Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Kannada channel rebroadcast serial ನಿರ್ಮಾಪಕರ ಆರ್ಥಿಕ ಸಂಕಷ್ಟ ಹಿನ್ನೆಲೆ: ಧಾರಾವಾಹಿಯನ್ನೇ ಮರುಪ್ರಸಾರ ಮಾಡಿದ ಕನ್ನಡ ವಾಹಿನಿ!
ಕರ್ನಾಟಕಪ್ರಮುಖಮನರಂಜನೆ

Kannada channel rebroadcast serial ನಿರ್ಮಾಪಕರ ಆರ್ಥಿಕ ಸಂಕಷ್ಟ ಹಿನ್ನೆಲೆ: ಧಾರಾವಾಹಿಯನ್ನೇ ಮರುಪ್ರಸಾರ ಮಾಡಿದ ಕನ್ನಡ ವಾಹಿನಿ!

Share
2 Min Read
SHARE

newsics.com

ಆರ್ಥಿಕ ಸಂಕಷ್ಟದಿಂದ ಕನ್ನಡದ ನಂಬರ್‌ ಒನ್‌ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯೊಂದು ಶುಕ್ರವಾರ ಮರು ಪ್ರಸಾರವಾಗಿದೆ.

ಧಾರಾವಾಹಿಯ ನೋಡುಗರು ತಮ್ಮ ತಮ್ಮ ನಿವಾಸದಲ್ಲಿ ಕುಳಿತು ಲಕ್ಷ್ಮಿಯನ್ನು ನೋಡಲು ಕಾಯುತ್ತಿದ್ದವರು ನಿರಾಸೆಯಿಂದ ಗೊಣಗಿಕೊಂಡಿದ್ದಾರೆ.

ಹೀಗೆ ನಿರ್ಮಾಪಕರಿಂದ ತೊಂದರೆಯಾಗಿ ಧಾರಾವಾಹಿಯೊಂದು ಮರು ಪ್ರಸಾರವಾಗಿರುವುದು ಕನ್ನಡ ಕಿರುತೆರೆ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗುತ್ತಿದೆ. ಸದ್ಯ ಕಿರುತೆರೆ ಕ್ಷೇತ್ರದಲ್ಲಿ ಈ ವಿಚಾರ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.
ಹಿನ್ನೆಲೆ ಗಮನಿಸಿದರೆ ಒಂದಷ್ಟು ಆಂತಕಕಾರಿ ವಿಚಾರಗಳು ಬಯಲಾಗುತ್ತಿವೆ. ಧಾರಾವಾಹಿ ಪ್ರಾರಂಭವಾದಾಗಿನಿಂದ ಈ ಧಾರಾವಾಹಿಯ ನಿರ್ಮಾಪಕಿ ಆರ್ಥಿಕ ಸಂಕಷ್ಟದಲ್ಲಿದ್ದು, ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ತಂತ್ರಜ್ಞರು, ಕಲಾವಿದರು ಹಾಗೂ ಬರಹಗಾರರಿಗೆ ಹಣ ಕೊಡದೇ ಸಾಕಷ್ಟು ಗಲಾಟೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

ಅಷ್ಟೇ ಅಲ್ಲ, ನಿರ್ಮಾಪಕಿ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಸುಳ್ಳುಗಳನ್ನು ಹೇಳುತ್ತಿದ್ದು ಈ ವಿಚಾರ ಈಗ ವಾಹಿನಿಯವರಿಗೆ ಕೂಡ ದೊಡ್ಡ ತಲೆನೋವಾಗಿದೆಯಂತೆ.

