newsics.com
ಸೂಪರ್ಸ್ಟಾರ್ ರಜನಿಕಾಂತ್, ಕೂಲಿ ಮತ್ತು ಜೈಲರ್ 2 ನಂತಹ ಪ್ರಮುಖ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ನಿವೃತ್ತಿ ವದಂತಿ ಶುರುವಾಗಿದೆ ನಿವೃತ್ತಿ ಬಗ್ಗೆ ಪತ್ನಿ ಲತಾ ರಜನಿಕಾಂತ್ ಅವರ ಮಾತುಗಳು ಇದೀಗ ವೈರಲ್ ಆಗಿವೆ.
ಇದೀಗ ರಜನಿಕಾಂತ್ ನಿವೃತ್ತಿ ಬಗ್ಗೆ ಸಖತ್ ಚರ್ಚೆಯಾಗುತ್ತಿದೆ. ರಜನಿಕಾಂತ್ ಸಿನಿಮಾ ಚಿತ್ರೀಕರಣದಿಂದ ವಿರಾಮ ತೆಗೆದುಕೊಳ್ಳುವ ಸಾಧ್ಯತೆ ಇದೆಯೇ ಎಂದು ವರದಿಗಾರರೊಬ್ಬರು ಲತಾ ಅವರನ್ನು ಕೇಳಿದಾಗ, “ನನಗೆ ಉತ್ತರ ಗೊತ್ತಿದ್ದರೆ ಚೆನ್ನಾಗಿತ್ತು, ಗೊತ್ತಿದ್ದರೆ ನಾನೇ ನಿಮಗೆ ಹೇಳುತ್ತಿದ್ದೆ” ಎಂದು ಅವರು ಹೇಳಿದರು. ಈ ಮೂಲಕ ಕೊನೆಗೂ ಮೌನ ಮುರಿದಿದ್ದಾರೆ ಪತ್ನಿ ಲತಾ.
ಕೂಲಿ’ ಸಿನಿಮಾದ ಕೆಲಸ ಮುಗಿಯುತ್ತಿದ್ದಂತೆ ರಜನಿಕಾಂತ್ ಈಗ ‘ಜೈಲರ್ 2’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರೊಂದಿಗೆ ಶಿವಣ್ಣ ಹಾಗೂ ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರೀಕರಣವು ಪ್ರಸ್ತುತ ಕೇರಳದ ಬಳಿ ನಡೆಯುತ್ತಿದೆ.
ಕೂಲಿ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ, ಗಿರೀಶ್ ಗಂಗಾಧರನ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲನ ಮಾಡಿದ್ದಾರೆ. ಪೂಜಾ ಹೆಗ್ಡೆ ಈ ಚಿತ್ರದಲ್ಲಿ ವಿಶೇಷ ನೃತ್ಯ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಮಿರ್ ಖಾನ್ ಕೂಲಿ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
ರಮ್ಯಾ ಕೃಷ್ಣ ಈ ಚಿತ್ರದ ಶೂಟಿಂಗ್ ಅಲ್ಲಿ ಭಾಗಿ ಆಗಿದ್ದಾರೆ. ಚಿತ್ರೀಕರಣದ ಮೊದಲ ದಿನವೇ ಒಂದು ಫೋಟೋ ಕೂಡ ಹಾಕಿದ್ದರು. ಹೆಚ್ಚು ಕಡಿಮೆ 26 ವರ್ಷದ ಬಳಿಕ ಮತ್ತೊಮ್ಮೆ ರಜನಿಕಾಂತ್ ಅವರ ಜೊತೆಗೆ ನಟಿಸುತ್ತಿದ್ದೇನೆ ಅನ್ನುವ ಅರ್ಥದಲ್ಲಿಯೇ ಇವರ ಪೋಸ್ಟ್ ಇತ್ತು