newsics.com
ಬೆಂಗಳೂರು: ಬೆಲೆ ಏರಿಕೆ ಲಿಸ್ಟ್ ಮುಗಿಯೋ ಲಕ್ಷಣ ಕಾಣ್ತಿಲ್ಲ. ನಿತ್ಯ ಒಂದಲ್ಲ, ಒಂದು ವಸ್ತುಗಳ ಬೆಲೆಗಳು ಏರಿಕೆ ಸುದ್ದಿ ಹೊರಬರ್ತಾನೆ ಇದೆ. ಇದೀಗ ರಾಜ್ಯ ಸರ್ಕಾರ ಮದ್ಯಪ್ರಿಯರಿಗೂ ಶಾಕ್ ಕೊಟ್ಟಿದೆ. ಎಣ್ಣೆ ಕೂಡ ದುಬಾರಿ ಆಗಿದೆ.
ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೂರನೇ ಬಾರಿ ಮದ್ಯ ದರ ಹೆಚ್ಚಳವಾಗಲಿದ್ದು, ಈ ವಾರದಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.
2024-25 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ ಬರೋಬ್ಬರಿ 38,600 ಕೋಟಿ ರುಪಾಯಿ ಟಾರ್ಗೆಟ್ ನೀಡಿತ್ತು. ಈ ಬಾರಿಯ ಬಜೆಟ್ ನಲ್ಲಿ 40 ಸಾವಿರ ಕೋಟಿ ಟಾರ್ಗೆಟ್ ನೀಡಲಾಗಿದೆ. ಈ ಟಾರ್ಗೆಟ್ ಮುಟ್ಟುವ ಸಲುವಾಗಿ ಅಬಕಾರಿ ಇಲಾಖೆ ಮತ್ತೆ ದರ ಹೆಚ್ಚಳ ಮಾಡಲು ಮುಂದಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಈ ವಾರದಿಂದಲೇ ಎಲ್ಲಾ ರೀತಿಯ ಮದ್ಯಗಳ ಮೇಲೆ ಶೇ 10 ರಷ್ಟು ಬೆಲೆ ಏರಿಕೆ ಆಗಲಿದೆ. ಈಗಾಗಲೇ ದರ ಏರಿಕೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಕೂಡ ನೀಡಿದ್ದು, ದರ ಏರಿಕೆ ಫಿಕ್ಸ್ ಆಗಿದೆ.