newsics.com
ಉತ್ತರ ಪ್ರದೇಶ: ವರ ತನ್ನ ಜನ್ಮ ದಿನಾಂಕದ ಬಗ್ಗೆ ಒಂದು ತಮಾಷೆ ಮಾಡಿದ್ದಕ್ಕೆ ವಧು ಮದುವೆ ಮುರಿದುಕೊಂಡು ಹೋಗಿರುವ ಘಟನೆ
ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನ ಅಕ್ಬರ್ ಶಹಪುರ್ ಗ್ರಾಮದಲ್ಲಿ ನಡೆದಿದೆ.
ಇತ್ತೀಚೆಗೆ ಏರ್ಪಡಿಸಲಾಗಿದ್ದ ವಿವಾಹ_ ಸಮಾರಂಭವೊಂದರಲ್ಲಿ ವರನ ಬೇಜವಾಬ್ದಾರಿ ಮತ್ತು ಹಾಸ್ಯಾಸ್ಪದ ಕೃತ್ಯದಿಂದಾಗಿ ವಧು ಜಯಮಾಲಾ ವೇದಿಕೆಯಲ್ಲಿ ಮದುವೆಯಾಗಲು ನಿರಾಕರಿಸಿದ್ದಾಳೆ.
ಸಮಾರಂಭದ ಸಮಯದಲ್ಲಿ, ವಧುವಿನ ಸ್ನೇಹಿತರು ವರನ ಜನ್ಮ ದಿನಾಂಕದ ಬಗ್ಗೆ ತಮಾಷೆಯಾಗಿ ಕೇಳಿದಾಗ, ಅವನು ತಮಾಷೆಯಾಗಿ ತನ್ನ ಜನ್ಮ ದಿನಾಂಕ 2025 ಎಂದು ಉತ್ತರಿಸಿದನು. ಇದನ್ನು ಕೇಳಿದ ವಧು ಅವನ ಕುತ್ತಿಗೆಗೆ ಹಾರ ಹಾಕಲು ನಿರಾಕರಿಸಿದಳು. ಜೊತೆಗೆ, ಅದೇ ಕ್ಷಣದಲ್ಲಿ ವರನನ್ನು ಮದುವೆಯಾಗಲು ಏಕಾಏಕಿ ನಿರಾಕರಿಸಿದಳು.
ಇನ್ನು ವರನ ಮನೆಯವರು ಕೇಳಿದ್ದನ್ನೆಲ್ಲಾ ಕೊಟ್ಟಿದ್ದರೂ ಅದನ್ನು ಬಳಸಿಕೊಳ್ಳಲು ಆತ ಸೂಕ್ತವಾಗಿಲ್ಲ ಎಂಬ ಭಾವನೆ ವಧುವಿನ ಮನೆಯವರಿಗೆ ಬಂದಿದೆ. ಅಲ್ಲದೇ ವರ ಅರೆ ಹುಚ್ಚನಂತೆ ವರ್ತಿಸಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ವಧುವಿಗೂ ಮದುವೆ ಮೇಲೆ ಅಷ್ಟೊಂದು ಆಸಕ್ತಿ ಇಲ್ಲದಂತೆ ಕಾಣುತ್ತಿದೆ. ಹೀಗಾಗಿ, ಮದುವೆ ಮುರಿದುಕೊಳ್ಳಲು ಒಂದು ಕಾರಣ ಸಿಕ್ಕಿದರೂ ಸಾಕು ಎಂದು ಕಾಯುತ್ತಿರುವಾಗ, ಮದುವೆ ಮೆರವಣಿಗೆಯಲ್ಲಿ ವರ ಮಾಡಿದ ಒಂದು ಜನ್ಮ ದಿನದ ಕುರಿತಾದ ತಮಾಷೆ ವರನ ಕಡೆಯವರಿಗೆ ಮದುವೆ ಮುರಿದುಕೊಳ್ಳಲು ನೆಪವಾಗಿದೆ.
RATION CARD : ಗುಡ್ ನ್ಯೂಸ್: ಪಡಿತರ ಚೀಟಿದಾರರಿಗೆ 3 ತಿಂಗಳ ರೇಷನ್ ಮುಂಗಡ ವಿತರಣೆ