newsics.com
ಅಹಮ್ಮಾದಾಬಾದ್: ಭಾರತ ಮತ್ತು ಪಾಕಿಸ್ತಾನ ಉದ್ವಿಗ್ನ ಪರಿಸ್ಥಿತಿ ಬೆನ್ನಲ್ಲೇ ಇದೀಗ ಮದುವೆಯಲ್ಲಿ ಡ್ರೋನ್, ಕಾರ್ಯಕ್ರಮಗಲ್ಲಿ ಪಟಾಕಿ ಸಿಡಿಸುವುದು ನಿಷೇಧಿಸಲಾಗಿದೆ ಎಂದು ಆದೇಶವನ್ನು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ನೀಡಿದ್ದಾರೆ.
ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ಜೊತೆಗೆ, ಪಾಕಿಸ್ತಾನ ಡ್ರೋನ್ ಮೂಲಕ ದಾಳಿ ಮಾಡುತ್ತಿರುವ ಕಾರಣಈ ಪ್ರೀ ವೆಡ್ಡಿಂಗ್,ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಹೀಗೆ ಹಲವು ಮದುವೆ ಕಾರ್ಯಕ್ರಮಗಳ ಫೋಟೋ, ವಿಡಿಯೋ ಡ್ರೋನ್ ಬಳಸಿ ವಿಡಿಯೋ ಶೂಟ್ ನಿಷೇಧಿಸಲಾಗಿದೆ. ಡ್ರೋನ್ ಬಳಕೆಯಿಂದ ಭದ್ರತಾ ಸಮಸ್ಯೆ ಸೃಷ್ಟಿಯಾಗಲಿದೆ. ಹೀಗಾಗಿ ಡ್ರೋನ್ ಹೆಚ್ಚಿನ ಆತಂಕ ಜೊತೆಗೆ ಸುರಕ್ಷತೆ ನೀಡಲು ಸವಾಲಾಗಲಿದೆ. ಹೀಗಾಗಿ ಮದುವೆ ಸೇರದಂತೆ ಖಾಸಗಿ ಕಾರ್ಯಕ್ರಮಗಳಲ್ಲಿ ಡ್ರೋನ್ ಬಳಕೆಯನ್ನು ನಿಷೇಧಿಸಲಾಗಿದೆ.
ಪಾಕಿಸ್ತಾನ ಜೊತೆ ಗಡಿ ಹಂಚಿಕೊಂಡಿರುವ ರಾಜ್ಯಗಳಲ್ಲಿ ಬಾಂಬ್, ಮಿಸೈಲ್, ಗುಂಡಿನ ಶಬ್ದಗಳು ಕೇಳಿಸುತ್ತಲೇ ಇದೆ. ಇದರ ನಡುವೆ ಪಟಾಕಿ ಶಬ್ದಗಳು ಜನರ ಆತಂಕ ಹೆಚ್ಚಿಸುತ್ತದೆ. ಇಷ್ಟೇ ಅಲ್ಲ ಗೊಂದಲ ಸೃಷ್ಟಿಸುತ್ತದೆ. ಹೀಗಾಗಿ ಪಟಾಕಿ ಬ್ಯಾನ್ ಮಾಡಲಾಗಿದೆ ಎಂದು ಹೇಳಿದ್ದಾರೆ.