ಎರಡು ತಿಂಗಳ ಹಿಂದೆ ಕೂಡ ಒಂದು ದಿನ ಈ ಧಾರಾವಾಹಿ ಪ್ರಸಾರವಾಗಬೇಕಾದ ಸಮಯದಲ್ಲಿ ಇದ್ದಕ್ಕಿದ್ದಂತೆ ಇನ್ನೊಂದು ಧಾರಾವಾಹಿ ಪ್ರಸಾರವಾಗಿತ್ತು. ಈ ಧಾರಾವಾಹಿಯಲ್ಲಿ ನಟಿಸುವ ತಂದೆಯ ಪಾತ್ರಧಾರಿಯೊಬ್ಬರು ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಶೂಟಿಂಗ್‌ಗೆ ಬರಲ್ಲ ಎಂದಿದ್ದರಂತೆ. ಕೊನೆ ಕ್ಷಣದವರೆಗೂ ಈ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಹಾಗಾಗಿ ಅಂದು ಇನ್ನೊಂದು ಧಾರಾವಾಹಿಯ ಮಹಾಸಂಚಿಕೆ ಪ್ರಸಾರವಾಗಿತ್ತು.

ಕೆಲ ದಿನಗಳ ಹಿಂದೆ ಈ ಧಾರಾವಾಹಿಯ ನಿರ್ಮಾಪಕಿಗೆ ನಟಿಯೊಬ್ಬರು ರಸ್ತೆಯಲ್ಲಿ ನಿಂತು ಹಣದ ವಿಚಾರಕ್ಕೆ ಕೂಗಾಡಿದ ವಿಡಿಯೋ ಕೂಡ ಸಾಕಷ್ಟು ವೈರಲ್‌ ಆಗಿತ್ತು.

ಶುಕ್ರವಾರ ಏನಾಯ್ತು?

ಶುಕ್ರವಾರ ಇದ್ದಕ್ಕಿದ್ದ ಹಾಗೇ ಧಾರಾವಾಹಿ ಮರು ಪ್ರಸಾರವಾಗಿರುವುದು ಯಾಕೆ? ಮತ್ತೆ ಯಾರು ಏನು ಮಾಡಿದರು?

ಈ ಧಾರಾವಾಹಿಗೆ ಡಿ ಐ ಮಾಡುವವರು ಅಂದರೆ ಶೂಟಿಂಗ್‌ ಆಗಿರುವ ವಿಡಿಯೋಗೆ ಕಲರಿಂಗ್‌ ಮಾಡುವ ತಂತ್ರಜ್ಞರೊಬ್ಬರು ತಮಗೆ ಹತ್ತು ಲಕ್ಷ ಹಣ ಬರಬೇಕು ಎಂಬ ಕಾರಣಕ್ಕೆ ಧಾರಾವಾಹಿಯ ಎಡಿಟಿಂಗ್‌ ಸಿಸ್ಟಮ್‌ ಎತ್ತಿಕೊಂಡು ಹೋಗಿದ್ದಾರಂತೆ.

ತುಂಬಾ ದಿನಗಳಿಂದ ಹಣದ ವಿಚಾರವಾಗಿ ನಿರ್ಮಾಪಕಿ ಮತ್ತು ಡಿ ಐ ತಂತ್ರಜ್ಞರ ನಡುವೆ ಜೋರು ಜೋರಾದ ಮಾತುಕತೆ ನಡೆದಿದ್ದು ಈ ಸಮಸ್ಯೆ ಚಾನಲ್‌ನವರಿಂದಲೂ ಬಗೆಹರಿಸಲು ಸಾಧ್ಯವಾಗಿಲ್ಲ. ನಾವು ಕೆಲಸ ಮಾಡಿದ ಹಣ ನಮಗೆ ಕೊಡಿ. ಇಲ್ಲ ಸುಮ್ಮನಿರಿ ಎಂದು ಡಿ ಐ ತಂತ್ರಜ್ಞರು ಹಠ ಮಾಡಿದ್ದಾರೆ. ಹೀಗಾಗಿ ನಿನ್ನೆ ಪ್ರಸಾರವಾಗಬೇಕಾದ ಧಾರಾವಾಹಿಯ ಸಂಚಿಕೆ ಎಡಿಟ್‌ ಸಿಸ್ಟ್‌ಮ್‌ನಲ್ಲೇ ಉಳಿದುಕೊಂಡಿದೆ. ಕೊನೆ ಕ್ಷಣದಲ್ಲಿ ನಡೆದ ವಾಹಿನಿಯವರ ಸಂಧಾನ ಕೂಡ ಕೆಲಸ ಮಾಡಿಲ್ಲ. ಅಂತಿಮವಾಗಿ ಚಾನಲ್‌ನವರು ಗುರುವಾರದ ಸಂಚಿಕೆಯನ್ನೇ ಶುಕ್ರವಾರ ಕೂಡ ಮರು ಪ್ರಸಾರ ಮಾಡಿದ್ದಾರೆ.

