newsics.com
ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ರಕ್ತದೋಕುಳಿಯಾಡಿದ ಉಗ್ರರನ್ನು ಸದೆ ಬಡಿಯಲು ಮೂರು ಬಾರಿ ಸರ್ಜಿಕಲ್, ಏರ್‌ಸ್ಟ್ರೈಕ್ ಮಾದರಿ ದಾಳಿ ನಡೆಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ26 ಪ್ರವಾಸಿಗರ ಮಾರಣಹೋಮ. ಮಾರುವೇಷದಲ್ಲಿ ಬಂದಿದ್ದ ಲಷ್ಕರೆ ತಯ್ಬಾ ಉಗ್ರರು ಹಿಂದೂಗಳ ನರಮೇಧ ನಡೆಸಿದ್ದರು. ಆ ನಂತರ ಭಾರತ ಆಪರೇಷನ್ ಸಿಂಧೂರ ಹೆಸರಿನಡಿ ಪಾಕಿಸ್ತಾನದ ವಿರುದ್ಧ ಮೇ7ರಂದು ಪ್ರತೀಕಾರದ ದಾಳಿ ನಡೆಸಿದೆ ಬಳಿಕ ಪಾಕಿಸ್ತಾನ ತತ್ತರಿಸಿ ಹೋಗಿದೆ. ಬಾಲ ಸುಟ್ಟ ಬೆಕ್ಕಿನಂತೆ ಆಗಿರುವ ಪಾಕ್, ಇದೀಗ ಭಾರತದ ಮೇಲೆ ದಾಳಿ ಮಾಡುವಂತಹ ಮೊಂಡು ಪ್ರಯತ್ನ ಮಾಡ್ತಿದೆ.
ಭಾರತೀಯ ರಕ್ಷಣಾ ಇಲಾಖೆ ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಪಾಕಿಸ್ತಾನದ 12 ಸೇನಾ ನೆಲೆಗಳ ಮೇಲೆ ಭಾರತ ಏಕಕಾಲದಲ್ಲಿ ದಾಳಿ ನಡೆಸಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ದಾಳಿಯಿಂದಾಗಿ ಪಾಕ್‌ನ 6 ಕ್ಷಿಪಣಿ ಲಾಂಚ್ ಪ್ಯಾಡ್ ಧ್ವಂಸವಾಗಿದೆ. ಈ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರ ಅಲ್ಲಿನ ಪ್ರಜೆಗಳಿಗೆ ಸೂಚನೆಯೊಂದನ್ನು ನೀಡಿದೆ.
ಪಾಕಿಸ್ತಾನ ಪ್ರಜೆಗಳಿಗೆ ಅಲ್ಲಿನ ಸರ್ಕಾರ ಎಚ್ಚರಿಕೆ ನೀಡಿದ್ದು, ಯಾರೂ ಮನೆಯಿಂದ ಹೊರಬರಬೇಡಿ, ಮನೆಯಲ್ಲಿ ಲೈಟ್ ಆನ್ ಮಾಡಬೇಡಿ ಎಂದು ಅನೌನ್ಸ್ ಮಾಡಿದೆ. ಅಲ್ಲದೇ ಇಸ್ಲಾಮಾಬಾದ್‌ನಲ್ಲೂ ಸೈರನ್ ಮೊಳಗಿಸಿದ್ದು, ಎಚ್ಚರಿಕೆಯ ಸೂಚನೆ ನೀಡಿದೆ.