newsics.com
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಾನ ದಾಳಿಯಲ್ಲಿ 27 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಪುರುಷರನ್ನು ಗುಂಡು ಹಾರಿಸುವ ಮೊದಲು ಇಸ್ಲಾಂನಲ್ಲಿ ನಂಬಿಕೆಯ ಔಪಚಾರಿಕ ಘೋಷಣೆಯನ್ನು ಸೂಚಿಸುವ ‘ ಕಲ್ಮಾ’ವನ್ನು ಪಠಿಸಲು ಭಯೋತ್ಪಾದಕರು ಹೇಳಿದ್ದಾರೆ.
ಉಗ್ರರು ಹೆಸರು, ಧರ್ಮ ಮತ್ತು ಜಾತಿಯನ್ನು ಕೇಳಿ ಮನಬಂದಂತೆ ಗುಂಡು ಹಾರಿಸಿ ಕೊಲ್ಲುತ್ತಿದ್ದರು. ಪಹಲ್ಗಾಮ್‌ನಲ್ಲಿ, ಭಯೋತ್ಪಾದಕರು ಪ್ರವಾಸಿಗರಿಗೆ ಕಲ್ಮಾ ಪಠಣ ಮಾಡಲು ಸಹ ಹೇಳಿದ್ದಾರೆ. ಈ ವಿಧಾನವು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯದ್ದಾಗಿದ್ದು, ಈಗ ಇದನ್ನು ಲಷ್ಕರ್ ಮತ್ತು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರು ಸಹ ಅಳವಡಿಸಿಕೊಂಡಿದ್ದಾರೆ. Lಅಮರನಾಥ ಯಾತ್ರೆಯನ್ನು ಅಡ್ಡಿಪಡಿಸಲು ಭಯೋತ್ಪಾದಕರು ಈ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.