newsics.com
ಬೆಂಗಳೂರು: ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಪೂರ್ಣಪ್ರಜ್ಞಾ ನಗರದ ಹೋಟೆಲ್ ಓಯೋ ರೂಂ ನಲ್ಲಿ ನಡೆದಿದೆ. ಹರಿಣಿ (36) ಹತ್ಯೆಯಾದ ಮಹಿಳೆ. ಪ್ರಿಯತಮ್ ಯಶಸ್ ಹರುಣಿಯನ್ನು ಹತ್ಯೆಗೈದಿರುವ ಆರೋಪಿ
ಹರಿಣಿಯನ್ನು ಹೋಟೆಲ್ ರೂಂ ಗೆ ಕರೆಸಿ ಟೆಕ್ಕಿ ಯಶಸ್, ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಪ್ರಿಯತಮೆ ಅನೈತಿಕ ಸಂಬಂಧ ಹೊಂದಿದ್ದಳು ಎಂಬ ಆರೋಪ ಕೇಳಿಬಂದಿದೆ. ಇದರಿಂದ ಕೋಪಗೊಂಡಿದ್ದ ಟೆಕ್ಕಿ ಯಶಸ್ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.