newsics.com
ಬೇಸಿಗೆ ಕಾಲದಲ್ಲಿ ಹಲವಾರು ರೋಗ ನಮ್ಮನ್ನ ಕಾಡುತ್ತಿರುತ್ತದೆ. ಸೂರ್ಯನ ಶಾಖಕ್ಕೆ ನಾವು ಬಳಲುವುದಂತು ಖಂಡಿತ ಎಂಬುವುದನ್ನು ಮರೆಯದಿರಿ. ಇಂತಹ ಸಂದರ್ಭದಲ್ಲಿ ನಿಮ್ಮ ಆಹಾರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಹಲವಾರು ಆಹಾರಗಳು ನಿರ್ಜಲೀಕರಣವನ್ನು ಉಂಟುಮಾಡುತ್ತವೆ. ಹಾಗದರೆ ಬೇಸಿಗೆಯಲ್ಲಿ ನೀವು ದೂರವಿರಬೇಕಾದ ಆಹಾರಗಳು ಯಾವುದು?
ಕಾಫಿ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ ಮತ್ತು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ನೀವು ನಿಮ್ಮ ಸಂಪೂರ್ಣವಾಗಿ ಕಾಫಿ ಸೇವನೆ ತ್ಯಜಿಸಲು ಸಾಧ್ಯವಾಗದಿದ್ದರೂ ಸಹ, ಮಿತಿಗೊಳಿಸಿ ಸಾಕು.
ಬೇಸಿಗೆಯಲ್ಲಿ ಹೆಚ್ಚು ಉಪ್ಪು ಸೇವಿಸುವುದನ್ನು ತಪ್ಪಿಸಿ. ಏಕೆಂದರೆ ಅತಿಯಾದ ಉಪ್ಪು ಸೇವನೆಯು ಅಧಿಕ ರಕ್ತದೊತ್ತಡ, ದೇಹದಲ್ಲಿ ಉರಿಯೂತ ಮತ್ತು ಹೃದ್ರೋಗಕ್ಕೆ ಕಾರಣವಾಗಬಹುದು
ಸೋಡಿಯಂ ಅಧಿಕವಾಗಿರುವ ಉಪ್ಪಿನಕಾಯಿ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಬೇಸಿಗೆಯಲ್ಲಿ ಉಪ್ಪಿನಕಾಯಿಯನ್ನು ಅತಿಯಾಗಿ ಸೇವಿಸುವುದರಿಂದ ಅಜೀರ್ಣವೂ ಉಂಟಾಗುತ್ತದೆ ಎಚ್ಚರಿಕೆಯಿಂದಿರಿ.
ಬೇಸಿಗೆಯಲ್ಲಿ ಡ್ರೈ ಪ್ರೂಟ್ಸ್‌ಗಳ ಸೇವನೆಯನ್ನು ಮಿತಿಗೊಳಿಸಿ. ಒಣ ಹಣ್ಣುಗಳು ದೇಹಕ್ಕೆ ಪೋಷಣೆ ನೀಡುತ್ತವೆ ಎಂಬುದು ನಿಜ ಆದರೆ ಅವು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತವೆ.
ಕಾರ್ಬೊನೇಟೆಡ್ ಪಾನೀಯಗಳು ಅತ್ಯಂತ ವ್ಯಸನಕಾರಿಯಾಗಿರಬಹುದು ಮತ್ತು ಬೇಸಿಗೆಯಲ್ಲಿ, ನೀವು ಅವುಗಳನ್ನು ಹೆಚ್ಚು ಕುಡಿಯಲು ಬಯಸುತ್ತೀರಿ. ಆದರೆ ಸೋಡಾ ಅತ್ಯಂತ ಅನಾರೋಗ್ಯಕರ ಪಾನಿಯವಾಗಿದ್ದು, ಇದರಲ್ಲಿ ಸಕ್ಕರೆಯಲ್ಲಿ ಅಧಿಕವಾಗಿರುತ್ತದೆ.
ಮಿಲ್ಕ್‌ಶೇಕ್‌ಗಳು ಸಾಮಾನ್ಯವಾಗಿ ನಮ್ಮ ಬೇಸಿಗೆಯ ಪಾನೀಯಗಳಾಗಿವೆ. ಹೆಚ್ಚಿನ ಹಾಲಿನ ಅಂಶದೊಂದಿಗೆ, ಮಿಲ್ಕ್ಶೇಕ್ಗಳು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ. ಅಷ್ಟೇ ಅಲ್ಲ, ಅವುಗಳು ಅನಾರೋಗ್ಯಕರ ಕ್ಯಾಲೋರಿಗಳಿಂದ ತುಂಬಿರುತ್ತವೆ. ರಕ್ತದೊತ್ತಡ, ಮಧುಮೇಹ, ಬೊಜ್ಜು ಮತ್ತು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ.
ಸಮೋಸಾಗಳು, ಫ್ರೆಂಚ್ ಫ್ರೈಗಳಂತಹ ಕರಿದ ಆಹಾರಗಳು ನಿರ್ಜಲೀಕರಣವನ್ನು ಹೆಚ್ಚಿಸುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಕರಿದ ಆಹಾರವನ್ನು ತ್ಯಜಿಸುವುದು ಉತ್ತಮ.
https://www.newsics.com/2025/04/16/woman-pleads-for-return-of-missing-husband/