newsics.com
ಭೂಮಿಯ ಮೇಲೆ ಅನ್ಯಗ್ರಹ ಜೀವಿಗಳ ಅಸ್ತಿತ್ವದ ಬಗ್ಗೆ ಕುತೂಹಲ ಹೆಚ್ಚುತ್ತಲೇ ಇದೆ. ಮನುಷ್ಯರನ್ನು ಹೋಲುವ ಜೀವಿಗಳಿವೆ ಎಂದು ಅನೇಕ ಜನರು ನಂಬುತ್ತಾರೆ. ಕೆಲವು ವಿಜ್ಞಾನಿಗಳು ವರ್ಷಗಳಿಂದ ಏಲಿಯನ್‌ಗಳನ್ನು ಹುಡುಕಲು ಪ್ರಯೋಗಗಳನ್ನು ನಡೆಸುತ್ತಿದ್ದಾರೆ.
ಇದೀಗ, ವೀಡಿಯೊವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಏಲಿಯನ್ಸ್ ನಮ್ಮ ಭೂಮಿಯ ಹತ್ತಿರ ಓಡಾಡುತ್ತಿವೆ ಎಂದು ಹೇಳಲಾಗುತ್ತಿದೆ.
ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ UAPS ರಾತ್ರಿ ಆಕಾಶದಲ್ಲಿ ನಿಗೂಢ, ವರ್ಣರಂಜಿತ ದೀಪಗಳು ಮಿನುಗುತ್ತಿರುವುದು ಕಂಡುಬಂದ ನಂತರ ವಿಚಿತ್ರವಾದ UFO (ಗುರುತಿಸಲಾಗದ ಹಾರುವ ವಸ್ತು) ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವೀಡಿಯೊದಲ್ಲಿ ವಿವಿಧ ಬಣ್ಣಗಳು ಮತ್ತು ಅಸಾಮಾನ್ಯ ಚಲನೆಗಳನ್ನು ಪ್ರದರ್ಶಿಸುವ ದೀಪಗಳನ್ನು ಕಾಣಬಹುದು.. ಇವು ಖಂಡಿತವಾಗಿಯೂ ಏಲಿಯನ್ಸ್ ಎಂದು ಹಲವರು ಹೇಳುತ್ತಾರೆ. ಅನೇಕ ಜನರು ಅನ್ಯಗ್ರಹ ಜೀವಿಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಈ ಬಣ್ಣದ ದೀಪಗಳು ಕುರಿತು ಸ್ಪಷ್ಟ ಮಾಹಿತಿ ತಿಳಿದು ಬರಬೇಕಿದೆ.
https://www.newsics.com/2025/04/17/worlds-first-sperm-race-organized/