Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > Russian Soldier Sergey Grabel salvation Ritual in Gokarna ವಿದೇಶಿ ಯೋಧನಿಗೆ ಗೋಕರ್ಣದಲ್ಲಿ ಮುಕ್ತಿ ಕಾರ್ಯ
ವಿದೇಶದೇಶ

Russian Soldier Sergey Grabel salvation Ritual in Gokarna ವಿದೇಶಿ ಯೋಧನಿಗೆ ಗೋಕರ್ಣದಲ್ಲಿ ಮುಕ್ತಿ ಕಾರ್ಯ

Share
1 Min Read
SHARE

newsics.com

ಗೋಕರ್ಣ: ರಷ್ಯಾ-ಉಕ್ರೇನ್ ಯುದ್ಧದಲ್ಲಿ  ವೀರಮರಣವನ್ನಪ್ಪಿದ ರಷ್ಯಾದ ಯೋಧ ಸೆರ್ಗಯ್ ಗ್ರಾಬಲ್‌ಗೆ ಶ್ರಾದ್ಧ ಕಾರ್ಯವನ್ನು ಮುಕ್ತಿ ಮತ್ತು ಸಿದ್ಧಿ ಕ್ಷೇತ್ರವೆಂದೇ ಖ್ಯಾತಿಯಾದ ಕರ್ನಾಟಕದ ಗೋಕರ್ಣ ಮಹಾಬಲೇಶ್ವರ ಕ್ಷೇತ್ರದಲ್ಲಿ ನಡೆಯಿತು.

ಈ ವೈದಿಕ ಧಾರ್ಮಿಕ ಕಾರ್ಯವನ್ನು ಮೃತ ಯೋಧನ ಸಂಬಂಧಿಕರಾದ ಎಲಿನಾ ಆಯೋಜಿಸಿದ್ದು, ಪುರೋಹಿತ ವೇ. ಪ್ರಶಾಂತ ಹಿರೇಗಂಗೆ ಅವರ ನೇತೃತ್ವದಲ್ಲಿ ನಾರಾಯಣ ಬಲಿ ಮತ್ತು ಪಿಂಡ ಪ್ರಧಾನ ಸೇರಿದಂತೆ ಎಲ್ಲ ವಿಧಿ-ವಿಧಾನಗಳು ನೆರವೇರಿದವು.

ಸೆರ್ಗಯ್ ಗ್ರಾಬಲ್‌ಗೆ ರಷ್ಯಾ ಸೇನೆಯಲ್ಲಿ ಸೇವೆ ಸಲ್ಲಿಸಿದ ಇತಿಹಾಸವಿತ್ತು. ಆದರೆ, ಸೇನೆಯನ್ನು ತೊರೆದಿದ್ದ ಅವರು, 2022ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ಕೂಡಲೇ ತಾಯ್ನಾಡಿನ ಕರೆಗೆ ಒಗ್ಗಿ ಮತ್ತೆ ಸೈನ್ಯಕ್ಕೆ ಸೇರಿದ್ದರು. ದುರಾದೃಷ್ಟವಶಾತ್, ಏಪ್ರಿಲ್ 28, 2025ರಂದು ಯುದ್ಧದಲ್ಲಿ ವೀರಮರಣವನ್ನಪ್ಪಿದರು. ಈ ಘಟನೆಯ ಹಿನ್ನೆಲೆಯಲ್ಲಿ, ಅವರ ಆತ್ಮದ ಮೋಕ್ಷಕ್ಕಾಗಿ ಗೋಕರ್ಣದಲ್ಲಿ ಶ್ರಾದ್ಧ ಕಾರ್ಯವನ್ನು ಆಯೋಜಿಸಲಾಯಿತು.

