newsics.com
ಆ್ಯಂಕರ್ ಅನುಶ್ರೀ, ಇದೀಗ ಐಶಾರಾಮಿ ಕಾರೊಂದನ್ನು ಖರೀದಿಸಿ ಸುದ್ದಿಯಲ್ಲಿದ್ದಾರೆ. ಅನುಶ್ರೀ ಕಾರನ್ನು ಖರೀದಿ ಮಾಡಿದ್ದು, ಅದನ್ನು ತನ್ನ ಇನ್‌ಸ್ಟಾ ಸ್ಟೋರಿಯನ್ನು ಹಾಕಿಕೊಂಡಿದ್ದಾರೆ,
ಅನುಶ್ರೀ ಒಂದೊಂದು ಕಾರ್ಯಕ್ರಮವನ್ನು ನಿರೂಪಣೆ ಮಾಡುವುದಕ್ಕೆ ಲಕ್ಷಾಂತರ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಾರೆ.
ಅಂದ್ಹಾಗೆ ಅನುಶ್ರೀ ಖರೀದಿಸಿದ ಹೊಸ ಕಾರಿನ ಹೆಸರು ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್. ನೀಲಿ ಬಣ್ಣದ ಈ ಕಾರು ನೋಡುವುದಕ್ಕಂತೂ ಸಖತ್ ಆಗಿದೆ. ಆನ್‌ಲೈನ್ ಈ ಕಾರಿನ ಬೆಲೆ ಭಲೇ ದುಬಾರಿ. ಈ ಕಾರಿನ ಆರಂಭಿಕ ಬೆಲೆಯೇ 25 ಲಕ್ಷ ರೂಪಾಯಿ. 25 ಲಕ್ಷದಿಂದ ಶುರುವಾದರೆ ಟಾಪ್ ಮಾಡಲ್ ₹40 ಲಕ್ಷದವರೆಗೂ ಹೋಗುತ್ತೆ. ಆದರೆ, ಅವರು ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಕಾರು ಯಾವ ವೇರಿಯೆಂಟ್ ಅನ್ನೋದು ಗೊತ್ತಾಗಿಲ್ಲ. ಸದ್ಯ ಈ ಕಾರಿನ ಬೆಲೆ ಅಂತೂ ದುಬಾರಿ ಅನ್ನೋದಂತೂ ಸದ್ಯ.
ಇನ್ನು ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್‌ನಲ್ಲೊಂದು ವಿಶೇಷತೆಯಿದೆ. ಈ ಕಾರು ಪೆಟ್ರೋಲ್ ಹಾಗೂ ಬ್ಯಾಟರಿ ಎರಡೂ ತಂತ್ರಜ್ಞಾನವನ್ನು ಹೊಂದಿದೆ. ಕಾರು ಚಲಾಯಿಸುವಾಗ ಬ್ಯಾಟರಿ ಮುಗಿದು ಹೋದರೆ, ಪೆಟ್ರೋಲ್‌ಗೆ ಶಿಫ್ಟ್ ಆಗಬಹುದು. ಇದರಿಂದ ಚಾರ್ಜಿಂಗ್ ಪಾಯಿಂಟ್ ಅನ್ನು ಹುಡುಕುವ ಅಗತ್ಯವಿರುವುದಿಲ್ಲ. ಅಲ್ಲಿದೆ ಕಾರಿನ ಮೈಲೇಜ್ ಕೂಡ ಸುಮಾರು 25 ಕಿ.ಮೀ ಪ್ರತಿ ಲೀಟರ್‌ಗೆ ನೀಡುತ್ತದೆ ಎಂದು ಹೇಳಲಾಗಿದೆ.
ಇನ್ನು ಈ ಕಾರಿನ ಬೆಲೆಯಂತೆಯೇ ಸೌಲಭ್ಯಗಳನ್ನು ನೀಡಲಾಗಿದೆ. ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್‌ನಲ್ಲಿ ಸನ್‌ರೂಫ್ ಇದೆ. ಆಟೊಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಅತ್ಯಾಧುನಿಕ ಏಡಾಸ್ ತಂತ್ರಜ್ಞಾನ, ಅತ್ಯದ್ಭುತ ಮ್ಯೂಸಿಕ್ ಸಿಸ್ಟಂ, ಇಂಟಿರೀಯರ್, ಏರ್ ಬ್ಯಾಗ್‌ಗಳು ಸೇಫ್ಟಿ ಸೇರಿದಂತೆ ಹಲವು ಸೌಲಭ್ಯಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ಟೊಯೊಟಾ ಕಾರಿನ ಇಂಜಿನ್‌ಗಳು ಬಾಳಿಕೆಗೆ ಹೆಸರುವಾಸಿಯಾಗಿವೆ. ಹಾಗೇ ಸೆಫ್ಟಿ ವಿಚಾರದಲ್ಲೂ ಕೂಡ ಮುಂದಿದೆ. ಹೀಗಾಗಿ ಅನುಶ್ರೀ ಈ ಕಾರನ್ನು ಖರೀದಿ ಮಾಡಿರಬಹುದೆಂದು ಫ್ಯಾನ್ಸ್ ಗೆಸ್ ಮಾಡುತ್ತಿದ್ದಾರೆ. ಇನ್ನು ಅನುಶ್ರೀ ತಮ್ಮ ಕಾರಿಗೆ ಎಕ್ಸ್ಟ್ರಾ ಫಿಟಿಂಗ್ ಕೂಡ ಮಾಡಿಸಿದ್ದಾರೆ ಎನ್ನಲಾಗಿದೆ. ಸದ್ಯ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
Complaint ತನ್ನ ಸೋಪ್ ಬಳಸಿದ್ದಕ್ಕಾಗಿ ಗಂಡನ ವಿರುದ್ಧ ದೂರು ದಾಖಲಿಸಿದ ಪತ್ನಿ