ಮುಂದೇನು?

ಧಾರಾವಾಹಿಯ ನಿರ್ಮಾಪಕಿ ಮತ್ತು ಅವರ ಪತಿ ನಟನೆಯ ಹಿನ್ನೆಲೆಯಿಂದ ಬಂದವರಾಗಿದ್ದು ನಟನೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಆದರೆ ಇವರಿಗೆ ಧಾರಾವಾಹಿ ನಿರ್ಮಾಣದ ಪಟ್ಟುಗಳು ಸರಿಯಾಗಿ ಕರಗತವಾಗಿಲ್ಲ. ಇದು ಅನೇಕ ಸಮಸ್ಯೆಗೆ ಕಾರಣವಾಗಿದ್ದು, ಇವರಿಂದ ಕನ್ನಡ ಕಿರುತೆರೆಯ ಮರ್ಯಾದೆ ಬೀದಿಗೆ ಬರುತ್ತಿದೆ ಎಂದು ಕನ್ನಡ ಕಿರುತೆರೆ ಜನ ಮಾತಾಡಿಕೊಳ್ಳುತ್ತಿದ್ದಾರೆ.

ಹಲವು ಬಾರಿ ಈ ವಿಚಾರ ಟೆಲಿವಿಷನ್‌ ಅಸೋಸಿಯೇಶನ್‌ (ಕೆಟಿವಿ ) ಗಮನಕ್ಕೆ ಕೂಡ ಬಂದಿದ್ದು ಅಲ್ಲೂ ಕೂಡ ಹಣಕಾಸಿನ ವಿಚಾರದ ಅನೇಕ ಗಲಾಟೆಗಳನ್ನು ಬಗೆಹರಿಸಲಾಗಿದೆಯಂತೆ.

ವಾಹಿನಿಯವರಿಂದಲೇ ಚಿತ್ರೀಕರಣ?:

ಸದ್ಯಕ್ಕೆ ವಾಹಿನಿಯವರು ನಿರ್ಮಾಪಕಿಗೆ ಗೇಟ್‌ ಪಾಸ್‌ ಕೊಟ್ಟು ಸೋಮವಾರದ ಸಂಚಿಕೆಯನ್ನು ಅವರೇ ಚಿತ್ರೀಕರಣ ಮಾಡಿ ಪ್ರಸಾರ ಮಾಡುವ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆಯಾದರೂ, ಇನ್ನೂ ಅಧಿಕೃತ ಮಾಹಿತಿ ಬರಬೇಕಿದೆ.

Mysore sandal soap ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿನೇ ಬೇಕಿಲ್ಲ- ರಮ್ಯಾ, ನಮ್ಮ ಸೋಪ್‌ ಪ್ರಚಾರಕ್ಕೆ ಕನ್ನಡದ ನಟಿ ಸಿಗಲೇ ಇಲ್ವಾ?- ಕಾರುಣ್ಯ ರಾಮ್

Alia Bhatt ಆಲಿಯಾ ಭಟ್ ಮತ್ತೆ ಪ್ರೆಗ್ನೆಂಟ್? ವೈರಲ್ ಆಯ್ತು ಬೇಬಿ ಬಂಪ್ ವಿಡಿಯೋ!

