newsics.com
ಜಮ್ಮು-ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಕಾಶ್ಮೀರದ ಕಣಿವೆಯಲ್ಲಿ ಪ್ರವಾಸಿಗರ ನೆತ್ತರು ಹರಿದಿದೆ. ಪತ್ನಿ-ಮಕ್ಕಳ ಮುಂದೆಯೇ ಪುರುಷರನ್ನು ಗುಂಡಿಕ್ಕಿ ಕೊಂದಿದ್ದಾರೆ. ನನ್ನ ಮಗ ಹಿಂದೂ ಅಂತ ಹೇಳ್ತಿದ್ದಂತೆ ಅವನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮಧುಸೂದನ್ ಚಿಕ್ಕಪ್ಪ ತಿಳಿಸಿದ್ದಾರೆ.
ಜಮ್ಮುವಿನಲ್ಲಿ ನಡೆದ ಗುಂಡಿನ ದಾಳಿ ಬಗ್ಗೆ ಅಲ್ಲೇ ಇರುವ ಕುಟುಂಬಸ್ಥರಿಂದ ಮಾಹಿತಿ ಪಡೆದ ಮಧುಸೂದನ್ ಚಿಕ್ಕಪ್ಪ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಪಹಲ್ಗಾಮ್ನಲ್ಲಿ ಗುಂಡಿನ ಮಳೆ ಸುರಿಸಿದ ಭಯೋತ್ಪಾದಕರು ಅಲ್ಲೇ ಇದ್ದ ಬಸ್ಗೂ ಹತ್ತಿದ್ದಾರೆ. ಪ್ರವಾಸಿಗರಿಗೆ ನಿಮ್ಮ ಐಡಿ ಕಾರ್ಡ್ ತೋರಿಸಿ ಎಂದು ಕೇಳಿದ್ದಾರಂತೆ. ನೀವು ಹಿಂದುನಾ? ಮುಸ್ಲಿಂ ಅಂತ ಹೇಳಿದ್ದಾರೆ. ಮುಸ್ಲಿಂ ಅಂದ್ರು ಕೆಲವರನ್ನು ಕುರಾನ್ ಓದು ಅಂತೆಲ್ಲಾ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ನನ್ನ ಮಗ ಮಧುಸೂದನ್ ತಾನು ಹಿಂದೂ ಅಂತ ಹೇಳಿಕೊಳ್ತಿದ್ದಂತೆ ಆತನನ್ನು ಹೆಂಡತಿ, ಮಕ್ಕಳ ಮುಂದೆ ಗುಂಡಿಕ್ಕಿ ಕೊಂದ್ರು ಎಂದು ಅವರ ಚಿಕ್ಕಪ್ಪ ಹೇಳಿದ್ದಾರೆ. ಮಧುಸೂದನ್ ಅವರು ಕಳೆದ 20 ವರುಷದಿಂದ ಬೆಂಗಳೂರಿನಲ್ಲಿ ಐಟಿ ಉದ್ಯೋಗಿ ಕೆಲಸ ಮಾಡಿದ್ದರು. ಐಬಿಎಂನಲ್ಲಿ ಕೆಲಸ ಮಾಡುತ್ತಿದ್ದ ಅವರು ಫ್ಯಾಮಿಲಿ ಸಮೇತ ಟೂರ್ ಹೋಗಿದ್ದರು. ಜೊತೆಗೆ ಅವರ ಆಫೀಸ್ ನವರು ತೆರಳಿದ್ರು.
Pahalgam Attack: ಹಿಂದೂಗಳ ಪ್ಯಾಂಟ್ ಬಿಚ್ಚಿಸಿ ಕೊಂದ ಭಯೋತ್ಪಾದಕರು: 50ಕ್ಕೂ ಹೆಚ್ಚು ಗುಂಡು ಹಾರಿಸಿದ ಉಗ್ರರು!