newsics.com
ದಿನದಿಂದ ದಿನಕ್ಕೆ ಜನರ ರೀಲ್ಸ್ ಹುಚ್ಚು ಹೆಚ್ಚಾಗುತ್ತಿದೆ. ಅದರಲ್ಲೂ ಕೆಲವರು ಫೇಮಸ್ ಆಗ್ಬೇಕು ಅಂತ ಚಿತ್ರ ವಿಚಿತ್ರ ರೀಲ್ಸ್ಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇದರ ಸಲುವಾಗಿ ಪ್ರಾಣಕ್ಕೆ ಅಪಾಯ ತಂದುಕೊಂಡವರೂ ಇದ್ದಾರೆ. ಹೌದು ಇಲೊಬ್ಬಳು ತಾಯಿ ತನ್ನ ಮಗಳನ್ನು ಸಾವಿನ ಬಾಯಿಗೆ ತಳ್ಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ ದಲ್ಲಿ ಸಮುದ್ರದ ಬಳಿ ಬಾಲಕಿ ನಿಂತಿದ್ದಾಳೆ.ಅಲೆಗಳು ಅವಳ ಕಡೆಗೆ ವೇಗವಾಗಿ ಬರುತ್ತಿವೆ. ಈ ಸಮಯದಲ್ಲಿ, ಹುಡುಗಿಯ ತಾಯಿ ವೀಡಿಯೊ ಮಾಡುತ್ತಿದ್ದಾಳೆ, ಅಪಾಯವನ್ನು ನೋಡಿದರೂ ಇದೆಲ್ಲವೂ ಮುಂದುವರಿಯುತ್ತದೆ. ಅಷ್ಟರಲ್ಲಿ, ಇದ್ದಕ್ಕಿದ್ದಂತೆ ಬಲವಾದ ಅಲೆ ಬಂದು ಹುಡುಗಿಯನ್ನು ಎಳೆದುಕೊಂಡು ಹೋಗುತ್ತದೆ. ಇದಾದ ನಂತರ ಅಲ್ಲಿದ್ದ ಜನರೆಲ್ಲರೂ ಕೂಗಾಡಲು ಪ್ರಾರಂಭಿಸುತ್ತಾರೆ.
ಈ ವಿಡಿಯೋ ಎಲ್ಲಿಂದ ಬಂದಿದೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಕೆಲವರು ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.