newsics.com
ದಿನಬೆಳಗಾದ್ರೆ ಸಾಕು ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಅದರಲ್ಲಿ ಕೆಲವೊಂದು ವಿಡಿಯೋಗಳು ಜನರಿಗೆ ಉತ್ತಮ ಸಂದೇಶಗಳನ್ನು ನೀಡಿದ್ರೆ, ಇನ್ನೂ ಕೆಲವೊಂದು ತುಂಬಾನೇ ತಮಾಷೆಯಾಗಿರುತ್ತದೆ.
ಇದೀಗ, ಕೋಲ್ಕತ್ತಾದ ಮಹಿಳೆಯೊಬ್ಬರು ತಮ್ಮ ಅತ್ತೆ ರಾತ್ರಿಯ ವೇಳೆ ತಾವು ಮಲಗುವ ಕೋಣೆಗೆ ಬರುತ್ತಾರೆ ಎಂದು ಆರೋಪಿಸಿ, ಸಿಸಿಟಿವಿ ದೃಶ್ಯಾವಳಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ರಾತ್ರಿ ವೇಳೆ ತಾವು ಮತ್ತು ತಮ್ಮ ಪತಿ ಮಲಗಿದ್ದಾಗ ಅಸಾಮಾನ್ಯ ಶಬ್ದಗಳನ್ನು ಸಹ ಕೇಳಿದ್ದರು. ಆರಂಭದಲ್ಲಿ ದೆವ್ವ ಅಥವಾ ಇನ್ನಾವುದೋ ಎಂದು ಭಾವಿಸಿದ ಅವರು, ಸತ್ಯವನ್ನು ಪತ್ತೆಹಚ್ಚಲು ಮಲಗುವ ಕೋಣೆಯಲ್ಲಿ ಮೋಷನ್ ಆಕ್ಟಿವೇಟೆಡ್ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರು. ಆದರೆ ಆ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯ ನೋಡಿ ಇಡೀ ಕುಟುಂಬವೇ ಬೆಚ್ಚಿಬೀಳಿತ್ತು.
ದೃಶ್ಯಾವಳಿಯಲ್ಲಿ, ರಾತ್ರಿಯ ವೇಳೆ ಅತ್ತೆ ಮಲಗುವ ಕೋಣೆಗೆ ನುಗ್ಗುವುದು ಕಂಡುಬಂದಿದೆ. ,ಅತ್ತೆ ಕೇವಲ ಕೋಣೆಗೆ ಪ್ರವೇಶಿಸುವುದನ್ನು ಮಾತ್ರವಲ್ಲದೆ, ಅವರು ನಿದ್ದೆಯಲ್ಲಿರುವಾಗ ಅವರ ಬಳಿ ನಿಂತು ಕೆಲವು ಟೀಕೆಗಳನ್ನು ಮಾಡಿದ್ದಾರೆ. ಟಿಕ್‌ಟಾಕ್‌ನಲ್ಲಿ ಹಂಚಿಕೊಂಡ ಈ ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ವಿಡಿಯೋದಲ್ಲಿ ಆಡಿಯೊ ಇಲ್ಲದಿದ್ದರೂ, ಟೆಕ್ಸ್ಟ್ ಓವರ್‌ಲೇ ಮೂಲಕ ಮಹಿಳೆ ವಿವರಿಸಿದ್ದಾರೆ. ಅತ್ತೆ, “ನೀವು ಇದಕ್ಕೆ ಯೋಗ್ಯರಲ್ಲ” ಮತ್ತು “ನಾನು ನಿನ್ನನ್ನು ದ್ವೇಷಿಸುತ್ತೇನೆ” ಎಂಬಂತಹ ನಕಾರಾತ್ಮಕ ಟೀಕೆಗಳನ್ನು ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://www.instagram.com/reel/DHqsjOwty9Y/?igsh=enRiNnhxanRmMHQy