TAGGED:The Kannada channel rebroadcast the serial due to the producers' financial difficulties!
Share This Article
Facebook Twitter Copy Link Print
Previous Article CBSE school 3 ರಿಂದ 11 ವರ್ಷದೊಳಗಿನ ಮಕ್ಕಳಿಗೆ ತಮ್ಮ ಮಾತೃಭಾಷೆಯಲ್ಲಿ ಅಧ್ಯಯನ ಮಾಡಲು ಅವಕಾಶ
Next Article ಹಿಮಾಚಲ ಪ್ರದೇಶದಲ್ಲಿ ಮಳೆರಾಯನ ಆರ್ಭಟ; ಮಳೆಗೆ ಕೊಚ್ಚಿಹೋದ 15 ವಾಹನಗಳು

Popular Posts

Viral News ಆಕಾಶದಲ್ಲಿ ಹಾರುತ್ತಿದ್ದ ವಿಮಾನದೊಳಗೆ ಹೆಡೆ ಎತ್ತಿದ ಹಾವು; ಬೆಚ್ಚಿಬಿದ್ದ ಪ್ರಯಾಣಿಕರು ವಿಡಿಯೋ ನೋಡಿ

2 Min Read

Odesa Port Attack in Ukraine ಉಕ್ರೇನ್ ಒಡೆಸಾ ಬಂದರಿನಲ್ಲಿ ಕರಾಳ ದಾಳಿ: ವಾಣಿಜ್ಯ ಹಡಗಿನಲ್ಲಿದ್ದ ಇಬ್ಬರು ಭಾರತೀಯ ಪ್ರಜೆಗಳು ನಾಪತ್ತೆ

1 Min Read

Cardiac Arrest ವಿದ್ಯಾರ್ಥಿಗಳಿಗೆ ಹೃದಯಾಘಾತ ಆತಂಕ; ಪೋಷಕರು ಭಯಪಡಬೇಡಿ ಎಂದ ಪ್ರಮುಖ ಹೃದ್ರೋಗ ತಜ್ಞರು

2 Min Read

Sports ರೋಯಿಂಗ್ ಕ್ರೀಡೆಗೆ ಭಾರೀ ಆಘಾತ; ಡೋಪಿಂಗ್ ಪರೀಕ್ಷೆಯಲ್ಲಿ ಸಿಲುಕಿದ ರೋವರ್ ಲಕ್ಷಯ್, ದೇಶದ ಚೊಚ್ಚಲ ವಿಶ್ವಕಪ್ ಚಿನ್ನದ ಪದಕ ಅನುಮಾನ

2 Min Read

You Might Also Like

ಪ್ರಮುಖದೇಶ

Kargil Vijay Diwas ಕಾರ್ಗಿಲ್ ಯುದ್ಧ ನಡೆದಿದ್ದು ಯಾಕೆ? ಶತ್ರುಗಳನ್ನು ಸದೆಬಡಿದು ಭಾರತ ಗೆದ್ದ ರೋಚಕ ಕಥೆ ಇಲ್ಲಿದೆ

3 Min Read
ಕರ್ನಾಟಕದೇಶಪ್ರಮುಖ

High court order ಮುಸ್ಲಿಂ ವ್ಯಕ್ತಿಯ ಮೊದಲ ಮದುವೆ ರದ್ದಾಗದಿದ್ರೆ 2ನೇ ವಿವಾಹ ಮಾನ್ಯವಲ್ಲ: ಕರ್ನಾಟಕ ಹೈಕೋರ್ಟ್

2 Min Read
ಪ್ರಮುಖವಿದೇಶವೈರಲ್

CWG 2026 ಜಿಮ್ನಾಸ್ಟಿಕ್​ ವೇಳೆ ನೆಲಕ್ಕೆ ಬಿದ್ದ ಅಥ್ಲೀಟ್! ಬೆಚ್ಚಿಬೀಳಿಸುವ ವಿಡಿಯೋ​ ನೋಡಿ

1 Min Read
ಕರ್ನಾಟಕಪ್ರಮುಖ

Mother loses life ಪತಿಯ ಅಕ್ರಮ ಸಂಬಂಧ ತಂದ ನೋವು: 7 ತಿಂಗಳ ಹಸುಗೂಸಿನೆದುರೇ ಜೀವ ಕಳೆದುಕೊಂಡ ತಾಯಿ! ಸಾಯುವಾಗ ಗಂಡನಿಗೆ ವಿಡಿಯೋ ಕಾಲ್‌ನಲ್ಲಿ ಹೇಳಿದ್ದೇನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?