newsics.com
ಆಂಧ್ರಪ್ರದೇಶ: ಕಾಲೇಜು ಆವರಣದಲ್ಲಿ ಮಾತನಾಡುವಾಗ ಫೋನ್ ಕಿತ್ಕೊಂಡ ಲೆಕ್ಚರ್ ಗೆ ವಿದ್ಯಾರ್ಥಿನಿಯೋರ್ವಳು ಚಪ್ಪಲಿಯಲ್ಲಿ ಹೊಡೆದ ಘಟನೆ ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ.
ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳು ಫೋನ್‌ನಲ್ಲಿ ಮಾತನಾಡುತ್ತಿದ್ದಾಗ, ಅದನ್ನು ಗಮನಿಸಿದ ಮಹಿಳಾ ಉಪನ್ಯಾಸಕಿಯೊಬ್ಬರು ಫೋನ್ ಕಸಿದುಕೊಂಡರು. ಇದರಿಂದ ಕೋಪಗೊಂಡ ವಿದ್ಯಾರ್ಥಿನಿ, ಉಪನ್ಯಾಸಕಿ ಜತೆ ಅಲ್ಲಿಯೇ ವಾಗ್ವಾದಕ್ಕೆ ಇಳಿದಳು.
ಫೋನ್ ಕೊಡುವಂತೆ ಉಪನ್ಯಾಸಕಿಯನ್ನು ಒತ್ತಾಯಿಸಿದ ವಿದ್ಯಾರ್ಥಿನಿ, ಬಾಯಿಗೆ ಬಂದಂತೆ ನಿಂದಿಸಿದಳು. ಯಾವಾಗ ಉಪನ್ಯಾಸಕಿ ಫೋನ್ ಕೊಡಲು ನಿರಾಕರಿಸಿದರು ತನ್ನ ಕಾಲಿನಲ್ಲಿದ್ದ ಚಪ್ಪಲಿಯೊಂದನ್ನು ಕಳಚಿದ ವಿದ್ಯಾರ್ಥಿನಿ, ಉಪನ್ಯಾಸಕಿಯ ಮೇಲೆ ಹಲ್ಲೆ ಮಾಡಿದಳು. ಈ ವೇಳೆ ಉಪನ್ಯಾಸಕಿ ಕೂಡ ಆಕೆಯ ವಿರುದ್ಧ ಪ್ರತಿದಾಳಿ ನಡೆಸಿದರು.
ಸಹ ವಿದ್ಯಾರ್ಥಿಗಳು ಮತ್ತು ಇನ್ನೊಬ್ಬ ವ್ಯಕ್ತಿ ಮಧ್ಯಪ್ರವೇಶಿಸಿ ಜಗಳವನ್ನು ತಡೆದರು. ಈ ವೇಳೆ ಅಲ್ಲೇ ಇದ್ದ ಮತ್ತೊಬ್ಬ ವಿದ್ಯಾರ್ಥಿ ಈ ಘಟನೆಯನ್ನು ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೆ, ನೆಟ್ಟಿಗರು ಮಾತ್ರ ವಿದ್ಯಾರ್ಥಿನಿಯ ನಡೆಯನ್ನು ಟೀಕಿಸುತ್ತಿದ್ದಾರೆ.
Terror Attack ಹನಿಮೂನ್ ಗೆ ಬಂದಿದ್ದ ನವಜೋಡಿಗೆ ಕರಾಳ ದಿನ – ಉಗ್ರರ ಗುಂಡಿಗೆ ಲೆಫ್ಟಿನೆಂಟ್ ವಿನಯ್ ನರ್ವಾಲ್ ಬಲಿ