newsics.com
ಬೆಂಗಳೂರು : ಪಹಲ್ಗಾಮ್‌ನಲ್ಲಿ ದಾಳಿ ಖಂಡಿಸಿ ಟೀಮ್ ಬ್ಯೂಟಿಫುಲ್ ಬೇಗೂರ್ ಒಕ್ಕೂಟದ ನಿವಾಸಿಗಳು ಮೇಣದಬತ್ತಿ ಮೆರವಣಿಗೆ ಕೈಗೊಂಡಿದ್ದಾರೆ. ಈ ಮೆರವಣಿಗೆ ದುಃಖ ಮತ್ತು ಹಿಂಸಾಚಾರದ ವಿರುದ್ಧ ನಮ್ಮ ಹೋರಾಟದ ಪ್ರತೀಕ ಎಂದು ಇಲ್ಲಿನ ನಿವಾಸಿಗಳು ಹೇಳಿಕೊಂಡಿದ್ದಾರೆ.
ಈ ದುಃಖದ ಕ್ಷಣದಲ್ಲಿ, ನಾವು ಒಂದು ಸಮುದಾಯವಾಗಿ ಒಗ್ಗೂಡಿ ಭಯೋತ್ಪಾದನೆಯನ್ನು ಎದುರಿಸಬೇಕಿದೆ.ನಾವು ಈ ಉಗ್ರ ಕೃತ್ಯದಿಂದ ಎದೆಗುಂದಿಲ್ಲ ಎಂಬ ಪ್ರಬಲ ಸಂದೇಶ ಸಾರುವುದು ಬಹಳ ಮುಖ್ಯ. ನಮ್ಮ ಮೌನ ಮೇಣದಬತ್ತಿಯ ಮೆರವಣಿಗೆ ಮೂಲಕ ಶಾಂತಿಯುತ ಭವಿಷ್ಯಕ್ಕಾಗಿ ನಮ್ಮ ಈ ಹೋರಾಟ ಎಂದಿದ್ದಾರೆ.
ಭಾರತದ ವಿರುದ್ಧ ಭಯೋತ್ಪಾದಕರು ನಡೆಸಿದ ಈ ಕೃತ್ಯಕ್ಕೆ ಪ್ರತ್ಯುತ್ತರವಾಗಿ ನಾವು ಹೆಗಲಿಗೆ ಹೆಗಲು ಕೊಟ್ಟು ನಿಲ್ಲೋಣ, ಭಯೋತ್ಪಾದಕರಿಂದ ಮುಕ್ತವಾದ ಭಾರತ ನಮ್ಮ ಆಕಾಂಕ್ಷೆ ಎಂದು ಟೀಮ್ ಬ್ಯೂಟಿಫುಲ್ ಬೇಗೂರ್ ನ ಅಧ್ಯಕ್ಷ ಪ್ರಕಾಶ್ ಕೆ ಹೇಳಿದ್ದಾರೆ.
DRUGS CASE: ಡ್ರಗ್ಸ್ ಪ್ರಕರಣ- ನಟ ಚಾಕೋ ಬೆನ್ನಲ್ಲೇ ಮಲಯಾಳಂ ನಿರ್ದೇಶಕರಿಬ್ಬರು ಅರೆಸ್ಟ್