newsics.com
ಬೆಂಗಳೂರು, ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ ಉತ್ಪನ್ನಗಳ ಮಾರಾಟ ಮಳಿಗೆ ತೆರೆಯಲು ಬಿಎಂಆರ್ ಸಿ ಎಲ್ ಮುಂದಾಗಿದೆ. ಇದಕ್ಕೆ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ ಎನ್ನಲಾಗಿದೆ.
ಗುಜರಾತ್ ನ ಅಮೂಲ್ ಉತ್ಪಾದನಾ ಕಂಪನಿಯೊಂದಿಗೆ ಬಿಎಂಆರ್ ಸಿಎಲ್ ಒಪ್ಪಂದ ಮಾಡಿಕೊಂಡಿದ್ದು, ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ ಮಳಿಗೆ ತೆರಲು ನಿರ್ಧರಿಸಿದೆ. ಕಿಯೋಸ್ಕ ಎಂದರೆ ಯಂತ್ರದ ಸಹಾಯದಿಂದ ಬಳಸುವ ಉಪಕರಣವಾಗಿದೆ.
ಪಟ್ಟಂದೂರು ಅಗ್ರಹಾರ ಮೆಟ್ರೋ ನಿಲ್ದಾಣ, ಇಂದಿರಾನಗರ, ಬೆನ್ನಿಗಾನಹಳ್ಳಿ, ಟ್ರಿನಿಟಿ, ಬೈಯ್ಯಪ್ಪನಹಳ್ಳಿ, ಸರ್.ಎಂ.ವಿಶ್ವೇಶ್ವರಯ್ಯ, ನ್ಯಾಷನಲ್ ಕಾಲೇಜು, ಬನಶಂಕರಿ ಮೆಟ್ರೋ ನಿಲ್ದಾಣ ಸೇರಿದಂತೆ ಹತ್ತು ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಮಳಿಗೆ ತೆರಲು ಸಿದ್ಧತೆ ನಡೆಸಿದೆ.
ಬಿಎಂ ಆರ್ ಸಿಎಲ್ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ನಮ್ಮ ರಾಜ್ಯದ ನಂದಿನಿ ಉತ್ಪನ್ನಗಳಿಗೆ ಉತ್ತೇಜನ ನೀಡುವ ಬದಲು ಹೊರ ರಾಜ್ಯದ ಉತ್ಪನ್ನಗಳಿಗೆ ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆ ತೆರಲು ನಿರ್ಧರಿಸಿರುವುದು ಸರಿಯಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಬೆಂಗಳೂರಲ್ಲಿ ಮಾತಾಡಿದ ಡಿಸಿಎಂ ಡಿಕೆಶಿ, ಗ್ಲೋಬಲ್ ಟೆಂಡರ್ ಮೂಲಕ ಬಿಎಂಆರ್ಸಿಎಲ್ ಅಮುಲ್ ಜತೆ ಒಪ್ಪಂದ ಮಾಡಿಕೊಂಡಿದ್ದು, ಈ ಬಗ್ಗೆ ಪರಮಾರ್ಶೆ ಮಾಡಲಾಗಿದೆ. ಟೆಂಡರ್ ನಲ್ಲಿ ನಂದಿನಿ ಭಾಗವಹಿಸಿರಲಿಲ್ಲ. ಇದೀಗ ಈ ವಿಚಾರ ಗಮನಕ್ಕೆ ಬಂದಿದ್ದು, 10 ಮೆಟ್ರೋ ನಿಲ್ದಾಣಗಳ ಪೈಕಿ 8 ರಲ್ಲಿ ನಂದಿನಿ ಮಳಿಗೆಗೆ, ಹಾಗೆ ಈಗಾಗ್ಲೇ ಉಳಿದ 2 ಕಡೆ ಮಾತ್ರ ಓಪನ್ ಮಾಡಲಾಗಿರುವ ಅಮುಲ್ ಸಂಸ್ಥೆಯ ಅಂಗಡಿಗೆ ಅವಕಾಶ ಮಾಡಿಕೊಟ್ಟಿರೋದಾಗಿ ಹೇಳಿದ್ದಾರೆ.
ನಂದಿನಿ ಇದ್ದರೂ ಅಮುಲ್ ಜೊತೆ ಒಪ್ಪಂದ ಯಾಕೆ ಎಂಬ ಪ್ರಶ್ನೆಯನ್ನು ಜನ ಎತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಅಧಿಕಾರಿಗಳ ಜತೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿರೋದಾಗಿ ಡಿಕೆಶಿ ಹೇಳಿದ್ದಾರೆ.
Nacked Flying ಟ್ರಾವೆಲ್ ಪ್ರಿಯರಿಗೆ ಇಷ್ಟವಾಗ್ತಿದೆ ಈ ನೇಕೆಡ್ ಫ್ಲೈಯಿಂಗ್; ಪ್ರಯಾಣಿಕರಿಗೇಕೆ ಇಷ್ಟೊಂದು ಕ್ರೇಜ್?