newsics.com
ಹಿಂದಿ ಮಾತನಾಡುವ ಮಹಿಳೆಯೊಬ್ಬಳು ಆಟೋ ಬಾಡಿಗೆ ವಿಚಾರಕ್ಕೆ ಬೆಂಗಳೂರಿನ ಆಟೋ ಚಾಲಕನ ಜೊತೆಗೆ ಜಗಳ ಮಾಡಿದ್ದು,ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಹಿಂದಿ ಮಾತನಾಡುವ ಮಹಿಳೆಯೊಬ್ಬರು ಆಟೋ ಚಾಲಕನ ಜೊತೆಗೆ ಆಟೋ ಬಾಡಿಗೆ ವಿಚಾರವಾಗಿ ಜಗಳ ಆಡುತ್ತಿರುವುದನ್ನು ಕಾಣಬಹುದು. ಆಟೋ ಹತ್ತುವ ಸಮಯದಲ್ಲಿ 296 ರೂ ತೋರಿಸುತ್ತಿತ್ತು, ಈಗ 390 ರೂ ಆಟೋ ಬಾಡಿಗೆ ಕೇಳ್ತಾ ಇದ್ದೀರಾ ಎಂದು ಪ್ರಶ್ನೆ ಮಾಡಿದ್ದಾಳೆ. ಈ ವೇಳೆಯಲ್ಲಿ ಆಟೋ ಅಪ್ಲಿಕೇಶನ್ ನಲ್ಲಿ ಎಷ್ಟು ತೋರಿಸುತ್ತಿದೆ ನೋಡಿ ಎಂದು ಆಟೋ ಚಾಲಕನು ತೋರಿಸಿದ್ದಾನೆ.
ಆಟೋ ಚಾಲಕನು ಏನೇ ಹೇಳಿದ್ರೂ ಕೂಡ ಕ್ಯಾರೇ ಎನ್ನದೇ ಹಿಂದಿ ಮಹಿಳೆಯೂ ಮಾತನಾಡಿದ್ದಾಳೆ. ಈ ವೇಳೆಯಲ್ಲಿ ಕೋಪಗೊಂಡ ಆಟೋ ಚಾಲಕನು ಕನ್ನಡದಲ್ಲಿ ಮಾತನಾಡು ಎಂದಿದ್ದಾನೆ. ಹೀಗೆನ್ನುತ್ತಿದ್ದಂತೆ ಸಿಟ್ಟಿನಿಂದ ಮಹಿಳೆಯೂ ನಾವು ಬೆಂಗಳೂರಿನ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದೇವೆ, ನಿನಗೇನಾದರೂ ಗೊತ್ತಿದೆಯಾ ಎಂದು ಪ್ರಶ್ನಿಸಿರುವುದನ್ನು ಕಾಣಬಹುದು. ಈ ವಿಡಿಯೋವನ್ನು @VigilntHindutva ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾಗಿದೆ.ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.