newsics.com
ಅರ್ಧಚಂದ್ರ, ಶುಕ್ರ ಹಾಗೂ ಶನಿ ಗ್ರಹಗಳು ಆಗಸದಲ್ಲಿ ಜೊತೆಯಾಗುತ್ತಿದೆ. ಅಂದರೆ ತನ್ನ ಕಕ್ಷೆಯಲ್ಲಿ ಸುತ್ತುತ್ತಾ ಹತ್ತಿರವಾಗಲಿದೆ. ಇದು ಸ್ಮೈಲಿ ಫೇಸ್ ಅಥವಾ ನಗು ಮುಖದ ಆಕೃತಿಯನ್ನು ಹೋಲುತ್ತದೆ. ಈ ತ್ರಿವಳಿ ಸಂಯೋಗ ಇದೇ ತಿಂಗಳಲ್ಲಿ ನಡೆಯುತ್ತಿದೆ. ಹೀಗಾಗಿ ಈ ದಿನ ಯಾರೂ ಆಗಸ ನೋಡುವುದನ್ನು ಮರೆಯಬೇಡಿ. ವಿಶೇಷ ಹಾಗೂ ಅಪರೂಪದ ಕೌತುಕವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಲಿದೆ.
ಅರ್ಧಚಂದ್ರ, ಶುಕ್ರ ಹಾಗೂ ಶನಿ ಅಪರೂಪಯ ಸಂಯೋಗ ಇದೇ ಎಪ್ರಿಲ್ ತಿಂಗಳ 25ರಂದು ಈ ವಿಸ್ಮಯ ಘಟಿಸುತ್ತಿದೆ. 25ರ ಬೆಳಗಿನ ಜಾವ ಈ ಕೌತುಕ ಗೋಚರವಾಗಲಿದೆ. ಅಂದರೆ ಏಪ್ರಿಲ್ 25ರ ಸೂರ್ಯೋದಕ್ಕೂ 1 ಗಂಟೆ ಮೊದಲು ಈ ವಿಸ್ಮಯ ಘಟಿಸುತ್ತದೆ. ಮೋಡ ಅಥವಾ ಇನ್ಯಾವುದೇ ರೀತಿಯ ಅಡ್ಡಿ ಆತಂಕವಿಲ್ಲದಿದ್ದರೆ,ವಿಶ್ವದ ಯಾವುದೇ ಮೂಲೆಯಿಂದ ನೋಡಿದರೂ ಈ ಸಂಯೋಗ ಕಾಣಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಈ ತ್ರಿವಳಿ ಸಂಯೋಗ ಹಾಗೂ ನಗು ಮುಖದ ರೂಪ ಕೆಲ ಹೊತ್ತು ಮಾತ್ರ ಇರಲಿದೆ ಎಂದಿದ್ದಾರೆ. ಈ ವಿಸ್ಮಯ ನೋಡಲು ನೀವು ಪೂರ್ವ ದಿಗಂತದ ಕಡೆ ನೋಡಬೇಕು. ಈ ನೋಟದಲ್ಲಿ ಯಾವುದೇ ಅಡೆ ತಡೆ ಇಲ್ಲದಂತೆ ಖಚಿತಪಡಿಸಿಕೊಳ್ಳಿ.
ಇನ್ನು ಅರ್ಧಚಂದ್ರ ಸುಲಭವಾಗಿ ಗೋಚರಿಸುತ್ತಾನೆ. ಇಷ್ಟೇ ಅಲ್ಲ, ಆಗಸ ಕ್ಲಿಯರ್ ಆಗಿದ್ದರೆ, ಶುಕ್ರ ಹಾಗೂ ಶನಿ ಹೆಚ್ಚು ಪ್ರಕಾಶಮಾನವಾಗಿರುವ ಕಾರಣ ಬರಿಗಣ್ಣಿನಲ್ಲಿ ಈ ವಿಸ್ಮಯ ನೋಡಲು ಸಾಧ್ಯವಿದೆ. ದೂರದರ್ಶಕ ಅಥವಾ ನಕ್ಷತ್ರ ವೀಕ್ಷಕ ಬೈನಾಕ್ಯುಲರ್ ಇದ್ದರೆ ಈ ನಗು ಮುಖದ ಸಂಪೂರ್ಣ ವಿವರ ಸಿಗಲಿದೆ.