ಗೋಕರ್ಣ ಮಹಾಬಲೇಶ್ವರ ಕ್ಷೇತ್ರದಲ್ಲಿ ನಡೆದ ಈ ಶ್ರಾದ್ಧ ಕಾರ್ಯದಲ್ಲಿ ಸೆರ್ಗಯ್ ಗ್ರಾಬಲ್ ಅವರ ಭಾವಚಿತ್ರವನ್ನಿಟ್ಟು, ಶಾಸ್ತ್ರೋಕ್ತವಾಗಿ ನಾರಾಯಣ ಬಲಿ, ಪಿಂಡ ಪ್ರಧಾನ ಮತ್ತು ಇತರ ವೈದಿಕ ವಿಧಿಗಳನ್ನು ಪುರೋಹಿತ ವೇ. ಪ್ರಶಾಂತ ಹಿರೇಗಂಗೆ ನೇತೃತ್ವದಲ್ಲಿ ನೆರವೇರಿಸಲಾಯಿತು.

 

ಸೆರ್ಗಯ್ ಗ್ರಾಬಲ್, ರಷ್ಯಾದ ಯೋಧರಾಗಿದ್ದವರು, ಒಂದು ದಶಕದ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದಾಗಿನಿಂದ ಇಲ್ಲಿನ ಸಂಸ್ಕೃತಿಯ ಬಗ್ಗೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದರು. ಗೋಕರ್ಣ ಕ್ಷೇತ್ರದೊಂದಿಗೆ 18 ವರ್ಷಗಳ ಒಡನಾಟ ಹೊಂದಿದ್ದ ಅವರು, ಭಾರತಕ್ಕೆ ಭೇಟಿ ನೀಡಿದಾಗಲೆಲ್ಲಾ ಗೋಕರ್ಣಕ್ಕೆ ಭೇಟಿ ನೀಡುತ್ತಿದ್ದರು. ಭಾರತದ ಸಂಸ್ಕೃತಿಯ ಮೇಲಿನ ಅವರ ಪ್ರೀತಿ ಮತ್ತು ಗೋಕರ್ಣದೊಂದಿಗಿನ ಒಡನಾಟವನ್ನು ಗೌರವಿಸುವ ಉದ್ದೇಶದಿಂದ ಅವರ ಸಂಬಂಧಿಕರು ಈ ಕ್ಷೇತ್ರವನ್ನೇ ಆಯ್ಕೆ ಮಾಡಿದರು. ಸೆರ್ಗಯ್ ಅವರಿಗೆ ಗೋಕರ್ಣವು ಕೇವಲ ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲ, ಆಧ್ಯಾತ್ಮಿಕ ತಾಣವಾಗಿತ್ತು. ಇಲ್ಲಿನ ಪವಿತ್ರ ವಾತಾವರಣ ಮತ್ತು ಸಂಸ್ಕೃತಿಯನ್ನು ಅವರು ತಮ್ಮ ಹೃದಯದಲ್ಲಿ ಇಟ್ಟುಕೊಂಡಿದ್ದರು.

 

 

TAGGED:#Russian #Soldier #SergeyGrabel #salvation #Ritual #Gokarna
Share This Article
Facebook Twitter Copy Link Print
Previous Article ಇದೆಂಥಾ ಕೃತ್ಯ..ಮಗು ಹಠ ಮಾಡುತ್ತೆ ಎಂದು ಮೊಣಕಾಲು, ಮುಖ, ಕೈಗೆ ಬರೆ ಹಾಕಿದ ತಾಯಿ
Next Article Farmer School ಮಂಡ್ಯದಲ್ಲಿ ದೇಶದ ಮೊದಲ ರೈತ ಶಾಲೆ ಆರಂಭ

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಕರ್ನಾಟಕದೇಶಪ್ರಮುಖ

FSSAI Vegan logo ಸಸ್ಯಾಹಾರಿ ಆಹಾರ ಪ್ಯಾಕೆಟ್‌ ಗಳ ಮೇಲೆ FSSAI ಲೋಗೋ ಕಡ್ಡಾಯ

1 Min Read
ದೇಶಪ್ರಮುಖವೈರಲ್

ಮಾಜಿ ಪ್ರೇಯಸಿಗೆ 20 ಬಾರಿ ಇರಿದು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ : ವೈರಲ್ ವಿಡಿಯೋ ನೋಡಿ

1 Min Read
ಕರ್ನಾಟಕದೇಶಪ್ರಮುಖ

Gold-Silver Price Today ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ : ಇಂದಿನ ಬೆಲೆ ಎಷ್ಟು?

1 Min Read
ದೇಶಪ್ರಮುಖಮನರಂಜನೆ

Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?