Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Food Delivery ಝೀರೋ ಕಮಿಷನ್‌, ಆಫ್‌ಲೈನ್‌ನಷ್ಟೇ ಬೆಲೆ; ಫುಡ್ ಡೆಲಿವರಿಗೂ ಇಳಿದ ರ‍್ಯಾಪಿಡೋ!
ಕರ್ನಾಟಕಪ್ರಮುಖ

Food Delivery ಝೀರೋ ಕಮಿಷನ್‌, ಆಫ್‌ಲೈನ್‌ನಷ್ಟೇ ಬೆಲೆ; ಫುಡ್ ಡೆಲಿವರಿಗೂ ಇಳಿದ ರ‍್ಯಾಪಿಡೋ!

Share
2 Min Read
SHARE

newsics.com

ಆಟೋ, ಬೈಕ್ ಟ್ಯಾಕ್ಸಿ ಸೇರಿದಂತೆ ಇನ್ನಿತರ ಸೇವೆಗಳನ್ನು ಒದಗಿಸುತ್ತಿರುವ ರ‍್ಯಾಪಿಡೋ ಇದೀಗ ಫುಡ್ ಡೆಲಿವರಿ ಸೇವೆಯನ್ನು ಒದಗಿಸಲು ಮುಂದಾಗಿದೆ.
ಬೈಕ್ ಟ್ಯಾಕ್ಸಿಗೆ ಹೆಸರಾಗಿರುವ ರ‍್ಯಾಪಿಡೋ ಇದೀಗ ಫುಡ್ ಡೆಲಿವರಿ ಮಾಡಲು ಸಜ್ಜಾಗುತ್ತಿದೆ. ಈ ಮೂಲಕ ಸ್ವಿಗ್ಗಿ ಹಾಗೂ ಝ್ಯೊಮ್ಯಾಟೋಗೆ ಕಠಿಣ ಸ್ಪರ್ಧೆ ನೀಡಲಿದ್ದು, ಕಡಿಮೆ ಕಮಿಷನ್‌ನಲ್ಲಿ ಗ್ರಾಹಕರಿಗೆ ಸೇವೆ ಒದಗಿಸಲಿದೆ. ಈಗಾಗಲೇ ರಾಷ್ಟ್ರೀಯ ಹೋಟೆಲ್ ಒಕ್ಕೂಟಗಳ (NRAI) ಜೊತೆ ಒಪ್ಪಂದದ ಕುರಿತಾಗಿ ರ‍್ಯಾಪಿಡೋ ಮಾತುಕತೆ ನಡೆಸಿದ್ದು, ರೆಸ್ಟೋರೆಂಟ್‌ಗಳೊಂದಿಗಿನ ನಿಯಮಗಳಿಗೆ ಒಪ್ಪಿಗೆ ಸೂಚಿಸಿದೆ ಹಾಗೂ ರೆಸ್ಟೋರೆಂಟ್‌ಗಳಿಗೆ ಕಡಿಮೆ ಕಮಿಷನ್ ದರ ನೀಡುವ ಮೂಲಕ ಹೊಸ ಹೆಜ್ಜೆಹಾಕಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.
NRAI ಮಾಹಿತಿ ಪ್ರಕಾರ, ರ‍್ಯಾಪಿಡೋ ಈ ಮೂಲಕ ಸಣ್ಣ ಮಟ್ಟದ ರೆಸ್ಟೋರೆಂಟ್‌ಗಳಿಗೆ ಸಹಾಯ ಮಾಡಲಿದ್ದು, ಆರ್ಡರ್‌ನ ಬೆಲೆಯ ಆಧಾರದ ಮೇಲೆ ರೆಸ್ಟೋರೆಂಟ್‌ಗಳಿಂದ 8-15% ಕಮಿಷನ್ ವಿಧಿಸುವ ನಿರೀಕ್ಷೆಯಿದೆ. ಝ್ಯೊಮ್ಯಾಟೋ ಮತ್ತು ಸ್ವಿಗ್ಗಿಗೆ ಹೋಲಿಸಿದರೆ ಈ ಕಮಿಷನ್ ದರ ಕಡಿಮೆಯಾಗಿದ್ದು, ಅವುಗಳು 16-30% ಶುಲ್ಕ ವಿಧಿಸುತ್ತವೆ. ರ‍್ಯಾಪಿಡೋ 400 ರೂ.ಗಿಂತ ಕಡಿಮೆಯಿರುವ ಆರ್ಡರ್‌ಗಳಿಗೆ 25 ರೂ. ಮತ್ತು 400 ರೂ.ಗಿಂತ ಹೆಚ್ಚಿನ ಆರ್ಡರ್‌ಗಳಿಗೆ 50 ರೂ. ನಿಗದಿತ ಶುಲ್ಕವನ್ನು ವಿಧಿಸುತ್ತದೆ ಎಂದು ವರದಿಗಳು ತಿಳಿಸಿವೆ.
ಸದ್ಯ ಬೈಕ್, ಆಟೋ, ಪಾರ್ಸೆಲ್, ಕ್ಯಾಬ್ ಎಕಾನಮಿ ಮತ್ತು ಕ್ಯಾಬ್ ಪ್ರೀಮಿಯಂ ಸೇರಿದಂತೆ ಇನ್ನಿತರ ಸೇವೆಗಳನ್ನು ಒದಗಿಸುತ್ತಿರುವ ರ‍್ಯಾಪಿಡೋ ಜೂನ್ ಅಂತ್ಯ ಅಥವಾ ಜುಲೈ ಆರಂಭದಲ್ಲಿ ಫುಡ್ ಡೆಲಿವರಿ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಲಿದೆ ಹಾಗೂ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ತ್ವರಿತವಾಗಿ ಸಿಗುತ್ತದೆ ಸೇವೆಯನ್ನು ನೀಡಲಿದೆ ಎಂದು ತಿಳಿಸಿದೆ.
ಇನ್ನೂ ಸ್ವಿಗ್ಗಿ ಹಾಗೂ ಝೊಮ್ಯಾಟೋ ಷೇರುಗಳ ಮೌಲ್ಯದಲ್ಲಿ ಇಳಿಕೆಯಾಗಿದ್ದು, ಸ್ವಿಗ್ಗಿ ಷೇರು ಮೌಲ್ಯ 2.79% (10.45 ರೂ.) ಕುಸಿದು 364.10ರೂ.ನಲ್ಲಿ ವ್ಯವಹಾರ ಮುಗಿಸಿದರೆ, ಝೋಮ್ಯಾಟೋ ಮೌಲ್ಯ 1.92% (4.87 ರೂ.) ಕುಸಿದು 256.84 ರೂ.ನಲ್ಲಿ ವ್ಯವಹಾರ ಮುಗಿಸಿದೆ
ಯಾವುದೇ ಕಮಿಷನ್‌, ಪ್ಯಾಕೇಜಿಂಗ್‌ ಶುಲ್ಕ ಇಲ್ಲ
ಸ್ವಿಗ್ಗಿ ಹಾಗೂ ಜೊಮ್ಯಾಟೊದಲ್ಲಿ ಕಮಿಷನ್‌ ವೆಚ್ಚ 20ರಿಂದ 30%ಗಳಷ್ಟಿದ್ದು, ಜೊಮ್ಯಾಟೊದಲ್ಲಿ ಯಾವುದೇ ಪ್ಲಾಟ್‌ಫಾರ್ಮ್‌ ಶುಲ್ಕ, ಪ್ಯಾಕೇಜಿಂಗ್‌ ಶುಲ್ಕ ಹಾಗೂ ಕಮಿಷನ್‌ ವಿಧಿಸುವುದಿಲ್ಲ ಎಂದು ತಿಳಿಸಿದೆ.
ಡೆಲಿವರಿ ಶುಲ್ಕ ಹೇಗೆ?
ಇನ್ನು ರಾಪಿಡೊ ಫುಡ್‌ ಡೆಲಿವರಿಯಲ್ಲಿ 100 ರೂಗಿಂತ ಮೇಲ್ಪಟ್ಟ ಆರ್ಡರ್‌ಗೆ ಪ್ರತಿ 5 ಕಿಲೋಮೀಟರ್‌ಗೆ 25 ರೂ ಡೆಲಿವರಿ ಶುಲ್ಕವಿರಲಿದೆ. ಇದರಲ್ಲೂ ಎರಡು ಬಗೆಯಿದ್ದು, 100 ರೂಗಳಿಗಿಂತ ಕಡಿಮೆ ಮೌಲ್ಯದ ಆರ್ಡರ್‌ಗೆ ಗ್ರಾಹಕ 20 ರೂ ಕಟ್ಟಬೇಕಾಗುತ್ತದೆ ಹಾಗೂ ರೆಸ್ಟೋರೆಂಟ್‌ 10 ರೂ ಪಾವತಿಸಲಿದೆ.

