newsics.com
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರದ ಜೈಲು ಸೇರಿದ್ದಾರೆ. ಇತ್ತ ದರ್ಶನ್ ಅಭಿಮಾನಿಗಳ ಹುಚ್ಟಾಟ ಹೆಚ್ಚಾಗಿದ್ದು ಪುಟ್ಟ ಮಗುವಿಗೆ ಖೈದಿ ಬಟ್ಟೆ ತೊಡಿಸಿ ಸಂಭ್ರಮಾಚರಣೆ ಮಾಡಿದ ಪೋಷಕರಿಗೆ ಬಿಸಿ ಮುಟ್ಟಿಸಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮುಂದಾಗಿದೆ.
ದರ್ಶನ್ ಅಭಿಮಾನಿಯೊಬ್ಬ ತನ್ನ ಮಗುವಿಗೆ ಖೈದಿ ಡ್ರೆಸ್ ಧರಿಸಿ ಖೈದಿ ಮಾಡಿಬಿಟ್ಟಿದ್ದಾನೆ. ಮಗುವಿಗೆ ಖೈದಿ ಡ್ರೆಸ್ ಧರಿಸಿ ಫೋಟೋಶೂಟ್ ಮಾಡಿದ್ದು ಮಾತ್ರವಲ್ಲದೇ, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ. ಇವು ವೈರಲ್ ಆಗಿವೆ. ಇದೀಗ ಈ ರೀತಿ ಮಗುವಿನ ಫೋಟೋಶೂಟ್ ಮಾಡಿಸಿದ ಪಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಜ್ಜಗಿದೆ.
ದರ್ಶನ್ ಮೇಲಿನ ಅಂಧಾಭಿಮಾನ ಪ್ರದರ್ಶನಕ್ಕೆ ಮುಂದಾಗಿ ಕಾನೂನಿನ ಕುಣಿಕೆಗೆ ಈಗ ಪೋಷಕರು ಸಿಲುಕಿಕೊಂಡಿದ್ದಾರೆ. ಈ ವಿಚಾರ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದೆ. ಈಗ ಪೊಲೀಸ್ ಇಲಾಖೆ ಮೂಲಕ ಪೋಷಕರ ಪತ್ತೆ ಕಾರ್ಯಕ್ಕೆ ಮುಂದಾಗಿದೆ.
ನಾನು ಪ್ರೆಗ್ನೆಂಟ್ ಎಂದು ತಿಳಿದಾಗ ನಾನು ವಿಡಿಯೋ ಕಾಲ್ ಮಾಡಿ ಕಣ್ಣೀರಿಟ್ಟೆ: ಹರ್ಷಿಕಾ ಪೂಣಚ್ಚ