newsics.com
ಅಥಣಿ: ಹಳ್ಳದಲ್ಲಿ ಸಾಗುತ್ತಿದ್ದಂತ ವೇಳೆಯಲ್ಲಿ ನಿರಂತರವಾಗಿ ಸುರಿಯುತ್ತಿರುವಂತ ಮಳೆಯಿಂದಾಗಿ ದಾರಿ ಕಾಣದೇ ಎತ್ತಿನ ಗಾಡಿಯೊಂದು ಮುಗುಚಿ ಬಿದ್ದ ಪರಿಣಾಮ ಇಬ್ಬರು ಮಕ್ಕಳು, ಒಂದು ಎತ್ತು ಸಾವನ್ನಪ್ಪಿರುವಂತ ಘಟನೆ ಅಥಣಿಯಲ್ಲಿ ನಡೆದಿದೆ.
ಗಣೇಶ್ ಕಾಂಬಳೆ(9), ದೀಪಕ್ ಕಾಂಬಳೆ(11) ಎಂಬ ಬಾಲಕರು ಸಾವನ್ನಪ್ಪಿದ್ದಾರೆ.
ಹಳ್ಳದಲ್ಲಿ ದಾರಿ ಕಾಣದೇ ಈ ದುರಂತ ಸಂಭವಿಸಿದೆ. ಎತ್ತಿನ ಗಾಡಿ ಮುಗುಚಿ ಬಿದ್ದ ಪರಿಣಾಮ ಒಂದು ಎತ್ತು ಕೂಡ ಸಾವನ್ನಪ್ಪಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.