newsics.com
ಬೆಂಗಳೂರು: ಹಾಡುಗಳ ಮೂಲಕ ಕನ್ನಡಿಗರಿಗೆ ಸಮೀಪವಾಗಿರುವ ಗಾಯಕ ಸೋನು ನಿಗಮ್ ಅವರು ಇದೀಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೋನು ನಿಗಮ್ ಸಂಗೀತ ಪ್ರದರ್ಶನದ ವೇಳೆ ಕನ್ನಡ ಹಾಡು ಹಾಡುವಂತೆ ವೀಕ್ಷಕರೊಬ್ಬರು ಕೇಳಿಕೊಂಡಿದ್ದು, ಇದಕ್ಕೆ ಸೋನು ನೀಡಿರುವ ಪ್ರತಿಕ್ರಿಯೆ ವಿವಾದಕ್ಕೆ ಕಾರಣವಾಗಿತ್ತು.
ಇದೀಗ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ನಗರ ಘಟಕದ ಜಿಲ್ಲಾಧ್ಯಕ್ಷ ಧರ್ಮರಾಜ್.ಎ ಅವರು ಅವಲಹಳ್ಳಿ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.
ಅವರು ನೀಡಿರುವಂತ ದೂರಿನಲ್ಲಿ ಪ್ರಸಿದ್ಧ ಗಾಯಕ ಸೋನು ನಿಗಮ್ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ವಿರ್ಗೊನಗರ್, ಬೆಂಗಳೂರು ಇಲ್ಲಿ ಏಪ್ರಿಲ್ 30, 2025 ರಂದು ನಡೆದ ಸಂಗೀತ ಕಾರ್ಯಕ್ರಮದಲ್ಲಿ ಮಾಡಿದ ಆಕ್ಷೇಪಾರ್ಹ ಮತ್ತು ಭಾವನೆಗಳನ್ನು ಕೆರಳಿಸುವ ಹೇಳಿಕೆಗಳಿಗಾಗಿ ಈ ಮೂಲಕ ದೂರನ್ನು ಸಲ್ಲಿಸುತ್ತಿದ್ದೇನೆ.