newsics.com
ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನ ವಿರುದ್ಧ ನಡೆಸಿದ ಆಪರೇಷನ್ ಸಿಂದೂರ್ ನಂತರ ಭಾರತ-ಪಾಕಿಸ್ತಾನ ಮಧ್ಯೆ ಯುದ್ಧ ನಡೆಯುತ್ತಿದೆ. ಈ ನಡುವ ಅಲ್ಲು ಫ್ಯಾಮಿಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಟಾಲಿವುಡ್‌ನ ಪ್ರಮುಖ ನಿರ್ಮಾಪಕ ಮತ್ತು ಗೀತಾ ಆರ್ಟ್ಸ್ ಮುಖ್ಯಸ್ಥ ಅಲ್ಲು ಅರವಿಂದ್ ಪ್ರತಿಕ್ರಿಯಿಸಿದ್ದಾರೆ.ಸೈನಿಕರನ್ನು ಬೆಂಬಲಿಸಲು ತಮ್ಮ ಕೈಲಾಗುವ ನೆರವು ಮಾಡುವುದಾಗಿ ಅಲ್ಲು ಅರವಿಂದ್ ಅವರು ದೇಣಿಗೆಯನ್ನು ಘೋಷಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿ, ದೇಶದ ಪರಿಸ್ಥಿತಿಯ ಕುರಿತು ಪ್ರತಿಕ್ರಿಯಿಸುತ್ತಾ ಈ ಘೋಷಣೆ ಮಾಡಿದ್ದಾರೆ. “ನಮ್ಮ ಸೈನಿಕರು ಈಗ ಗಡಿಗಳಲ್ಲಿ ಹೋರಾಡುತ್ತಿದ್ದಾರೆ. ಅಂತಹ ಸಮಯದಲ್ಲಿ ಚಿತ್ರದ ಯಶಸ್ಸನ್ನು ಆಚರಿಸಲು ತುಂಬಾ ದುಃಖವಾಯಿತು. ಆದರೆ.. ಪ್ರೇಕ್ಷಕರು ನಮ್ಮ ಚಿತ್ರವನ್ನು ಬೆಂಬಲಿಸಿದರು. ಅವರಿಗೆ ಧನ್ಯವಾದ ಹೇಳುವುದು ಅಗತ್ಯವೆಂದು ನಾವು ಭಾವಿಸಿದ್ದೇವೆ ಎಂದಿದ್ದಾರೆ.