newsics.com
ಗರ್ಭಿಣಿಯರು ನಡೆಯುವಾಗ ಕುಳಿತುಕೊಳ್ಳುವಾಗ ಬಹಳ ಎಚ್ಚರಿಕೆಯಿಂದಿರಬೇಕು ಎಂದು ನಮ್ಮ ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ.ಗರ್ಭಧಾರಣೆ ಯ ಆರಂಭದ ಮೂರು ತಿಂಗಳು ವಿಶ್ರಾಂತಿ, ಎಚ್ಚರಿಗೆ ಅತ್ಯಗತ್ಯ. ಆದರೆ ಇಲ್ಲೊಬ್ಬಳು ಅವಳಿ ಮಕ್ಕಳನ್ನು ಹೊಟ್ಟೆಯಲ್ಲಿ ಹೊತ್ತಕೊಂಡ ಗರ್ಭಿಣಿ ‘ಡಿಂಗ್ ಡಾಂಗ್ ಡಿಂಗ್’ ಎಂದು ಡ್ಯಾನ್ಸ್ ಮಾಡಿದ್ದಾಳೆ.
ಸಾಮಾಜಿಕ ಜಾಲತಾಣಗಳಲ್ಲಿ ಗರ್ಭಿಣಿ ಡಾ. ಸೋನಮ್ ದಹಿಯಾ ಅವರ ಬಾಲಿವುಡ್ ಡಾನ್ಸ್ ವಿಡಿಯೋ ವೈರಲ್ ಆಗಿದೆ. ಅವಳಿ ಮಕ್ಕಳನ್ನು ಹೊಟ್ಟೆಯಲ್ಲಿ ಹೊಂದಿರುವ ಸೋನಮ್, ಗರ್ಭಧಾರಣೆಯ ಕೊನೆಯ ತಿಂಗಳಲ್ಲಿ ಮಾಡಿದ ಈ ಡಾನ್ಸ್ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ.
artist dance community ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಬಾಲಿವುಡ್ ‘ಡಿಂಗ್ ಡಾಂಗ್ ಡಿಂಗ್’ ಹಾಡಿಗೆ ನೃತ್ಯ ಸಂಯೋಜಕ ಆದಿಲ್ ಖಾನ್ ಅವರೊಂದಿಗೆ ತುಂಬು ಗರ್ಭಿಣಿಯಾಗಿರುವ ಡಾ. ಸೋನಮ್ ದಹಿಯಾ ಭರ್ಜರಿ ಡಾನ್ಸ್ ಮಾಡುವುದನ್ನು ನೋಡಬಹುದು.
ಈಕೆ ಜನಪ್ರಿಯ ನೃತ್ಯ ಸಂಯೋಜಕ ಆದಿಲ್ ಖಾನ್ ಅವರೊಂದಿಗೆ ‘ಡಿಂಗ್ ಡಾಂಗ್ ಡಿಂಗ್’ ಹಾಡಿಗೆ ಡ್ಯಾನ್ಸ್ ಮಾಡಿದ್ದಾಳೆ. ವೈರಲ್ ವಿಡಿಯೊದಲ್ಲಿ ಆಕೆ ಮಾಡಿದ್ದ ಕೆಲವು ಡ್ಯಾನ್ಸ್ ಸ್ಟೆಪ್‍ಗಳನ್ನು ಕಂಡು ನೆಟ್ಟಿಗರು ದಂಗಾಗಿದ್ದಾರೆ. ಹಾಗಾಗಿ ಕೆಲವರು ಗರ್ಭಾವಸ್ಥೆಯಲ್ಲಿ ಡ್ಯಾನ್ಸ್ ಮಾಡುವುದು ಅಪಾಯಕಾರಿ ಎಂದು ಹೇಳಿದ್ದಾರೆ.
https://www.instagram.com/reel/DJKx4zEo02H/?igsh=MXRuZXFrZHpqcHJpaQ==