newsics.com
ಜಮ್ಮು ಮತ್ತು ಕಾಶ್ಮೀರ: ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿಯಲ್ಲಿ 27 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಪಹಲ್ಗಾಮ್ ಬಳಿ ರಸ್ತೆಯಲ್ಲಿ ಬೇಲ್‌ಪುರಿ ತಿನ್ನುತ್ತಿರುವಾಗ ಸೇನಾ ಸಮವಸ್ತ್ರದಲ್ಲಿ ಬಂದಿದ್ದ ಉಗ್ರರು ಮೊದಲಿಗೆ ಹೆಸರು ಹಾಗೂ ಯಾವ ಧರ್ಮ ಎಂದು ಕೇಳಿದ್ದಾರೆ. ಮುಸ್ಲಿಮರು ಅಲ್ಲ ಎಂದು ಗೊತ್ತಾದ ಬಳಿಕ ತಲೆಗೆ ಗುಂಡು ಹೊಡೆದಿದ್ದಾರೆ. ಈ ವೇಳೆ ನನ್ನ ಹಾಗೂ ನನ್ನ ಮಗನನ್ನೂ ಕೊಲ್ಲಿ ಎಂದು ಉಗ್ರರ ಎದುರು ನಾನು ಕಣ್ಣೀರಿಟ್ಟೆ. ಆದರೆ, ನೀನು ಹೆಂಗಸು ನಿನ್ನನ್ನು ಕೊಲ್ಲೋದಿಲ್ಲ. ಇದನ್ನ ನೀನು ಮೋದಿಗೆ ಹೋಗಿ ತಿಳಿಸು ಎಂದು ಆತ ಹೇಳಿದ್ದ ಎಂದು ಮತ ಮಂಜುನಾಥ್ ರಾವ್ ಅವರ ಪತ್ನಿ ಪಲ್ಲವಿ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ತಿಳಿಸಿದ್ದಾರೆ.
ಟೂರಿಸ್ಟ್‌ಗಳಾಗಿದ್ದ ಗಂಡಸರಿಗೆ ಮಾತ್ರ ಹೊಡೆದಿದ್ದಾರೆ. ಹೆಂಗಸರು ಮತ್ತು ಮಕ್ಕಳಿಗೆ ಏನೂ ಮಾಡಿಲ್ಲ. ನನ್ನ ಜೊತೆ ಬಂದಿರುವ ಡ್ರೈವರ್ ತುಂಬಾ ಒಳ್ಳೆಯವರು. ಅವರು ಅಲ್ಲೆಲ್ಲಾ ಗನ್ ಹಿಡಿದುಕೊಂಡು ಬಂದು ಹೊಡೆದಿದ್ದಾರೆ. ಆಕಸ್ಮಾತ್ ಆಗಿ ಹೆಂಗಸರು ಮತ್ತು ಮಕ್ಕಳಿಗೆ ತಾಗಿದ್ದರೆ ಮಾತ್ರ ಗಾಯವಾಗಿರಬಹುದು. ಮದುವೆ ಆಗಿ ಬಂದಿದ್ದ ಕಪಲ್‌ಗಳನ್ನು ಹುಡುಕಿ ಗಂಡಸರನ್ನು ಹಿಂದೂಗಳೇ ಎಂಬುದನ್ನು ಹುಡುಕಿ ಗುಂಡು ಹಾರಿಸಿ ಕೊಲ್ಲುತ್ತಿದ್ದರು ಎಂದು ಹೇಳಿದ್ದಾರೆ.