newsics.com
ಬೇಸಿಗೆಯ ಉರಿ ಬಿಸಿಲು ಹಾಗೂ ವಿಪರೀತ ಸೆಖೆ, ನಿಧಾನಕ್ಕೆ ಜಾಸ್ತಿ ಆಗುತ್ತಾ ಹೋಗುತ್ತಿದೆ! ಇನ್ನೂ ಕೆಲವು ಕಡೆಗಳಲ್ಲಿ ಎಲ್ಲಾ ದಿನದಿಂದ ದಿನಕ್ಕೆ ಬಿಸಿಲಿನ ಬೇಗೆ, ಧಗೆ ಏರುತ್ತಿದ್ದು, ಸೆಖೆಯ ಹೊಡೆತಕ್ಕೆ ಜನ ಸುಸ್ತಾಗಿ ಬಿಟ್ಟಿದ್ದಾರೆ! ಅದರಲ್ಲೂ ಮಧ್ಯಾಹ್ನದ ಸಮಯದಲ್ಲಿ ಕಂಡುಬರುವ ಅತಿಯಾದ ಬಿಸಿಲಿನಿಂದಾಗಿ ತಾಪಮಾನ ವಿಪರೀತವಾಗಿ ಏರುತ್ತಿದ್ದು ಜನರು ಮನೆಯಿಂದ ಹೊರಬೀಳಲು ಹಿಂದೆ ಮುಂದೆ ನೋಡುವಂತಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಿಸಿಲಿನ ಬೇಸಿಗೆಯ ಟ್ರೈಲರ್ ನಮಗೆ ಈಗಲೇ ಸಿಕ್ಕಿದಂತೆ ಭಾಸವಾಗುತ್ತಿದೆ. ಈ ನಡುವೆ ವಿದ್ಯುತ್ ಕಡಿತವಾದರೆ ಆ ಪರಿಸ್ಥಿತಿಯಂತೂ ಕೇಳುವುದೇ ಬೇಡ. ವಿದ್ಯುತ್ ಕಡಿತ ಹಾಗೂ ಬಿಸಿಲಿನ ತಾಪದಿಂದ ಬೇಸೆತ್ತ ಕುಟುಂಬವೊಂದು ಎಟಿಎಂ ಬೂತ್ ನ್ನೇ ಆಶ್ರಯ ತಾಣವನ್ನಾಗಿಸಿಕೊಂಡಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಡಿಯೋದಲ್ಲಿ ಕುಟುಂಬವೊಂದು ಎಟಿಎಂ ಬೂತ್ ನಲ್ಲಿ ಆಶ್ರಯ ಪಡೆದುಕೊಂಡಿರುವುದನ್ನು ಕಾಣಬಹುದು. ಇಲ್ಲಿ ಇಬ್ಬರೂ ಮಹಿಳೆಯರು ತನ್ನ ಇಬ್ಬರೂ ಮಕ್ಕಳೊಂದಿಗೆ ಎಟಿಎಂ ಬೂತ್ ನಲ್ಲಿ ಆಶ್ರಯ ಪಡೆದುಕೊಂಡಿರುವುದನ್ನು ಕಾಣಬಹುದು. ಅದಲ್ಲದೇ, ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳೆ, ನಾವು ಇರುವ ಪ್ರದೇಶದಲ್ಲಿ ಒಂದು ತಿಂಗಳಿನಿಂದ ವಿದ್ಯುತ್ ಕಡಿತವಾಗುತ್ತಿದೆ. ಹೀಗಾಗಿ ನಾವು ಎಟಿಎಂ ನಲ್ಲಿ ಆಶ್ರಯ ಪಡೆದುಕೊಂಡಿದ್ದೇವೆ. ನಾವು ಇಲ್ಲಿರುವುದಕ್ಕೆ ಯಾರು ಕೂಡ ಏನು ಹೇಳಿಲ್ಲ. ಯಾರಾದ್ರೂ ಬಂದು ನಮ್ಮನ್ನು ಇಲ್ಲಿ ಇರಬೇಡಿ ಎಂದರೆ ರಸ್ತೆಯ ಮೇಲೆಯೇ ನಾವು ಮಲಗಬೇಕು ಎಂದಿದ್ದಾರೆ.
@IndianTechGuide ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