ್ಮ ಸಣ್ಣ ತಪ್ಪುಗಳನ್ನು ಗಂಭೀರವಾಗಿ ಪರಗಣಿಸುವುದಿಲ್ಲ: ಕೆಲವರು ಸಣ್ಣ ತಪ್ಪುಗಳನ್ನೇ ದೊಡ್ಡ ವಿಷಯವನ್ನಾಗಿ ಮಾಡಿ, ಬ್ರೇಕಪ್‌ ಮಾಡಿ ಬಿಡ್ತಾರೆ. ಆದ್ರೆ ಒಬ್ಬ ಹುಡುಗಿ ನಿಮ್ಮನ್ನು ನಿಜವಾಗಿಯೂ ಪ್ರೀತಿ ಮಾಡ್ತಾಳೆ ಎಂದಾದ್ರೆ, ಆಕೆ ನೀವು ಮಾಡುವ ಸಣ್ಣಪುಟ್ಟ ತಪ್ಪುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬದಲಾಗಿ ಆ ತಪ್ಪುಗಳನ್ನು ತಿದ್ದಿ ನಿಮ್ಮನ್ನು ಸರಿ ದಾರಿಗೆ ತರಲು ಯತ್ನಿಸುತ್ತಾಳೆ. ಜೊತೆಗೆ ನೀವು ಹೇಗಿದ್ದೀರೋ ಹಾಗೆಯೇ ನಿಮ್ಮನ್ನು ಸ್ವೀಕರಿಸುತ್ತಾಳೆ.

ನಿಮ್ಮ ಮೇಲೆ ಅಪಾರವಾದ ನಂಬಿಕೆ ಇಟ್ಟಿರುತ್ತಾಳೆ: ಒಬ್ಬ ಹುಡುಗಿ ನಿಮ್ಮನ್ನು ನಿಜವಾಗಿಯೂ ಪ್ರೀತಿ ಮಾಡ್ತಾಳೆ ಎಂದಾದ್ರೆ ಆಕೆ ನಿಮ್ಮನ್ನು ಸಂಪೂರ್ಣವಾಗಿ ನಂಬುತ್ತಾಳೆ. ನಿಮಗೆ ಆಕೆಯ ಹೃದಯದಲ್ಲಿ ವಿಶೇಷ ಸ್ಥಾನವನ್ನು ನೀಡುತ್ತಾಳೆ. ಜೊತೆಗೆ ಆಕೆ ನಿಮ್ಮನ್ನು ಎಂದಿದೂ ಅನುಮಾನಿಸುವುದಿಲ್ಲ.

ನಿಮ್ಮನ್ನು ಕೀಳಾಗಿ ಕಾಣುವುದಿಲ್ಲ: ಒಂದಷ್ಟು ಜನ ತಾವು ಪ್ರೀತಿಸುವ ಹುಡುಗನ ಕೈಯಲ್ಲಿ ಹಣ ಇಲ್ಲ ಅಂತಾದ್ರೆ ಅಥವಾ ಆತ ನಾರ್ಮಲ್‌ ಆಗಿರುವ ಗಿಫ್ಟ್‌ ಕೊಟ್ರೆ, ಅದ್ರ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಆದ್ರೆ ನಿಜವಾಗಿ ಪ್ರೀತಿ ಮಾಡುವ ಹುಡುಗಿ ತನ್ನ ಹುಡುಗನನ್ನು ಎಂದಿಗೂ ಕೀಳಾಗಿ ನೋಡುವುದಿಲ್ಲ. ಬದಲಿಗೆ ಆತನ ಜೊತೆ ಪ್ರತಿ ಕ್ಷಣವೂ ಗೌರವದಿಂದ ವರ್ತಿಸುತ್ತಾಳೆ.

ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಮಳಿಗೆ ಸ್ಥಾಪನೆಗೆ ಮುಂದಾದ BMRCL; ಡಿಸಿಎಂ ಡಿಕೆಶಿ ಹೇಳಿದ್ದೇನು?

TAGGED:Love Life: What will she do for the boy she loves?
Share This Article
Facebook Twitter Copy Link Print
Previous Article ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಮಳಿಗೆ ಸ್ಥಾಪನೆಗೆ ಮುಂದಾದ BMRCL; ಡಿಸಿಎಂ ಡಿಕೆಶಿ ಹೇಳಿದ್ದೇನು?
Next Article Kangana Ranaut ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಬ್ರಾಂಡ್ ಅಂಬಾಸಿಡರ್ ಆಗಿ ಕಂಗನಾ ರನೌತ್ ನೇಮಕ

Popular Posts

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

You Might Also Like

ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್ವಿದೇಶ

iPhone effect ಐಫೋನ್ ಇದ್ರೆ ಮಕ್ಕಳಾಗೋದಿಲ್ವಾ? ಅಮೆರಿಕದ ವರದಿ ನೋಡಿ ಜಗತ್ತೇ ತಲ್ಲಣ! ವರದಿ ಹೇಳ್ತಿರೋದೇನು?

6 Min Read
ರಿಲೇಷನ್‌ಶಿಪ್

ಗಂಡ ಆಫೀಸ್‌ಗೆ ಹೋದ ತಕ್ಷಣ ಸ್ನಾನ, ಕಸ ಗುಡಿಸುವ ಅಭ್ಯಾಸ ನಿಮಗಿದ್ಯಾ?; ಹಾಗಾದ್ರೆ ಎಚ್ಚರವಹಿಸಿ

2 Min Read
ಪ್ರಮುಖಆರೋಗ್ಯರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?