https://x.com/pathikghugare/status/1932436847730503866?ref_src=twsrc%5Etfw%7Ctwcamp%5Etweetembed%7Ctwterm%5E1932436847730503866%7Ctwgr%5E4169f3fc064933c5cc4fd2c31621d04ff1b42224%7Ctwcon%5Es1_c10&ref_url=https%3A%2F%2Fm.test.in%2F

Water tank explodes ಶೂಟಿಂಗ್ ವೇಳೆ ವಾಟರ್ ಟ್ಯಾಂಕ್ ಸ್ಫೋಟ: ಪ್ರವಾಹ ಸ್ಥಿತಿ, ಹಲವರಿಗೆ ಗಾಯ, ವಿಡಿಯೋ ನೋಡಿ

TAGGED:See how much less you spend on Rapido than on Swiggy and Zomato!
Share This Article
Facebook Twitter Copy Link Print
Previous Article Water tank explodes ಶೂಟಿಂಗ್ ವೇಳೆ ವಾಟರ್ ಟ್ಯಾಂಕ್ ಸ್ಫೋಟ: ಪ್ರವಾಹ ಸ್ಥಿತಿ, ಹಲವರಿಗೆ ಗಾಯ, ವಿಡಿಯೋ ನೋಡಿ
Next Article ಮಹಾ ಮಳೆ: ಸಿದ್ಧಾರ್ಥ್ ಗಾರ್ಡನ್ ಬಳಿ ಪ್ರವೇಶದ್ವಾರ ಕುಸಿದುಬಿದ್ದು ಮೂವರು ದುರ್ಮರಣ

Popular Posts

CM Vijay Divorce ವಿರಸ ಮರೆತು ಮತ್ತೆ ಒಂದಾಗ್ತಾರ ಸಿಎಂ ವಿಜಯ್‌-ಸಂಗೀತಾ?ವಿಜಯ್‌ ದಂಪತಿ ಒಂದಾಗಲು ಕಾರಣ ಯಾರು?

2 Min Read

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

You Might Also Like

ಕರ್ನಾಟಕಪ್ರಮುಖ

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read
ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?