newsics.com
ಕ್ರಿಕೆಟರ್ ವಿರಾಟ್ ಕೊಹ್ಲಿ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ಗೆ ಭಾವುಕ ವಿದಾಯ ಹೇಳಿದ್ದಾರೆ. ಸದ್ಯ ವಿರಾಟ್ ಅವರು 10ನೇ ವರ್ಗದಲ್ಲಿ ಎಷ್ಟು ಮಾರ್ಕ್ಸ್ ತೆಗೆದಿದ್ದರು ಎಂಬುದಕ್ಕೆ ಸಂಬಂಧಿಸಿದಂತೆ ಫೋಟೋ ಒಂದು ವೈರಲ್ ಆಗಿದೆ.
ವಿರಾಟ್ ಕೊಹ್ಲಿಗೆ ಚಿಕ್ಕ ವಯಸ್ಸಿನಿಂದಲೇ ಕ್ರಿಕೆಟ್ ಬಗ್ಗೆ ಆಸಕ್ತಿ. ಹೀಗಾಗಿ, ಅವರು ಆಟದ ಕಡೆ ಹೆಚ್ಚು ಗಮನ ಹರಿಸುತ್ತಿದ್ದರು. ಈ ಕಾರಣದಿಂದಲೇ ಅವರಿಗೆ 10ನೇ ತರಗತಿಯಲ್ಲಿ (ಸಿಬಿಎಸ್ಇ) ಹೆಚ್ಚು ಅಂಕ ಪಡೆಯಲು ಸಾಧ್ಯವಾಗಿರಲಿಲ್ಲ.
ವಿರಾಟ್ ಕೊಹ್ಲಿ ಅವರು ಇಂಗ್ಲಿಷ್, ಹಿಂದಿ ಹಾಗೂ ಸಾಮಾಜಿಕ ವಿಜ್ಞಾನದಲ್ಲಿ ಒಳ್ಳೆಯ ಅಕ ಪಡೆದಿದ್ದರು. ಇಂಗ್ಲಿಷ್ನಲ್ಲಿ ವಿರಾಟ್ ಗೆ 83 ಅಂಕ ಸಿಕ್ಕಿದ್ದವು. ಇದು ಒಂದು ವಿಷಯದಲ್ಲಿ ಪಡೆದ ಗರಿಷ್ಠ ಅಂಕ. ಹಿಂದಿಯಲ್ಲಿ 75, ಸಾಮಾಜಿಕ ವಿಜ್ಞಾನದಲ್ಲಿ 81 ಅಂಕವನ್ನು ಅವರು ಪಡೆದಿದ್ದಾರೆ. ಗಣಿತ ಹಾಗೂ ವಿಜ್ಞಾನದಲ್ಲಿ ಕೊಹ್ಲಿ ಅಷ್ಟು ಬ್ರಿಲಿಯಂಟ್ ಇರಲಿಲ್ಲ.
ಗಣಿತದಲ್ಲಿ ಕೊಹ್ಲಿ 51 ಅಂಕ ಪಡೆದುಕೊಂಡಿದ್ದರು. ವಿಜ್ಞಾನದಲ್ಲಿ 55 ಅಂಕ ಪಡೆದುಕೊಂಡಿದ್ದರು. ಇಂಟ್ರೊಡಕ್ಷನರಿ ಐಟಿ ವಿಷಯದಲ್ಲಿ ಇವರಿಗೆ 74 ಅಂಕ ಸಿಕ್ಕಿತ್ತು. ಎಲ್ಲಾ ವಿಷಯಗಳಲ್ಲೂ ಕೊಹ್ಲಿ ಪಾಸ್ ಆಗಿದ್ದರು ಅನ್ನೋದು ವಿಶೇಷ. ಈ ಮೂಲಕ ಕೊಹ್ಲಿಯ ಪರ್ಸಂಟೇಜ್ ಕೇವಲ 70ರ ಆಸುಪಾಸಿನಲ್ಲಿ ಇತ್ತು.
Gold Rate Today ಚಿನ್ನ ಖರೀದಿ ಮಾಡೋರಿಗೆ ಇದೇ ಬೆಸ್ಟ್ ಟೈಮ್- ಬಂಗಾರದ ಬೆಲೆಯಲ್ಲಿ ಇಳಿಕೆ