newsics.com
ಕೇಂದ್ರ ಲೋಕ ಸೇವಾ ಆಯೋಗ ಇಂದು ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಈ ಪರೀಕ್ಷೆಯಲ್ಲಿ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ.ಪ್ರಯಾಗ್‌ರಾಜ್‌ನ ಶಕ್ತಿ ದುಬೆ ಯುಪಿಎಸ್‌ಸಿ ಸಿಎಸ್‌ಇ 2025 ರಲ್ಲಿ 1 ನೇ ಶ್ರೇಯಾಂಕ ಗಳಿಸಿ ವರ್ಷದ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಹರಿಯಾಣದ ಹರ್ಷಿತಾ ಗೋಯಲ್ ಎರಡನೇ ಸ್ಥಾನ ಮತ್ತು ಡೊಂಗ್ರೆ ಅರ್ಚಿತ್ ಪರಾಗ್ ಮೂರನೇ ಸ್ಥಾನ ಗಳಿಸಿದ್ದಾರೆ.
ಟಾಪ್ 50ರ ಒಳಗೆ ಕರ್ನಾಟಕದ ಇಬ್ಬರು ವೈದ್ಯರು ಸೇರಿದ್ದಾರೆ. ಡಾ.ರಂಗ ಮಂಜು 24ನೇ ಮತ್ತು ಡಾ.ಸಚಿನ್ ಹರಿಹರ್ 41ನೇ ಸ್ಥಾನ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೇಂದ್ರ ಲೋಕಸೇವಾ ಆಯೋಗ 2024ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಒಟ್ಟು 1,009 ಅಭ್ಯರ್ಥಿಗಳನ್ನು ನೇಮಕಾತಿಗಾಗಿ ಆಯ್ಕೆ ಮಾಡಿದೆ. ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಸಾಮಾನ್ಯ ವರ್ಗದ 335, ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯೂಎಸ್) 109, ಇತರ ಹಿಂದುಳಿದ ವರ್ಗಗಳು (ಒಬಿಸಿ) 318, ಪರಿಶಿಷ್ಟ ಜಾತಿ (ಎಸ್‌ಸಿ) 160 ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) 87 ಸೇರಿದಂತೆ ವಿವಿಧ ವರ್ಗಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: upsc.gov.in
- ‘Final Result – Civil Services Examination, 2024’ ಮೇಲೆ ಕ್ಲಿಕ್ ಮಾಡಿ
- ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಹೊಂದಿರುವ PDF ಅನ್ನು ಡೌನ್‌ಲೋಡ್ ಮಾಡಿ
- ಪಟ್ಟಿಯಲ್ಲಿ ನಿಮ್ಮ ರೋಲ್ ಸಂಖ್ಯೆಯನ್ನು ಹುಡುಕಿ
- ರೆಫರೆನ್ಸ್‌ಗಾಗಿ ರಿಸಲ್ಟ್ ಶೀಟ್‌ಅನ್ನು ಪ್ರಿಂಟ್ ಮಾಡಿ’
ಯುಪಿಎಸ್‌ಸಿ ನವದೆಹಲಿಯಲ್ಲಿರುವ ತನ್ನ ಕಚೇರಿಯಲ್ಲಿ ಸೌಲಭ್ಯ ಕೌಂಟರ್ ಅನ್ನು ಸ್ಥಾಪಿಸಿದೆ. ಯಾವುದೇ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಕೆಲಸದ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಭೇಟಿ ನೀಡಬಹುದು. ಫಲಿತಾಂಶ ಬಿಡುಗಡೆಯಾದ 15 ದಿನಗಳಲ್ಲಿ ಎಲ್ಲಾ ಅಭ್ಯರ್ಥಿಗಳ ಅಂಕಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.