newsics.com
ಸೂಪರ್ ಸ್ಟಾರ್ ರಜನಿಕಾಂತ್ ‘ಜೈಲರ್ 2’ ಚಿತ್ರೀಕರಣಕ್ಕಾಗಿ ಕೇರಳದ ಅಟ್ಟಪ್ಪಾಡಿಯಲ್ಲಿ ಬೀಡು ಬಿಟ್ಟಿದ್ದಾರೆ. ಇದೀಗ ಅಭಿಮಾನಿಗಳಿಗೆ ರಜನಿಕಾಂತ್ ದರ್ಶನ ನೀಡಿದ್ದಾರೆ. ಕೇರಳದಲ್ಲಿ ಅಭಿಮಾನಿಗಳತ್ತ ಕೈ ಬೀಸುತ್ತಿರುವ ವಿಡಿಯೋವೊಂದು ಭಾರಿ ವೈರಲ್ ಆಗಿದೆ.
ಕೂಲಿ’ ಸಿನಿಮಾ ಮುಗಿಯುತ್ತಿದ್ದಂತೆ ‘ಜೈಲರ್ 2’ ಸಿನಿಮಾವನ್ನು ರಜನಿಕಾಂತ್ ಕೈಗೆತ್ತಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್ ಕೇರಳದ ಅಟ್ಟಪ್ಪಾಡಿಯಲ್ಲಿ ಭರದಿಂದ ನಡೆಯುತ್ತಿದೆ. ತಮ್ಮ ಶೂಟಿಂಗ್ ಬಿಡುವಿನ ಸಮಯದಲ್ಲಿ ಅಭಿಮಾನಿಗಳಿಗೆ ತಲೈವಾ ಸಮಯ ಕೊಟ್ಟಿದ್ದಾರೆ. ಕಾರಿನಲ್ಲಿ ಸಿಟಿ ರೌಂಡ್ ಹೊಡೆದಿದ್ದಾರೆ. ಕಾರ್ನ ಸನ್ರೂಫ್ ತೆಗೆದು ನಟ ಜನರತ್ತ ಕೈಬೀಸಿ ದರ್ಶನ ನೀಡಿದ್ದಾರೆ. ಆಗ ಫ್ಯಾನ್ಸ್ ನಟನಿಗೆ ಜೈಕಾರ ಹಾಕಿದ್ದಾರೆ. ಹತ್ತಿರದಿಂದ ನಟನನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಮೂಲಗಳ ಪ್ರಕಾರ, ಕೆಲವು ದಿನಗಳಿಂದ ರಜನಿಕಾಂತ್ ‘ಜೈಲರ್ 2’ಗಾಗಿ ಕೇರಳದಲ್ಲಿ ಬೀಡು ಬಿಟ್ಟಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲ ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ಅವರೊಂದಿಗೆ ರಮ್ಯಾ ಕೃಷ್ಣನ್ ಮತ್ತು ಮಿರ್ನಾ ಮೆನನ್ ಕೂಡ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.
ಬೆಳಿಗ್ಗೆ ರಜನಿ ಶೂಟಿಂಗ್ಗೆ ತೆರಳುತ್ತಿರುವುದನ್ನು ನೋಡಿದ ಅಭಿಮಾನಿಯೊಬ್ಬರು ಕೈಯಲ್ಲಿ ಕರ್ಪೂರ ಹಚ್ಚಿ, ಆರತಿ ಮಾಡಿ ಅವರಿಗೆ ನಮಸ್ಕರಿಸಿದರು. ನೀನು ಚಿನ್ನದ ನಗರದ ರಾಜ… ದೇವರು ನಮಗೆ ಆಚರಿಸಲು ಕೊಟ್ಟ ರಾಜ ನೀನು… ಲವ್ ಯು ತಲೈವಾ… ಎಂದು ಪೋಸ್ಟ್ ಮಾಡಲಾಗಿದೆ.
ಈ ಚಿತ್ರದ ನಂತರ, ನೆಲ್ಸನ್ ‘ಜೈಲರ್ 2’ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಇದರಲ್ಲಿ ರಜನಿಕಾಂತ್ ಪ್ರಸ್ತುತ ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಿಸಿದೆ. ರಮ್ಯಾ ಕೃಷ್ಣನ್ ಮತ್ತು ಶಿವರಾಜ್ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸುವುದು ದೃಢಪಟ್ಟಿದೆ. ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
Pahalgam attack ಪಹಲ್ಗಾಮ್ ದಾಳಿ: ನಾಲ್ವರು ಉಗ್ರರ ರೇಖಾಚಿತ್ರ ಬಿಡುಗಡೆ, ಬಹುಮಾನ ಘೋಷಣೆ