newsics.com
ಪೊರಕೆಗಳನ್ನು ಸರಿಯಾದ ಸ್ಥಳದಲ್ಲಿ ಅಥವಾ ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ಅದು ವಾಸ್ತು ದೋಷಕ್ಕೆ ಕಾರಣವಾಗಬಹುದು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಮತ್ತು ನಿಮ್ಮ ವಾಸಸ್ಥಳದಲ್ಲಿ ವಾಸ್ತು ದೋಷ ಇದ್ದಾಗ, ಅದು ಸಂಪತ್ತು, ಆರೋಗ್ಯ, ಮದುವೆ ಸಂಬಂಧಿತ ಸಮಸ್ಯೆಗಳು ಮತ್ತು ಹೆಚ್ಚಿನವುಗಳ ಬರಿದಾಗುವಿಕೆಗೆ ಕಾರಣವಾಗಬಹುದು.
ನಾವು ಪ್ರತಿದಿನ ಮನೆಯನ್ನು ಸ್ವಚ್ಛವಾಗಿಡುವ ಪೊರಕೆಗೆ ಸಂಬಂಧಿಸಿದಂತೆ ಕೂಡಾ ಕೆಲವೊಂದು ವಾಸ್ತು ನಿಯಮವನ್ನು ಅನುಸರಿಸಬೇಕಾಗುತ್ತದೆ. ಪೊರಕೆಯನ್ನು ಎಲ್ಲೆಂದರಲ್ಲಿ ಬಿಸಾಡಿದರೆ ಲಕ್ಷ್ಮಿ ದೇವಿ ಕೋಪಗೊಂಡು ಮನೆ ಬಿಡುತ್ತಾಳೆ ಎಂಬ ನಂಬಿಕೆ ಇದೆ. ಇದರಿಂದ ನಿಮಗೆ ಆರ್ಥಿಕ ಸಮಸ್ಯೆ ಎದುರಾಗಬಹುದು. ಆದ್ದರಿಂದ ಪೊರಕೆ ವಿಷಯದಲ್ಲಿ ನೀವು ಇಲ್ಲಿ ತಿಳಿಸಿರುವ ಕೆಲವೊಂದು ನಿಯಮಗಳನ್ನು ಪಾಲಿಸಿ.
ಪೊರಕೆಯನ್ನು ಈ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು…
ವಾಸ್ತು ಪ್ರಕಾರ ಪೊರಕೆಯನ್ನು ಈಶಾನ್ಯ ದಿಕ್ಕಿನಲ್ಲಿಡಬಾರದು. ಇದರಿಂದ ಹಣದ ಆಗಮನ ನಿಲ್ಲುತ್ತದೆ. ಹೀಗಾಗಿ ಪೊರಕೆಯನ್ನು ದಕ್ಷಿಣ ಅಥವಾ ನೈರುತ್ಯ ದಿಕ್ಕಿನಲ್ಲಿ ಇಡುವುದು ಸೂಕ್ತ.
ಜೊತೆಗೆ ಪೊರಕೆಯನ್ನು ಯಾವಾಗಲೂ ಇತರರ ಕಣ್ಣಿಗೆ ಕಾಣದಂತಹ ಸ್ಥಳದಲ್ಲಿ ಇಡಬೇಕು. ಮಲಗುವ ಕೋಣೆಯಲ್ಲಿ ಅಪ್ಪಿತಪ್ಪಿಯೂ ಪೊರಕೆಯನ್ನು ಇಡಬಾರದು. ಅಡುಗೆ ಮನೆಯಲ್ಲೂ ಪೊರಕೆ ಇಡುವುದನ್ನು ಆದಷ್ಟು ತಪ್ಪಿಸಿ, ಇದರಿಂದ ಸಂಪತ್ತಿನಲ್ಲಿ ಇಳಿಕೆ ಕಂಡುಬರುತ್ತದೆ.
ಈ ಅಂಶಗಳು ನೆನಪಿರಲಿ
* ಪೊರಕೆಯನ್ನು ಕಾಲಿನಲ್ಲಿ ತುಳಿಯಬೇಡಿ, ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ತಾಯಿ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ.
*ಕುಟುಂಬ ಸದಸ್ಯರು ಮನೆಯಿಂದ ಹೊರಗೆ ಹೋಗುವಾಗ ಪೊರಕೆಯನ್ನು ಅಡ್ಡಲಾಗಿ ತರಬಾರದು ಮತ್ತು ಕಸವನ್ನು ಗುಡಿಸುತ್ತಿರಬಾರದು. ಆ ವೇಳೆ ಪೊರಕೆಯನ್ನು ಅಡ್ಡಲಾಗಿ ಮಲಗಿಸಬೇಕು. ಅದರಂತೆ ಸೂರ್ಯಾಸ್ತದ ಬಳಿಕ ಪೊರಕೆಯಿಂದ ಕಸವನ್ನು ಗುಡಿಸಬಾರದು.
* ಮನೆಯಲ್ಲಿ ಹಾಳಾಗಿರುವ ಪೊರಕೆಯನ್ನು ಬಳಸಬಾರದು ಮತ್ತು ಶನಿವಾರ ಮನೆಯಲ್ಲಿ ಹೊಸ ಪೊರಕೆಯನ್ನು ಖರೀದಿಸಬಾರದು.
* ಹಳೆಯ ಪೊರಕೆಯನ್ನು ಗುರುವಾರ ಮತ್ತು ಶುಕ್ರವಾರ ಮನೆಯಿಂದ ಹೊರಗೆ ಹಾಕಬಾರದು.