newsics.com
ಲಕ್ನೋ: ಕಾಣೆಯಾಗಿರುವ ಗಂಡನಿಗೆ ಹಿಂದಿರುಗಿ ಬರುವಂತೆ ಮಹಿಳೆ ಮನವಿ ಮಾಡಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪ್ರಾಥಮಿಕ ಶಾಲೆಯ ಶಿಕ್ಷಕರಾಗಿರುವ ಪುಷ್ಪೇಂದ್ರ ಗಂಗ್ವಾರ್ ಕಳೆದ ಐದು ದಿನಗಳಿಂದ ಕಾಣೆಯಾಗಿದ್ದಾರೆ. ಬರೇಲಿಯ ಇಜ್ಜತ್‌ನಗರದ ತ್ರಿಲೋಕ ವಿಹಾರದ ನಿವಾಸಿಯಾಗಿರುವ ಪುಷ್ಪೇಂದ್ರ ಗಂಗ್ವಾರ್ ಕುಟುಂಬಸ್ಥರ ಸಂಪರ್ಕಕ್ಕೂ ಸಿಗುತ್ತಿಲ್ಲ. ಈ ಹಿನ್ನೆಲೆ ಕುಟುಂಬಸ್ಥರು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ಆರಂಭಿಸಿದ್ದು, ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಪುಷ್ಪೇಂದ್ರ ಪತ್ನಿ, ಜಯಶ್ರೀ ಗಂಗ್ವಾರ್ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಪ್ಲೀಸ್.. ಜಾನು ನೀವು ಎಲ್ಲೇ ಇದ್ದರೂ ಮನೆಗೆ ಹಿಂದಿರುಗಿ ಬನ್ನಿ. ನಾನು ಮತ್ತು ನಿಮ್ಮ ಮಕ್ಕಳು ಮನೆಯಲ್ಲಿ ನಿಮಗಾಗಿ ಕಾಯುತ್ತಿದ್ದೇವೆ. ನಿಮ್ಮ ಮಕ್ಕಳಿಗೆ ನಾನು ಏನು ಉತ್ತರ ನೀಡಲಿ. ನೀವು ಎಲ್ಲಿ ಹೋಗಿದ್ದೀರಿ? ಒಂಟಿ ಮಹಿಳೆ ಈ ಸಮಾಜದಲ್ಲಿ ಜೀವನ ನಡೆಸೋದು ಎಷ್ಟು ಕಷ್ಟ ಎಂದು ನೀವೇ ಹೇಳುತ್ತಿದ್ದೀರಿ. ಈಗ ನೀವು ನನ್ನನ್ನು ಒಂಟಿಯನ್ನಾಗಿ ಮಾಡಿ ಎಲ್ಲಿ ಹೋಗಿದ್ದೀರಿ? ಪ್ಲೀಸ್ ಮನೆಗೆ ವಾಪಸ್ ಬನ್ನಿ ಎಂದು ಕಣ್ಣೀರು ಹಾಕುತ್ತಾ ಜಯಶ್ರೀ ಕಣ್ಣೀರು ಹಾಕಿದ್ದಾರೆ.
https://x.com/Info_4Education/status/1910263020665856488
https://www.newsics.com/2025/04/16/the-skydiver-who-became-a-millionaire-overnight/